Budget 2024: ದುಡಿಯುವ ವರ್ಗಕ್ಕೆ ಸಿಗಲಿದೆಯಾ ಶುಭ ಸುದ್ದಿ! ಹಳೆ ಅಥವಾ ಹೊಸ ತೆರಿಗೆ ಪದ್ಧತಿ ಯಾವುದರಲ್ಲಿ ಆಗಲಿದೆ ಬದಲಾವಣೆ

Budget 2024:  ಹಳೆಯ ತೆರಿಗೆ ಪದ್ಧತಿಯು ಹೆಚ್ಚು ಪ್ರಯೋಜನಕಾರಿಯೇ ಅಥವಾ ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳುವುದು ಉತ್ತಮವೇ ಎಂಬುದನ್ನು ನಾವಿಲ್ಲಿ ತಿಳಿಸಲಿದ್ದೇವೆ. 

Written by - Ranjitha R K | Last Updated : Feb 1, 2024, 10:21 AM IST
  • ಇಂದು ದೇಶದ ಬಜೆಟ್ ಮಂಡನೆಯಾಗಲಿದೆ
  • ಎಲ್ಲರ ದೃಷ್ಟಿ ಈಗ ಆದಾಯ ತೆರಿಗೆಯ ಮೇಲೆಯೇ ನೆಟ್ಟಿದೆ.
  • ಪರಿಹಾರ ಸಿಗಲಿದೆಯೇ ಎನ್ನುವ ನಿರೀಕ್ಷೆಯಲ್ಲಿದೆ ಸಾಮಾನ್ಯ ಜನತೆ.
Budget 2024: ದುಡಿಯುವ ವರ್ಗಕ್ಕೆ ಸಿಗಲಿದೆಯಾ ಶುಭ ಸುದ್ದಿ! ಹಳೆ ಅಥವಾ ಹೊಸ ತೆರಿಗೆ ಪದ್ಧತಿ ಯಾವುದರಲ್ಲಿ ಆಗಲಿದೆ ಬದಲಾವಣೆ title=

Budget 2024: ಇಂದು ದೇಶದ ಬಜೆಟ್ ಮಂಡನೆಯಾಗಲಿದೆ. ಎಲ್ಲರ ದೃಷ್ಟಿ ಈಗ ಆದಾಯ ತೆರಿಗೆಯ ಮೇಲೆಯೇ ನೆಟ್ಟಿದೆ. ಈ ಬಾರಿ ಹಣಕಾಸು ಸಚಿವರು ಪರಿಹಾರ ನೀಡಲಿದ್ದಾರೆಯೇ ಎನ್ನುವ ನಿರೀಕ್ಷೆಯಲ್ಲಿದೆ ಸಾಮಾನ್ಯ ಜನತೆ. ಸರ್ಕಾರವು 2020 ರ ಬಜೆಟ್‌ನಲ್ಲಿ ಹೊಸ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಿತ್ತು. ಹೊಸ ತೆರಿಗೆ ವ್ಯವಸ್ಥೆಯಲ್ಲಿ, ತೆರಿಗೆದಾರರಿಗೆ ರಿಯಾಯಿತಿ ದರದಲ್ಲಿ ತೆರಿಗೆಯನ್ನು ನೀಡಲಾಯಿತು. 

ಅಂತಹ ಪರಿಸ್ಥಿತಿಯಲ್ಲಿ, ಅವರು ಯಾವ ತೆರಿಗೆ ವ್ಯವಸ್ಥೆಯನ್ನು ಆರಿಸಿಕೊಳ್ಳಬೇಕು ಎಂಬ ದೊಡ್ಡ ಪ್ರಶ್ನೆ ಅನೇಕ ಜನರ ಮನದಲ್ಲಿ ಉದ್ಭವಿಸುವಂತಾಯಿತು. ಹಳೆಯ ತೆರಿಗೆ ಪದ್ಧತಿಯು ಹೆಚ್ಚು ಪ್ರಯೋಜನಕಾರಿಯೇ ಅಥವಾ ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳುವುದು ಉತ್ತಮವೇ ಎಂಬುದನ್ನು ನಾವಿಲ್ಲಿ ತಿಳಿಸಲಿದ್ದೇವೆ. ಇದಲ್ಲದೇ ಇಂದು ಹಣಕಾಸು ಸಚಿವರು ಯಾವ ತೆರಿಗೆ ಪದ್ಧತಿಯಲ್ಲಿ ಬದಲಾವಣೆಗಳನ್ನು ತರುವ ಸಾಧ್ಯತೆ ಇದೆ ಎನ್ನುವುದನ್ನು ಕೂಡಾ ನೋಡೋಣ. 

ಇದನ್ನೂ ಓದಿ : Union Budget 2024: ಬಜೆಟ್ ಮಂಡನೆಗೂ ಮುನ್ನ ಒಂದು ಗುಡ್ ನ್ಯೂಸ್, ಐಫೋನ್ ನಂತಹ ಸ್ಮಾರ್ಟ್ ಫೋನ್ ಗಳು ಇನ್ಮುಂದೆ ಅಗ್ಗದ ದರದಲ್ಲಿ ಸಿಗಲಿವೆ!

ಹಳೆಯ ತೆರಿಗೆ ಪದ್ಧತಿಯಲ್ಲಿ ಹಲವು ವಿನಾಯಿತಿಗಳು ಲಭ್ಯ : 
ಯಾವುದೇ ತೆರಿಗೆದಾರರು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡರೆ, ಹಳೆಯ ತೆರಿಗೆ ಪದ್ಧತಿಯಲ್ಲಿ ಲಭ್ಯವಿರುವ ವಿನಾಯಿತಿಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಳೆಯ ತೆರಿಗೆ ಪದ್ಧತಿಯಲ್ಲಿ, ಗ್ರಾಹಕರು HRA, LTA, 80C, 80D ಸೇರಿದಂತೆ ಹಲವು ರೀತಿಯ ವಿನಾಯಿತಿಗಳನ್ನು ಪಡೆಯುತ್ತಾರೆ. ಪ್ರಸ್ತುತ, ಹೊಸ ತೆರಿಗೆ ಪದ್ಧತಿಯ ಗ್ರಾಹಕರನ್ನು ಆಕರ್ಷಿಸಲು ಸರ್ಕಾರವು 2023 ರಲ್ಲಿ ಅನೇಕ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆಗಳನ್ನು ಮಾಡಿದೆ. 

2023ರ ಮೊದಲು 5 ಲಕ್ಷದವರೆಗೆ ಮಾತ್ರ ವಿನಾಯಿತಿ ಇತ್ತು :
ಹೊಸ ತೆರಿಗೆ ಪದ್ಧತಿಯಲ್ಲಿ, 2023ರ ಮೊದಲು, ವಾರ್ಷಿಕ ಆದಾಯ 5 ಲಕ್ಷ ರೂ. ಆದಾಯ ಇರುವ ಜನರು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿರಲಿಲ್ಲ. ಕಳೆದ ವರ್ಷ ಅಂದರೆ 2023 ರಲ್ಲಿ ಸರ್ಕಾರವು ಈ ಮಿತಿಯನ್ನು 7 ಲಕ್ಷಕ್ಕೆ ಹೆಚ್ಚಿಸಿತ್ತು. ಈಗ ಹೊಸ ತೆರಿಗೆ ಪದ್ಧತಿಯಲ್ಲಿ ಗ್ರಾಹಕರು 7 ಲಕ್ಷದವರೆಗೆ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯುತ್ತಿದ್ದಾರೆ. 

ಇದನ್ನೂ ಓದಿ : ಪೇಟಿಎಂ ವಿರುದ್ಧ ಆರ್‌ಬಿ‌ಐ ಕ್ರಮ: ಹೊಸ ಗ್ರಾಹಕರ ಸೇರ್ಪಡೆಗೆ ನಿಷೇಧ

50,000 ರೂ.ವರೆಗೆ ಸ್ಟ್ಯಾಂಡರ್ಡ್ ಡಿಡಕ್ಶನ್ :  
ಇದಲ್ಲದೆ, ಗ್ರಾಹಕರು ಹೊಸ ತೆರಿಗೆ ಪದ್ಧತಿಯಲ್ಲಿ  50,000 ರೂ.ವರೆಗಿನ  ಸ್ಟ್ಯಾಂಡರ್ಡ್ ಡಿಡಕ್ಶನ್ ಪಡೆಯುತ್ತಿದ್ದಾರೆ. 2023 ರಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿ ಸರ್ಕಾರವು  ಈ ಮೊತ್ತವನ್ನು  ಹೆಚ್ಚಿಸಿದೆ. 

ಸರ್ಕಾರವು 2023 ರಲ್ಲಿ ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆಗಳನ್ನು ಮಾಡಿದೆ-
>> ರೂ 3 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ಇಲ್ಲ
>> ರೂ 3 ಲಕ್ಷದಿಂದ ರೂ 6 ಲಕ್ಷದವರೆಗೆ ಶೇಕಡ 5
>> ರೂ 6 ಲಕ್ಷದಿಂದ ರೂ 9 ಲಕ್ಷದವರೆಗೆ ಶೇಕಡ 10
>> ರೂ 9 ಲಕ್ಷದಿಂದ ರೂ 12 ಲಕ್ಷದ ನಡುವೆ ಶೇಕಡ 15
> > ರೂ 12-15 ಲಕ್ಷದಲ್ಲಿ 20%
>> ರೂ 15 ಲಕ್ಷದಲ್ಲಿ 30%

ಹಳೆಯ ತೆರಿಗೆ ಪದ್ಧತಿ ಏಕೆ ಜನಪ್ರಿಯ : 
ಹೊಸ ತೆರಿಗೆ ಪದ್ಧತಿಯನ್ನು ದೇಶಾದ್ಯಂತ ಜಾರಿಗೆ ತರುವ ಮೊದಲು, ಹಳೆಯ ತೆರಿಗೆ ಪದ್ಧತಿ ಮಾತ್ರ ಇತ್ತು. ಅದರ ಅಡಿಯಲ್ಲಿ ತೆರಿಗೆದಾರರು HRA ಮತ್ತು LTA ಸೇರಿದಂತೆ 70 ಕ್ಕಿಂತ ಹೆಚ್ಚು ತೆರಿಗೆ ವಿನಾಯಿತಿಗಳನ್ನು ಪಡೆಯುತ್ತಾರೆ. ಇದು ನಿಮ್ಮ ಆದಾಯ ತೆರಿಗೆಯನ್ನು ಕಡಿಮೆ ಮಾಡುತ್ತದೆ. ಈ ಎಲ್ಲಾ ರಿಯಾಯಿತಿಗಳ ಲಾಭ ಪಡೆಯುವ ತೆರಿಗೆದಾರರು ಕಡಿಮೆ ತೆರಿಗೆ ಪಾವತಿಸಬೇಕಾಗುತ್ತದೆ. ಹಳೆಯ ತೆರಿಗೆ ಪದ್ಧತಿಯ ಅತ್ಯಂತ ಆದ್ಯತೆಯ ವಿಭಾಗವೆಂದರೆ ಸೆಕ್ಷನ್ 80 ಸಿ. 80C ಅಡಿಯಲ್ಲಿ, ತೆರಿಗೆದಾರರು 1.5 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯುತ್ತಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News