CRIME NEWS : ಬ್ರೇಕಪ್ ಅಂದಿದ್ದಕ್ಕೆ ಆಂಟಿ ಮುಖಕ್ಕೆ ಕುರೂಪ್ ಹಾಕಿದ 19ರ ಯುವಕ

Bangalore Crime News : ಬ್ರೇಕಪ್ ಎಂದಿದ್ದಕ್ಕೆ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದ ಆಂಟಿ ಮುಖಕ್ಕೆ ಯುವಕನೊಬ್ಬ ಚಾಕುನಿಂದ ಕುರೂಪ್ ಹಾಕಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.   

Written by - VISHWANATH HARIHARA | Edited by - Chetana Devarmani | Last Updated : Mar 8, 2023, 12:22 PM IST
  • ಬ್ರೇಕಪ್ ಅಂದ ಆಂಟಿ ಮುಖಕ್ಕೆ ಕುರೂಪ್
  • 19ರ ಯುವಕನೊಂದಿಗೆ ಲಿವ್‌ ಇನ್‌ ರಿಲೇಶನ್‌ಶಿಪ್‌
  • ಅವಿನಾಶ್ ಗಾಗಿ ಬಲೆ ಬೀಸಿದ್ದಾರೆ ಪೊಲೀಸರು
CRIME NEWS : ಬ್ರೇಕಪ್ ಅಂದಿದ್ದಕ್ಕೆ ಆಂಟಿ ಮುಖಕ್ಕೆ ಕುರೂಪ್ ಹಾಕಿದ 19ರ ಯುವಕ title=
Crime News

ಬೆಂಗಳೂರು: ಬ್ರೇಕಪ್ ಎಂದಿದ್ದಕ್ಕೆ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದ ಆಂಟಿ ಮುಖಕ್ಕೆ ಯುವಕನೊಬ್ಬ ಚಾಕುನಿಂದ ಕುರೂಪ್ ಹಾಕಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೀವಿತಾ ಎಂಬಾಕೆಯ ಕೆನ್ನೆಗೆ ಪ್ರಿಯತಮ ಅವಿನಾಶ್ ಕುರೂಪ್ ಹಾಕಿ ಎಸ್ಕೇಪ್ ಆಗಿದ್ದಾನೆ. 

ಇದನ್ನೂ ಓದಿ :  S Shadakshari : ಪ್ರತಿ ಶನಿವಾರ ರಾಜ್ಯ ಸರ್ಕಾರಿ ನೌಕರರಿಗೆ ರಜೆ ಸಿಗುತ್ತಾ..?

ಮದುವೆಯಾಗಿ ಗಂಡನಿಂದ ದೂರವಾಗಿದ್ದ ಜೀವಿತಾ ಕಾಲ್ ಸೆಂಟರ್ ನಲ್ಲಿ ಮಾಡಿಕೊಂಡಿದ್ದಳು. ಪಾರ್ಕ್ ನಲ್ಲಿ ಗಾರ್ಡನ್  ಆಗಿ ಅವಿನಾಶ್ ಕೆಲಸ ಮಾಡಿಕೊಂಡಿದ್ದ. ಇಬ್ಬರಿಗೂ ಪರಿಚಯವಾಗಿ ನಂತರ ಇದು ಪ್ರೇಮಕ್ಕೆ ತಿರುಗಿತ್ತು. ಕಳೆದ ಎರಡು ವರ್ಷಗಳಿಂದ ಇಬ್ಬರೂ ಲಿವಿಂಗ್ ರಿಲೇಶನ್ಶಿಪ್ ನಲ್ಲಿ ಇದ್ದರು. ಆದರೆ ಇತ್ತಿಚೇಗೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ದೂರವಾಗಿದ್ದರು.  

ಜೀವಿತಾ ಸಹ ಅವಿನಾಶ್ ಗೆ ಮೆಸೇಜ್, ಕಾಲ್ ಮಾಡುವುದನ್ನು ನಿಲ್ಲಿಸಿದ್ದಳು. ಇದರಿಂದ  ಕೋಪಗೊಂಡ ಆರೋಪಿ ಅವಿನಾಶ್ ನನ್ನಿಂದ ದೂರವಾಗುತ್ತೀಯಾ ಎಂದು  ಜೀವಿತಾ ಕೆಲಸ ಮಾಡುತ್ತಿದ್ದ ಕಚೇರಿ ಬಳಿ ಹೋಗಿ ಪ್ರಶ್ನೆ ಮಾಡಿದ್ದಾನೆ. ಇನ್ಮುಂದೆ ನನ್ನ ಜೊತೆ ಮಾತನಾಡಬೇಡ ಬ್ರೇಕಪ್ ಎಂದಿದ್ದಕ್ಕೆ ಚಾಕುವಿನಿಂದ ಜೀವಿತಾ ಕೆನ್ನೆಗೆ ಇರಿದು ಅವಿನಾಶ್ ಮೊಬೈಲ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಸದ್ಯ ಈ ಬಗ್ಗೆ ಜೀವಿತಾ ಬಾಣಸವಾಡಿ  ಪ್ರಕರಣ ದಾಖಲಿಸಿದ್ದೂ, ಅವಿನಾಶ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಮಹಿಳಾ ದಿನಾಚರಣೆಗೆ ಬಿಎಂಟಿಸಿ ಗುಡ್‌ನ್ಯೂಸ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News