GATE 2025 ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭ :ಭರಿಸಬೇಕಾದ ಶುಲ್ಕ, ಫಾರ್ಮ್ ಭರ್ತಿ ಮಾಡಲು ಅಗತ್ಯ ದಾಖಲೆಗಳ ಪಟ್ಟಿ ಇಲ್ಲಿದೆ

GATE 2025 registration:ಇಂಜಿನಿಯರಿಂಗ್ (ಗೇಟ್) 2025 ರಲ್ಲಿ ಗ್ರಾಜುಯೇಟ್ ಆಪ್ಟಿಟ್ಯೂಡ್ ಪರೀಕ್ಷೆಗೆ ನೋಂದಣಿ ಇಂದಿನಿಂದ ಪ್ರಾರಂಭವಾಗಲಿದೆ. ಪರೀಕ್ಷೆ ಬರೆಯಲು ಇಚ್ಚಿಸುವ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಲು GATE 2025 ರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. 

Written by - Ranjitha R K | Last Updated : Aug 28, 2024, 12:18 PM IST
  • GATE 2025 ಪರೀಕ್ಷೆಯ ನೋಂದಣಿ ಪ್ರಕ್ರಿಯೆಯನ್ನು ಇಂದಿನಿಂದ ಆರಂಭ
  • ಅಧಿಕೃತ ವೆಬ್‌ಸೈಟ್ gate2025.iitr.ac ಗೆ ಭೇಟಿ ನೀಡುವ ಮೂಲಕ ಫಾರ್ಮ್ ಅನ್ನು ಭರ್ತಿ
  • ಫಲಿತಾಂಶಗಳನ್ನು ಮಾರ್ಚ್ 19, 2025 ರಂದು ಪ್ರಕಟಿಸಲಾಗುವುದು.
GATE 2025 ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭ :ಭರಿಸಬೇಕಾದ ಶುಲ್ಕ, ಫಾರ್ಮ್ ಭರ್ತಿ ಮಾಡಲು ಅಗತ್ಯ ದಾಖಲೆಗಳ ಪಟ್ಟಿ ಇಲ್ಲಿದೆ  title=

GATE 2025 registration  : GATE 2025 ಪರೀಕ್ಷೆಯ ನೋಂದಣಿ ಪ್ರಕ್ರಿಯೆಯನ್ನು ಇಂದಿನಿಂದ ಆರಂಭವಾಗಲಿದೆ. ಈ ಪರೀಕ್ಗೆ ಹಾಜರಾಗಬೇಕಾಗಿರುವ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ gate2025.iitr.ac ಗೆ ಭೇಟಿ ನೀಡುವ ಮೂಲಕ ಫಾರ್ಮ್ ಅನ್ನು ಭರ್ತಿ ಮಾಡಬಹುದು.GATE 2025 ಅನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೋಡ್‌ನಲ್ಲಿ ನಡೆಸಲಾಗುವುದು.ಪರೀಕ್ಷಾ ನಗರ ಕೇಂದ್ರಗಳನ್ನು ಎಂಟು ವಲಯಗಳಾಗಿ ವಿಂಗಡಿಸಲಾಗಿದೆ.ಫಲಿತಾಂಶಗಳನ್ನು ಮಾರ್ಚ್ 19, 2025 ರಂದು ಪ್ರಕಟಿಸಲಾಗುವುದು.

ಫಾರ್ಮ್‌ಗಳನ್ನು ಯಾವಾಗ ಭರ್ತಿ ಮಾಡಲಾಗುತ್ತದೆ?
GATE 2025 ರ ವೇಳಾಪಟ್ಟಿಯ ಪ್ರಕಾರ, ಅಪ್ಲಿಕೇಶನ್ ವಿಂಡೋ ಆಗಸ್ಟ್ 28ರಿಂದ ಅಂದರೆ ಇಂದಿನಿಂದ ಸೆಪ್ಟೆಂಬರ್ 26 ರವರೆಗೆ ತೆರೆದಿರಲಿದೆ. ಆದರೆ ಅಭ್ಯರ್ಥಿಗಳು ಲೇಟ್ ಫೀಸ್ ಪಾವತಿಸುವ ಮೂಲಕ ಅಕ್ಟೋಬರ್ 7 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಇದನ್ನೂ ಓದಿ : ಡಿಗ್ರಿ ಮುಗಿದರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೇಕಿಲ್ಲ ಉದ್ಯೋಗಾವಕಾಶ...? ಇಲ್ಲಿವೆ 6 ಪ್ರಮುಖ ಕಾರಣಗಳು

ಗೇಟ್ 2025 ಪರೀಕ್ಷೆಯ ದಿನಾಂಕ :
GATE 2025 ಪರೀಕ್ಷೆಯು 1, 2, 15 ಮತ್ತು 16 ಫೆಬ್ರವರಿ 2025 ರಂದು ನಡೆಯಲಿದೆ. ಪ್ರತಿದಿನ ಎರಡು ಪಾಳಿಯಲ್ಲಿ ಪರೀಕ್ಷೆ ನಡೆಯಲಿದೆ.  

ಗೇಟ್ 2025 ಅರ್ಜಿ ಶುಲ್ಕ :
ಮಹಿಳೆಯರು, SC, ST ಮತ್ತು PWD ವರ್ಗದ ಅಭ್ಯರ್ಥಿಗಳು 900 ರೂ.ಯನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು. ಸೆಪ್ಟೆಂಬರ್ 26 ರೊಳಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಈ ಶುಲ್ಕ ಅನ್ವಯವಾಗುತ್ತದೆ.ಈ ಅವಧಿಯ ನಂತರ ಅರ್ಜಿ ನಮೂನೆಯನ್ನು ಸಲ್ಲಿಸುವುದಾದರೆ ಲೇಟ್ ಫೀಸ್ ಜೊತೆಗೆ 1,400 ರೂ.ಪಾವತಿಸಬೇಕಾಗುತ್ತದೆ. ವಿದೇಶಿ ಪ್ರಜೆಗಳು ಸೇರಿದಂತೆ ಎಲ್ಲಾ ಇತರ ಅಭ್ಯರ್ಥಿಗಳು ಸೆಪ್ಟೆಂಬರ್ 26 ರವರೆಗೆ 1800 ರೂ.ಶುಲ್ಕ  ಕಟ್ಟಬೇಕಾಗುತ್ತದೆ. ಲೇಟ್ ಫಿ ಜೊತೆಗೆ ಪಾವತಿಸುವುದಾದರೆ 2,300 ರೂ. ಶುಲ್ಕವನ್ನು ತೆರಬೇಕಾಗುತ್ತದೆ. 

GATE 2025 ಪರೀಕ್ಷೆಗೆ ಹಾಜರಾಗಲು ಅರ್ಹತೆ :
10+2+2 ಅಥವಾ 10+3+1 ಯಶಸ್ವಿಯಾಗಿ ಉತ್ತೀರ್ಣರಾದ ಮತ್ತು ಪ್ರಸ್ತುತ ಯಾವುದೇ ಪದವಿ ಪದವಿಯ ಮೂರನೇ ವರ್ಷದಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಇಂಜಿನಿಯರಿಂಗ್/ತಂತ್ರಜ್ಞಾನ/ಆರ್ಕಿಟೆಕ್ಚರ್/ವಿಜ್ಞಾನ/ವಾಣಿಜ್ಯ/ಕಲೆಗಳಲ್ಲಿ ಪದವಿಗಳನ್ನು ಪಡೆಯುತ್ತಿರುವ ಪದವೀಧರರೂ ಗೇಟ್‌ಗೆ ಅರ್ಜಿ ಸಲ್ಲಿಸಬಹುದು.   

ಇದನ್ನೂ ಓದಿ : ಭಾರತ ಕ್ರಿಕೆಟ್ ತಂಡದಲ್ಲಿ ಅತ್ಯಂತ ಕಡಿಮೆ ಶಿಕ್ಷಣ ಪಡೆದ ಆಟಗಾರ ಈತನೇ ! ಕಾಲೇಜು ಮೆಟ್ಟಿಲು ಹತ್ತೇ ಇಲ್ಲ ಹೆಣ್ಣು ಮಕ್ಕಳ ಈ ಸೂಪರ್ ಕ್ರಶ್

GATE 2025 ನೋಂದಣಿಗಾಗಿ ಅಗತ್ಯ ದಾಖಲೆ : 
1. ಉತ್ತಮ ಗುಣಮಟ್ಟದ ಭಾವಚಿತ್ರ, 
2. ಸಹಿಯ ಉತ್ತಮ ಗುಣಮಟ್ಟದ ಭಾವಚಿತ್ರ
3. PDF ನಲ್ಲಿ  ಸ್ಕ್ಯಾನ್ ಮಾಡಿದ ಜಾತಿ ಪ್ರಮಾಣಪತ್ರದ ಪ್ರತಿ
4. PDF ನಲ್ಲಿ ಸ್ಕ್ಯಾನ್ ಮಾಡಿದ  PWD ಪ್ರಮಾಣಪತ್ರದ ಪ್ರತಿ
5. PDF ನಲ್ಲಿ ಸ್ಕ್ಯಾನ್ ಮಾಡಿದ ಆಧಾರ್‌ನಂತಹ ಮಾನ್ಯ ಫೋಟೋ ID ಯ  ಪ್ರತಿ.
( ಯುಐಡಿ, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿ). 

ಗೇಟ್ 2025: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?:
1.ವಿದ್ಯಾರ್ಥಿಗಳು GATE gate2025.iitr.ac.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. 
2. ಮುಖಪುಟದಲ್ಲಿ, GATE 2025 ರಿಜಿಸ್ಟ್ರೇಶನ್ ಲಿಂಕ್ ತೆರೆಯಿರಿ.
3. ಅಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಸಬ್ಮಿಟ್ ಮಾಡಿ. 
4. ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಿ. 5. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಪರೀಕ್ಷಾ ಶುಲ್ಕವನ್ನು ಪಾವತಿಸಿ.
6.ಫಾರ್ಮ್‌ನಲ್ಲಿ ನಮೂದಿಸಲಾದ ವಿವರಗಳನ್ನು ಕ್ರಾಸ್-ಚೆಕ್ ಮಾಡಿ ಮತ್ತು ಅದನ್ನು ಸಬ್ಮಿಟ್ ಮಾಡಿ. 
7. ಇಷ್ಟಾದ ಮೇಲೆ ಪ್ರಿಂಟೌಟ್ ತೆಗೆದುಕೊಳ್ಳಲು ಮರೆಯದಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News