GATE 2023 Schedule: ಗೇಟ್ 2023 ವೇಳಾಪಟ್ಟಿ ಬಿಡುಗಡೆ, ಆಗಸ್ಟ್ 30ರಂದು ಅರ್ಜಿ ಪ್ರಕ್ರಿಯೆ ಆರಂಭ, ಪರೀಕ್ಷೆ ಯಾವಾಗ?

GATE 2023: ಈ ಬಾರಿಯ ಗೇಟ್ ಪರೀಕ್ಷೆಯನ್ನು ಒಟ್ಟು 29 ವಿಷಯಗಳಿಗಾಗಿ ಆಯೋಜಿಸಲಾಗುತ್ತಿದೆ. ಈ ಪರೀಕ್ಷೆಗಳನ್ನು ಸಿಬಿಟಿ ಮೋಡ್ ನಲ್ಲಿ 4,5,11 ಮತ್ತು 12 ಫೆಬ್ರವರಿ 2023 ರಂದು ಒಟ್ಟು ಎರಡು ಶಿಫ್ಟ್ ಗಳಲ್ಲಿ ಆಯೋಜಿಸಲಾಗುತ್ತಿದೆ. ಗೇಟ್ 2023 ಪರೀಕ್ಷೆಗಳ ಎಲ್ಲಾ ಟೆಸ್ಟ್ ಪೇಪರ್ ಗಳು ಸಂಪೂರ್ಣ ಆಪ್ಷನಲ್ ಟೈಪ್ ಆಗಿರಲಿವೆ.  

Written by - Nitin Tabib | Last Updated : Jul 28, 2022, 03:53 PM IST
  • ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ 2023 (ಗೇಟ್ 2023) ಗಾಗಿ ಅರ್ಜಿ ಪ್ರಕ್ರಿಯೆಯು ಆಗಸ್ಟ್ 30 ರಿಂದ ಆರಂಭಗೊಳ್ಳಲಿದೆ.
  • GATE 2023 ಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು GATE IIT ಕಾನ್ಪುರದ ಅಧಿಕೃತ ವೆಬ್‌ಸೈಟ್ https://gate.iitk.ac.in/ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು
GATE 2023 Schedule: ಗೇಟ್ 2023 ವೇಳಾಪಟ್ಟಿ ಬಿಡುಗಡೆ, ಆಗಸ್ಟ್ 30ರಂದು ಅರ್ಜಿ ಪ್ರಕ್ರಿಯೆ ಆರಂಭ, ಪರೀಕ್ಷೆ ಯಾವಾಗ?  title=
Gate Exam 2023

GATE 2023: ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ 2023 (ಗೇಟ್ 2023) ಗಾಗಿ ಅರ್ಜಿ ಪ್ರಕ್ರಿಯೆಯು ಆಗಸ್ಟ್ 30 ರಿಂದ ಆರಂಭಗೊಳ್ಳಲಿದೆ. GATE 2023 ಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು GATE IIT ಕಾನ್ಪುರದ ಅಧಿಕೃತ ವೆಬ್‌ಸೈಟ್ https://gate.iitk.ac.in/ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. GATE 2023 ಕ್ಕಾಗಿ ಅಪ್ಲಿಕೇಶನ್ ಪೋರ್ಟಲ್ ಅನ್ನು ಸೆಪ್ಟೆಂಬರ್ 30 ರಂದು ಮುಚ್ಚಲಾಗುವುದು.

ಈ ದಿನ ಗೇಟ್ 2023 ಪರೀಕ್ಷೆಗಳು ನಡೆಯಲಿವೆ
ಗೇಟ್ ಪರೀಕ್ಷೆಯನ್ನು ಕಾನ್ಪುರ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಐಐಟಿ ಕಾನ್ಪುರ್) 4, 5, 11 ಮತ್ತು 12 ನೇ ಫೆಬ್ರವರಿ 2023 ರಂದು ನಡೆಯಲಿವೆ. GATE 2023 ರ ಪ್ರವೇಶ ಕಾರ್ಡ್‌ಗಳನ್ನು ಜನವರಿ 3 ರಂದು gate.iitk.ac.in ನಲ್ಲಿರುವ GATE IIT ಕಾನ್ಪುರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಈ ತಾಣಕ್ಕೆ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. GATE 2023 ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ವಿದ್ಯಾರ್ಥಿಗಳಿಗೆ ತಮ್ಮ ನೋಂದಣಿ ಸಂಖ್ಯೆಯ ಅಗತ್ಯ ಬೀಳಲಿದೆ.

GATE 2023 ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
1. ವಿದ್ಯಾರ್ಥಿಗಳು ಮೊದಲು gate.iitk.ac.in ನಲ್ಲಿರುವ GATE 2023 ರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
2. ನಂತರ, ಮುಖಪುಟಕ್ಕೆ ಭೇಟಿ ನೀಡಿ ಹೆಸರನ್ನು ನೋಂದಾಯಿಸಿ, ಲಾಗಿನ್ ಕ್ರೆಡೆಂನ್ಸಿಯಲ್ಸ್ ಪಡೆಯಬೇಕು.
3. ಈಗ ಲಾಗಿನ್ ಕ್ರೆಡೆಂನ್ಸಿಯಲ್ಸ್ ಗಳನ್ನು ಸಲ್ಲಿಸುವ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಪ್ರಾರಂಭಿಸಬೇಕು.
4. ಫಾರ್ಮ್ ಅನ್ನು ಭರ್ತಿ ಮಾಡುವಾಗ ಕೇಳಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
5. ಈಗ ಅಂತಿಮವಾಗಿ ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
6. ನೀವು ನಿಮ್ಮ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು ಅದರ ಪ್ರಿಂಟ್‌ಔಟ್ ಅನ್ನು ತೆಗೆದುಕೊಳ್ಳಬೇಕು ಮತ್ತು ಭವಿಷ್ಯಕ್ಕಾಗಿ ಅದನ್ನು ನಿಮ್ಮೊಂದಿಗೆ ಇರಿಸಿಕೊಳ್ಳಬೇಕು.

ಇದನ್ನೂ ಓದಿ-Vitamin B6 Pills Benefits: ಖಿನ್ನತೆ ಹಾಗೂ ಒತ್ತಡ ನಿವಾರಿಸಲು ಬಲು ಸಹಕಾರಿ ಈ ಮಾತ್ರೆಗಳು, ಅಧ್ಯಯನದಲ್ಲಿ ಅಂಶ ಬಹಿರಂಗ

ಸಿಬಿಟಿ ಮೋಡ್ ನಲ್ಲಿ ನಡೆಯಲಿದೆ GATE 2023
ಈ ವರ್ಷ ಒಟ್ಟು 29 ವಿಷಯ ಪತ್ರಿಕೆಗಳಿಗೆ ಗೇಟ್ ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನು ಫೆಬ್ರವರಿ 4, 5, 11 ಮತ್ತು 12, 2023 ರಂದು CBT ಮೋಡ್‌ನಲ್ಲಿ ಒಟ್ಟು ಎರಡು ಹಂತಗಳಲ್ಲಿ ನಡೆಸಲಾಗುತ್ತಿದೆ. GATE 2023 ಪರೀಕ್ಷೆಗಳ ಎಲ್ಲಾ ಪರೀಕ್ಷಾ ಪೇಪರ್‌ಗಳು ಸಂಪೂರ್ಣವಾಗಿ ಐಚ್ಛಿಕ ಪ್ರಕಾರದ್ದಾಗಿರುತ್ತವೆ.

ಇದನ್ನೂ ಓದಿ-Bitter Gourd: ಈ ಜನರು ಅಪ್ಪಿತಪ್ಪಿಯೂ ಕೂಡ ಹಾಗಲಕಾಯಿ ಸೇವಿಸಬಾರದು, ಆರೋಗ್ಯಕ್ಕೆ ಮಾರಕ

ಯಾರು ಅರ್ಜಿ ಸಲ್ಲಿಸಬಹುದು?
ಪ್ರಸ್ತುತ ಯಾವುದೇ ಪದವಿಪೂರ್ವ ಪದವಿ ಕಾರ್ಯಕ್ರಮದ ಮೂರನೇ ಅಥವಾ ಹೆಚ್ಚಿನ ವರ್ಷಗಳಲ್ಲಿ ಓದುತ್ತಿರುವ ಅಥವಾ ಎಂಜಿನಿಯರಿಂಗ್ / ತಂತ್ರಜ್ಞಾನ / ವಾಸ್ತುಶಿಲ್ಪ / ವಿಜ್ಞಾನ / ವಾಣಿಜ್ಯ / ಕಲೆಗಳಲ್ಲಿ ಈಗಾಗಲೇ ಸರ್ಕಾರಿ ಅನುಮೋದಿತ ಪದವಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು GATE 2023 ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News