Honda Amaze 2021 ಭಾರತದಲ್ಲಿ ಬಿಡುಗಡೆ, ಆರಂಭಿಕ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ಡೀಟೇಲ್ಸ್

Honda Amaze 2021 Launch: ಜಪಾನಿನ ಕಾರು ಕಂಪನಿ ಹೋಂಡಾ ಕಾರ್ಸ್ ತನ್ನ ಸೆಡಾನ್ ಕಾರು (Sedan Car) ಹೋಂಡಾ ಅಮೇಜ್ ನ 2021 ಮಾಡೆಲ್   Honda Amaze 2021 ಅನ್ನು ಭಾರತೀಯ (Honda Cars India) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Written by - Nitin Tabib | Last Updated : Aug 18, 2021, 01:30 PM IST
  • Honda Amaze 2021 ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ Honda,
  • ಇದರ ಆರಂಭಿಕ ಎಕ್ಸ್ ಶೋರೂಂ ಬೆಲೆ (Honda Amaze 2021 Price) ರೂ 6.32 ಲಕ್ಷ ರೂ.
  • ಇದರ ಉನ್ನತ ರೂಪಾಂತರದ ಎಕ್ಸ್ ಶೋರೂಂ ಬೆಲೆ 11.15 ಲಕ್ಷ ರೂ. ನಿಗದಿಪಡಿಸಲಾಗಿದೆ.
Honda Amaze 2021 ಭಾರತದಲ್ಲಿ ಬಿಡುಗಡೆ, ಆರಂಭಿಕ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ಡೀಟೇಲ್ಸ್  title=
Honda Amaze 2021 Launch (File Photo)

Honda Amaze 2021 Launch: ಜಪಾನಿನ ಕಾರು ಕಂಪನಿ ಹೋಂಡಾ ಕಾರ್ಸ್ ತನ್ನ ಸೆಡಾನ್ ಕಾರು (Sedan Car) ಹೋಂಡಾ ಅಮೇಜ್ ನ 2021 ಮಾಡೆಲ್   Honda Amaze 2021 ಅನ್ನು ಭಾರತೀಯ (Honda Cars India) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಆರಂಭಿಕ ಎಕ್ಸ್ ಶೋರೂಂ ಬೆಲೆ (Honda Amaze 2021 Price) ರೂ 6.32 ಲಕ್ಷ ರೂ. ಇದರ ಉನ್ನತ ರೂಪಾಂತರದ ಎಕ್ಸ್ ಶೋರೂಂ ಬೆಲೆ 11.15 ಲಕ್ಷ ರೂ. ನಿಗದಿಪಡಿಸಲಾಗಿದೆ. ಈ ಕಾರಿನ ಬುಕ್ಕಿಂಗ್ ಕೂಡ ಕಂಪನಿ ಆರಂಭಿಸಿದ್ದು, ಒಟ್ಟು 5 ಬಣ್ಣದ ವೇರಿಯಂಟ್ ಗಳಲ್ಲಿ ಇದು ಮಾರುಕಟ್ಟೆಯಲ್ಲಿ ಲಭ್ಯ ವಿರಲಿದೆ. 

ಪೆಟ್ರೋಲ್ ಹಾಗೂ ಡಿಸೇಲ್ ಇಂಜಿನ್ ಗಳಲ್ಲಿ ಈ ಕಾರು ಲಭ್ಯ
ಹೊಸ Honda Amaze 2021 ಕಾರನ್ನು ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರನ್ನು (Sedan Car) ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ (ಮ್ಯಾನುಯಲ್) - New AMAZE VX, New AMAZE S और New AMAZE E. ಪೆಟ್ರೋಲ್ ರೂಪಾಂತರವು 1.2 ಲೀಟರ್ i-VTEC ಎಂಜಿನ್ ಹೊಂದಿದೆ. ಇದರ ಮೈಲೇಜ್ ಪ್ರತಿ ಕಿಲೋಮೀಟರಿಗೆ 18.6 ಕಿಲೋಮೀಟರ್. ಡೀಸೆಲ್ ರೂಪಾಂತರವು 1.5-ಲೀಟರ್ i-DTEC ಎಂಜಿನ್ ಹೊಂದಿದೆ. ಇದರ ಮೈಲೇಜ್ ಪ್ರತಿ ಕಿಲೋಮೀಟರಿಗೆ 24.7 ಕಿಲೋಮೀಟರ್.

ಇದನ್ನೂ ಓದಿ-Best Selling Maruti Car - Alto ಅಲ್ಲ Marutiಯ ಈ ಕಾರಿಗೆ ಜನರ ಹೆಚ್ಚಿನ ಮನ್ನಣೆ, ಮೈಲೇಜ್ 32 ಕಿ.ಮೀ !

ಐದು ಬಣ್ಣಗಳ ಆಯ್ಕೆ ಸಿಗಲಿದೆ
Honda Amaze 2021 ಕಾರು ಪ್ಲಾಟಿನಂ ವೈಟ್ ಪರ್ಲ್, ರೆಡಿಯಂಟ್ ರೆಡ್, ಮಿಟಿಯೋರೈಡ್ ಗ್ರೇ, ಲುನಾರ್ ಸಿಲ್ವರ್ ಹಾಗೂ ಗೋಲ್ಡನ್ ಬ್ರೌನ್ ನಲ್ಲಿ ಪ್ರಸ್ತುತಪಡಿಸಲಾಗಿದೆ.

ಈ ಕಾರ್ ಮೇಲೆ ಅಧ್ಬುತ ಕೊಡುಗೆ
ಕಂಪನಿಯು ಹೊಸ ಹೋಂಡಾ ಅಮೇಜ್ 2021 ಮಾದರಿಯಲ್ಲಿ ಮೂರು ವರ್ಷಗಳ ಅನಿಯಮಿತ ಕಿಲೋಮೀಟರ್ ವಾರಂಟಿಯನ್ನು ನೀಡುತ್ತಿದೆ. ಇದಲ್ಲದೇ, ನಿಮಗೆ ರೋಡ್ ಸೈಟ್ ಅಸಿಸ್ಟೆನ್ಸ್ ಕೂಡ ನೀಡಲಾಗುತ್ತಿದ್ದು, ಇದರಲ್ಲಿ ನೀವು ಟೋಯಿಂಗ್, ಬ್ಯಾಟರಿ ಜಂಪ್ ಸ್ಟಾರ್ಟ್, ಕೀ ಲಾಕ್ ಔಟ್, ಇಂಧನ ವಿತರಣೆ ಮತ್ತು ಟ್ಯಾಕ್ಸಿ ಸಹಾಯದಂತಹ ಸೌಲಭ್ಯಗಳನ್ನು ಪಡೆಯಬಹುದು.

ಇದನ್ನೂ ಓದಿ-Hyundai Casper: ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಅತ್ಯಂತ ಅಗ್ಗದ ಬೆಲೆಯ ಮೈಕ್ರೋ SUV, ಬೆಲೆ ಎಷ್ಟಿರಲಿದೆ ಗೊತ್ತಾ?

ಈ ಅದ್ಭುತ ವೈಶಿಷ್ಟ್ಯಗಳು ಸಿಗಲಿವೆ (Honda Amaze 2021 Features)
ಎಲ್ಇಡಿ ಪೊಸಿಶನ್ಸ್ ಹ್ಯಾಲೊಜೆನ್ ಹೆಡ್ ಲ್ಯಾಂಪ್ಸ್, ಎಲ್ಇಡಿ ರಿಯರ್ ಕಾಂಬಿನೇಷನ್ ಲ್ಯಾಂಪ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್ ಆನ್ ಡೋರ್ ಮಿರರ್ಸ್, ಬಂಪರ್ ವಿತ್ ಆರ್ ಆರ್ ರಿಫ್ಲೆಕ್ಟರ್, ಕ್ರೋಮ್ ಇನ್ಸೈಡ್ ಡೋರ್ ಹ್ಯಾಂಡಲ್ಸ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ಟಿಲ್ಟ್ ಸ್ಟೀರಿಂಗ್ ಈ ಕಾರು ಒಳಗೊಂಡಿರಲಿದೆ.

ಇದನ್ನೂ ಓದಿ-ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಚಿಂತಿಸಬೇಕಿಲ್ಲ Maruti ಹೊರ ತರುತ್ತಿದೆ Dzire CNG Car

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News