10 ಮತ್ತು 12ನೇ ತರಗತಿಗೆ CBSE Sample Paper 2025 ಬಿಡುಗಡೆ :ಡೌನ್ ಲೋಡ್ ಮಾಡುವ ಲಿಂಕ್ ಇಲ್ಲಿದೆ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 9ರಿಂದ 12 ನೇ ತರಗತಿಗಳಿಗೆ ಲೈಫ್ ಸ್ಕಿಲ್ ವಿಷಯಗಳಿಗಾಗಿ 2024-25 ರ ಮಾದರಿ ಪೇಪರ್‌ಗಳನ್ನು ಬಿಡುಗಡೆ ಮಾಡಿದೆ  

Written by - Ranjitha R K | Last Updated : Sep 2, 2024, 05:44 PM IST
  • 9 ರಿಂದ 12 ನೇ ತರಗತಿಗಳಿಗೆ ಲೈಫ್ ಸ್ಕಿಲ್ ವಿಷಯಗಳಿಗಾಗಿ 2024-25 ರ ಮಾದರಿ ಪೇಪರ್‌
  • ಸ್ಯಾಂಪಲ್ ಪೇಪರ್ ಬಿಡುಗಡೆ ಮಾಡಿದ ಸಿಬಿಎಸ್ ಇ
  • ಈ ಲಿಂಕ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಿ
 10 ಮತ್ತು 12ನೇ ತರಗತಿಗೆ CBSE Sample Paper 2025 ಬಿಡುಗಡೆ :ಡೌನ್ ಲೋಡ್ ಮಾಡುವ ಲಿಂಕ್ ಇಲ್ಲಿದೆ  title=

CBSE Sample Papers 2025 : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 9ರಿಂದ 12 ನೇ ತರಗತಿಗಳಿಗೆ ಲೈಫ್ ಸ್ಕಿಲ್ ವಿಷಯಗಳಿಗಾಗಿ 2024-25 ರ ಮಾದರಿ ಪೇಪರ್‌ಗಳನ್ನು ಬಿಡುಗಡೆ ಮಾಡಿದೆ.2025 ರಲ್ಲಿ CBSE ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ cbseacademic.nic.inಗೆ ಭೇಟಿ ನೀಡುವ ಮೂಲಕ ಮಾದರಿ ಪೇಪರ್‌ಗಳನ್ನು  ಡೌನ್ ಲೋಡ್ ಮಾಡಿಕೊಳ್ಳಬಹುದು. 
 
CBSE ಮಾದರಿ ಪೇಪರ್ಸ್ 2025: 
೧.CBSEಯ ಅಧಿಕೃತ ವೆಬ್‌ಸೈಟ್‌ cbseacademic.nic.inಗೆ ಭೇಟಿ ನೀಡಿ. 
೨.ಮುಖಪುಟದಲ್ಲಿ "CBSE Lifeskill " ವಿಭಾಗದ ಮೇಲೆ ಕ್ಲಿಕ್ ಮಾಡಿ
೩. "Sample papers" ಲಿಂಕ್ ಅನ್ನು ಆಯ್ಕೆಮಾಡಿ
4. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿ
5. ಆಫ್‌ಲೈನ್‌ನಲ್ಲಿ ಅಧ್ಯಯನ ಮಾಡಲು ಬಯಸುವುದಾದರೆ ಪೇಪರ್‌ಗಳನ್ನು  ಪ್ರಿಂಟ್ ಮಾಡಿಕೊಳ್ಳಿ. 

ಇದನ್ನೂ ಓದಿ : ಕೆಪಿಎಸ್'ಸಿ ಪರೀಕ್ಷೆಯಲ್ಲಿ ಘೋರ ಲೋಪ: ಮರುಪರೀಕ್ಷೆ ನಡೆಸಲು ಸರ್ಕಾರ ಕೈಗೊಂಡ ನಿರ್ಧಾರ ಅತ್ಯಂತ ಸ್ವಾಗತಾರ್ಹ

ರಿಟೇಲ್ ,ಇನ್ಫರ್ಮೇಷನ್, ವೆಬ್ ಅಪ್ಲಿಕೇಶನ್, ಫೈನಾನ್ಸಿಯಲ್ ಮಾರ್ಕೆಟ್ ಮ್ಯಾನೇಜ್ಮೆಂಟ್,  ಟುರಿಸಂ, ಬ್ಯೂಟಿ ಅಂಡ್ ವೆಲ್ನೆಸ್ಸ್, ಅಗ್ರಿಕಲ್ಚರ್, ಫ್ರಂಟ್ ಆಫೀಸ್ ಒಪೆರೆಶನ್, ಬ್ಯಾಂಕಿಂಗ್, ಮಾರ್ಕೆಟಿಂಗ್, ಹೆಲ್ತ್ ಕೇರ್, ಇನ್ಶ್ಯುರೆನ್ಸ್,   ಹಾಟಿಕಲ್ಚರ್, ಟೈಪೋಗ್ರಫಿ, ಕಂಪ್ಯೂಟರ್ ಅಪ್ಲಿಕೇಶನ್‌ನಂತಹ ವಿವಿಧ ವಿಷಯಗಳಿಗೆ CBSE ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಿದೆ. , ಜಿಯೋಸ್ಪೇಷಿಯಲ್ ಟೆಕ್ನಾಲಜಿ,ಎಲೆಕ್ಟ್ರಿಕಲ್ ಟೆಕ್ನಾಲಜಿ,ಎಲೆಕ್ಟ್ರಾನಿಕ್ಸ್ ಟೆಕ್ನಾಲಜಿ, ಮಲ್ಟಿಮೀಡಿಯಾ, ಟ್ಯಾಕ್ಸೇಶನ್, ಕಾಸ್ಟ್ ಅಕೌಂಟಿಂಗ್,ಆಫೀಸ್ ಪ್ರೊಸೀಜರ್ಸ್ ಮತ್ತು ಪ್ರಾಕ್ಟೀಸಸ್, ಮತ್ತು ಶಾರ್ಟ್‌ಹ್ಯಾಂಡ್ (ಇಂಗ್ಲಿಷ್) ಮುಂತಾದ ವಿಷಯಗಳಿಗೆ ಸ್ಯಾಂಪಲ್ ಪೇಪರ್ ಅನ್ನು ಬಿಡುಗಡೆ ಮಾಡಿದೆ. 

ಅಧಿಕೃತ ಅಧಿಸೂಚನೆ ಪ್ರಕಾರ "ಮಂಡಳಿಯ ಪರಿಷ್ಕೃತ ಅಫಿಲಿಯೇಶನ್ ಬೈ-ಲಾಸ್ ಪ್ರಕಾರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಕೌಶಲ್ಯ ವಿಷಯ(ಗಳು) ಸೇರಿದಂತೆ ಯಾವುದೇ ಹೆಚ್ಚುವರಿ ವಿಷಯ(ಗಳನ್ನು) ಪರಿಚಯಿಸಲು ಶಾಲೆಯು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗಿಲ್ಲ.ಶಾಲೆಯು OASIS ಫಾರ್ಮ್‌ನಲ್ಲಿ ವಿವರಗಳನ್ನು ತುಂಬಿ  ಅಗತ್ಯವಿರುವ ಮಾಹಿತಿಯನ್ನು ಒದಗಿಸಬೇಕು.

ಇದನ್ನೂ ಓದಿ : Konkan Railway Recruitment 2024:ಕೊಂಕಣ ರೈಲ್ವೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ : ಕರ್ನಾಟಕದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ

ಈ ವರ್ಷದ ಜೂನ್‌ನಲ್ಲಿ,CBSE ವಿವಿಧ ಕೌಶಲ್ಯ ವಿಷಯಗಳಿಗೆ ಪಠ್ಯಕ್ರಮ ಮತ್ತು ವಿಷಯಕ್ಕೆ ಪರಿಷ್ಕರಣೆಗಳನ್ನು ಘೋಷಿಸಿತ್ತು. ಇದು 2024-25 ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುತ್ತದೆ.ಈ ಬದಲಾವಣೆಗಳು 11 ನೇ ತರಗತಿಗೆ ವೆಬ್ ಅಪ್ಲಿಕೇಶನ್, 10 ನೇ ತರಗತಿಗೆ ಮಾಹಿತಿ ತಂತ್ರಜ್ಞಾನ ಮತ್ತು 9 ಮತ್ತು 11 ನೇ ತರಗತಿಗಳಿಗೆ ಕೃತಕ ಬುದ್ಧಿಮತ್ತೆಯಂತಹ ಕೋರ್ಸ್‌ಗಳ ಮೇಲೆ ಪರಿಣಾಮ ಬೀರುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News