Share Market Closing: ಷೇರು ಮಾರುಕಟ್ಟೆಯ ಕುಸಿತಕ್ಕೆ ಬಿತ್ತು ಬ್ರೇಕ್, 1000 ಅಂಕಗಳ ಏರಿಕೆಯೊಂದಿಗೆ ಮುಚ್ಚಿದ ಸೆನ್ಸೆಕ್ಸ್

Share Market Update: ಸೆನ್ಸೆಕ್ಸ್ 1017 ಅಂಕಗಳ ಏರಿಕೆಯೊಂದಿಗೆ 57,426 ಅಂಕಗಳಿಗೆ ಮತ್ತು ರಾಷ್ಟ್ರೀಯ ಶೇರುಪೇಟೆಯ ಸೂಚ್ಯಂಕ ನಿಫ್ಟಿ 276 ಅಂಕಗಳ ಜಿಗಿತದೊಂದಿಗೆ 17,094 ಅಂಕಗಳಿಗೆ ತಲುಪಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿವೆ.  

Written by - Nitin Tabib | Last Updated : Sep 30, 2022, 05:02 PM IST
  • ಮಾರುಕಟ್ಟೆಯಲ್ಲಿರುವ ಒಟ್ಟು 3538 ಷೇರುಗಳ ಪೈಕಿ 2327 ಷೇರುಗಳು ಹಸಿರು ನಿಶಾನೆಯಲ್ಲಿ ವಹಿವಾಟನ್ನು ಕೊನೆಗೊಳಿಸಿದರೆ,
  • 1112 ಷೇರುಗಳು ಕುಸಿತ ಕಂಡಿವೆ.
  • 99 ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
Share Market Closing: ಷೇರು ಮಾರುಕಟ್ಟೆಯ ಕುಸಿತಕ್ಕೆ ಬಿತ್ತು ಬ್ರೇಕ್, 1000 ಅಂಕಗಳ ಏರಿಕೆಯೊಂದಿಗೆ ಮುಚ್ಚಿದ ಸೆನ್ಸೆಕ್ಸ್ title=
Stock Market Update

Stock Market Closing On 30th September 2022: ಭಾರತೀಯ ಷೇರುಪೇಟೆಯಲ್ಲಿ ಕಳೆದ ಏಳು ದಿನಗಳಿಂದ ಮುಂದುವರೆದಿದ್ದ ಕುಸಿತಕ್ಕೆ ಇಂದು ಬ್ರೇಕ್ ಬಿದ್ದಿದೆ. ಆರ್‌ಬಿಐ ರೆಪೊ ದರದಲ್ಲಿ 50 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳದ ಹೊರತಾಗಿಯೂ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಖರೀದಿಯು ಮರುಕಳಿಸಿದೆ, ಈ ಕಾರಣದಿಂದಾಗಿ ಷೇರು ಮಾರುಕಟ್ಟೆಯು ಭರಾಟೆಯಲ್ಲಿ ತನ್ನ ದಿನದ ವಹಿವಾಟು ಅಂತ್ಯಗೊಳಿಸಿದೆ. ಇಂದಿನ ವಹಿವಾಟಿನ ಅಂತ್ಯಕ್ಕೆ ಮುಂಬೈ ಶೇರುಪೇಟೆಯ ಸಂವೇದಿ ಸೂಚ್ಯಂಕ 1017 ಅಂಕಗಳ ಏರಿಕೆಯೊಂದಿಗೆ 57,426 ಅಂಕಗಳಿಗೆ ತಲುಪಿದ್ದು, ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸೂಚ್ಯಂಕ ಕೂಡ 276 ಅಂಕಗಳ ಜಿಗಿತದೊಂದಿಗೆ 17,094 ಅಂಕಗಳಿಗೆ ತಲುಪಿದೆ.

ರೆಪೋ ದರ ಏರಿಕೆಯ ಶಾಕ್ ನಿಂದ ಮಾರುಕಟ್ಟೆ ಚೇತರಿಸಿಕೊಂಡಿರುವುದು ಮಾರುಕಟ್ಟೆಯ ಪಾಲಿಗೆ ದೊಡ್ಡ ಸಮಾಧಾನ ತಂದಿದೆ ಮತ್ತು ಇದರ ನಂತರ, ಬ್ಯಾಂಕಿಂಗ್ ಷೇರುಗಳಲ್ಲಿನ ಖರೀದಿ ಮಾರುಕಟ್ಟೆಯ ಉತ್ಸಾಹವನ್ನು ಹೆಚ್ಚಿಸಿದೆ. ನಿಫ್ಟಿ ಬ್ಯಾಂಕ್ 984 ಪಾಯಿಂಟ್‌ಗಳ ಏರಿಕೆಯೊಂದಿಗೆ 38,631 ಪಾಯಿಂಟ್‌ಗಳಿಗೆ ಅಂದರೆ ಶೇ. 2.61 ರಷ್ಟು ಏರಿಕೆಯಾಗಿದೆ. ಐಟಿ, ಆಟೋ, ಫಾರ್ಮಾ, ಲೋಹ, ಇಂಧನ, ಗ್ರಾಹಕ ಬಳಕೆ ವಸ್ತುಗಳು ಮತ್ತು ತೈಲ ಮತ್ತು ಅನಿಲ ವಲಯದ ಷೇರುಗಳೂ ಏರಿಕೆ ಕಂಡಿವೆ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಕೂಡ ಭಾರಾತೆಯೊಂದಿಗೆ ಮುಕ್ತಾಯ ಕಂಡಿವೆ. ನಿಫ್ಟಿಯ 50 ಷೇರುಗಳ ಪೈಕಿ 41 ಷೇರುಗಳು ಹಸಿರು ನಿಶಾನೆಯಲ್ಲಿ ಮತ್ತು 9 ಷೇರುಗಳು ಕೆಂಪು ನಿಶಾನೆಯಲ್ಲಿ ಮುಕ್ತಾಯ ಕಂಡಿವೆ. 30 ಸೆನ್ಸೆಕ್ಸ್ ಷೇರುಗಳ ಪೈಕಿ 25 ಷೇರುಗಳಲ್ಲಿ ಖರೀದಿ ಜೋರಾಗಿತ್ತು ಮತ್ತು ಅವು ತೀವ್ರ ಏರಿಕೆಯೊಂದಿಗೆ ಅಂತ್ಯಕಂಡಿವೆ, 5 ಷೇರುಗಳು ಕೆಂಪು ನಿಶಾನೆಯಲ್ಲಿ ವಹಿವಾಟನ್ನು ಅಂತ್ಯಗೊಳಿಸಿವೆ.

ಮಾರುಕಟ್ಟೆಯಲ್ಲಿರುವ ಒಟ್ಟು 3538 ಷೇರುಗಳ ಪೈಕಿ 2327 ಷೇರುಗಳು ಹಸಿರು ನಿಶಾನೆಯಲ್ಲಿ ವಹಿವಾಟನ್ನು ಕೊನೆಗೊಳಿಸಿದರೆ, 1112 ಷೇರುಗಳು ಕುಸಿತ ಕಂಡಿವೆ. 99 ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 241 ಷೇರುಗಳು ಮೇಲಿನ ಸರ್ಕ್ಯೂಟ್ ಅನ್ನು ಮುಚ್ಚಿದರೆ, 162 ಷೇರುಗಳು ಲೋವರ್ ಸರ್ಕ್ಯೂಟ್‌ ನೊಂದಿಗೆ ವಹಿವಾಟನ್ನು ಕೊನೆಗೊಳಿಸಿವೆ. ಒಟ್ಟಾರೆ ಹೇಳುವುದಾದರೆ, ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಷೇರುಗಳ ಮಾರುಕಟ್ಟೆ ಮೌಲ್ಯ 271.86 ಲಕ್ಷ ಕೋಟಿ ರೂ.ತಲುಪಿದೆ.

ಇದನ್ನೂ ಓದಿ-Share Market Update: ಸಾಲ ದುಬಾರಿಯಾದರೂ ಕೂಡ ಮಾರುಕಟ್ಟೆಯಲ್ಲಿ ಭಾರಿ ಉತ್ಸಾಹ, 300 ಅಂಕಗಳಿಂದ ಏರಿಕೆ ಕಂಡ ನಿಫ್ಟಿ

ಏರಿಕೆ ಕಂಡ ಷೇರುಗಳು
ಇಂದು ಏರಿಕೆಯಾದ ಷೇರುಗಳನ್ನು ಗಮನಿಸುವುದಾದರೆ, ಭಾರ್ತಿ ಏರ್‌ಟೆಲ್ ಶೇ.4.49, ಇಂಡಸ್‌ಇಂಡ್ ಬ್ಯಾಂಕ್ ಶೇ. 3.78, ಬಜಾಜ್ ಫೈನಾನ್ಸ್ ಶೇ. 3.28, ಟೈಟಾನ್ ಕಂಪನಿ ಶೇ.2.93, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ. 2.93, ಕೋಟಕ್ ಮಹೀಂದ್ರ ಶೇ. 2.69, ಬಜಾಜ್ ಫಿನ್‌ಸರ್ವ್ ಶೇ. 2.63, ಟಾಟಾ ಸ್ಟೀಲ್ ಶೇ. 2.53 ರಷ್ಟು ತ್ವರಿತ ಏರಿಕೆಯೊಂದಿಗೆ ಅಂತ್ಯ ಕಂಡಿವೆ.

ಇದನ್ನೂ ಓದಿ-RBI Repo Rate Hike: ಸತತ ನಾಲ್ಕನೇ ಬಾರಿಗೆ ರೆಪೋ ರೇಟ್ ಶೇ.0.50 ರಷ್ಟು ಹೆಚ್ಚಿಸಿದ RBI

ಕುಸಿತ ಕಂಡ ಷೇರುಗಳು
ಕುಸಿತ ಕಂಡ ಷೇರುಗಳ ಪೈಕಿ ಏಷ್ಯನ್ ಪೇಂಟ್ಸ್ ಕೂಡ ಇಂದು ಕುಸಿತ ಕಂಡಿದೆ. ಅದು ಶೇ.1.26ರಷ್ಟು ಇಳಿಕೆ ಕಂಡು 3342 ರೂ.ಗೆ ತಲುಪಿದೆ. ಡಾ.ರೆಡ್ಡಿ ಶೇ.0.61, ಐಟಿಸಿ ಶೇ.0.32, ಟೆಕ್ ಮಹೀಂದ್ರ ಶೇ.0.23, ಎಚ್‌ಯುಎಲ್ ಶೇ.0.18ರಷ್ಟು ಕುಸಿತವನ್ನು ಕಂಡಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News