ಅಂಜಲಿ ಕೊಲೆ ಆರೋಪಿ ರೈಲಿನಲ್ಲಿ ಮಹಿಳೆಗೆ ಇರಿದಿದ್ದ ಚಾಕು ಪತ್ತೆ

'ಸಿಐಡಿ ಪೊಲೀಸ್ ತಂಡವು ಸ್ಥಳ ಮಹಜರಿಗಾಗಿ ಆರೋಪಿ ಜೊತೆಗೆ ಮಂಗಳವಾರ ದಾವಣಗೆರೆಯ ಮಾಯಕೊಂಡಕ್ಕೆ ಬಂದಿತ್ತು. ಇಲ್ಲಿಗೆ ಸಮೀಪದ ಬೊಮ್ಮನಹಳ್ಳಿ ಬಳಿ ರೈಲು ಹಳಿಯ ಪಕ್ಕದಲ್ಲಿ ಚಾಕು ಸಿಕ್ಕಿದೆ' ಎಂದು ಮೂಲಗಳು ತಿಳಿಸಿವೆ.

Last Updated : May 30, 2024, 08:56 AM IST
  • ಅಂಜಲಿಗೆ ಕೊಲೆ ಮಾಡಿದ ಬಳಿಕ ಆರೋಪಿ ಗಿರೀಶ ಮೈಸೂರಿಗೂ ತೆರಳಿದ್ದ.
  • ಆರೋಪಿಯು ರೈಲಿನಲ್ಲಿ ಬರುವಾಗ ಚಿಕ್ಕಜಾಜೂರು- ಮಾಯಕೊಂಡ ಮಧ್ಯೆ ಗದಗ ಜಿಲ್ಲೆಯ ಲಕ್ಷ್ಮಿ ಎಂಬುವರಿಗೆ ಚಾಕುವಿನಿಂದ ಇರಿದಿದ್ದ
  • ಬಳಿಕ ಚಲಿಸುವ ರೈಲಿನಿಂದ ಕೆಳಗೆ ಜಿಗಿದಿದ್ದ.
ಅಂಜಲಿ ಕೊಲೆ ಆರೋಪಿ ರೈಲಿನಲ್ಲಿ ಮಹಿಳೆಗೆ ಇರಿದಿದ್ದ ಚಾಕು ಪತ್ತೆ title=

ಹುಬ್ಬಳ್ಳಿ: ಯುವತಿ ಅಂಜಲಿ ಅಂಬಿಗೇರ ಕೊಲೆ (Anjali Ambiger's Murder) ಆರೋಪಿ ಗಿರೀಶ ಸಾವಂತ ರೈಲಿನಲ್ಲಿ ಮಹಿಳೆಗೆ ಇರಿಯಲು ಬಳಸಿದ್ದ ಚಾಕು ಪತ್ತೆಯಾಗಿದೆ.

'ಸಿಐಡಿ ಪೊಲೀಸ್ ತಂಡವು ಸ್ಥಳ ಮಹಜರಿಗಾಗಿ ಆರೋಪಿ ಜೊತೆಗೆ ಮಂಗಳವಾರ ದಾವಣಗೆರೆಯ ಮಾಯಕೊಂಡಕ್ಕೆ ಬಂದಿತ್ತು. ಇಲ್ಲಿಗೆ ಸಮೀಪದ ಬೊಮ್ಮನಹಳ್ಳಿ ಬಳಿ ರೈಲು ಹಳಿಯ ಪಕ್ಕದಲ್ಲಿ ಚಾಕು ಸಿಕ್ಕಿದೆ' ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ- ನೇಹಾ ಮಾದರಿಯಲ್ಲಿಯೇ ಹುಬ್ಬಳ್ಳಿಯಲ್ಲಿ ನಡೆಯಿತು ಮತ್ತೊಂದು ಕೊಲೆ : ಮನೆ ಮಂದಿ ಕಣ್ಣೆದುರೇ ಯುವತಿ ಹತ್ಯೆ

"ಆರೋಪಿಯು ರೈಲಿನಲ್ಲಿ ಬರುವಾಗ ಚಿಕ್ಕಜಾಜೂರು- ಮಾಯಕೊಂಡ ಮಧ್ಯೆ ಗದಗ ಜಿಲ್ಲೆಯ ಲಕ್ಷ್ಮಿ ಎಂಬುವರಿಗೆ ಚಾಕುವಿನಿಂದ ಇರಿದು ಬಳಿಕ ಚಲಿಸುವ ರೈಲಿನಿಂದ ಕೆಳಗೆ ಜಿಗಿದಿದ್ದ. ನಂತರ ರೈಲ್ವೆ ಪೊಲೀಸರು, ರೈಲ್ವೆ ಇಲಾಖೆಯ ಕೀ ಮ್ಯಾನ್‌ಗಳ ಜತೆಗೂಡಿ ಹುಡುಕಾಟ ನಡೆಸಿದಾಗ, ಚಾಕು ಪತ್ತೆಯಾಗಿರಲಿಲ್ಲ.

ಅಂಜಲಿಗೆ ಕೊಲೆ ಮಾಡಿದ ಬಳಿಕ ಆರೋಪಿ ಗಿರೀಶ ಸಾವಂತ (Girish Sawant) ಮೈಸೂರಿಗೂ ತೆರಳಿದ್ದ. ಹೀಗಾಗಿ ಸಿಐಡಿ ತಂಡವು ಗುರುವಾರ ಆತನನ್ನು ಮೈಸೂರಿಗೆ ಕರೆದೊಯ್ದು ತನಿಖೆ ನಡೆಸುವ ಸಾಧ್ಯತೆಯಿದೆ. 

ಇದನ್ನೂ ಓದಿ- ಯುವತಿ ಹತ್ಯೆ ಕೇಸ್‌: ಅಂಜಲಿ ಹಂತಕ ಪೊಲೀಸ್ ವಶಕ್ಕೆ

ಮೇ 31ರವರೆಗೆ ಆತನನ್ನು ಸಿಐಡಿ ಪೊಲೀಸರು (CID Police) ವಶಕ್ಕೆ ಪಡೆದಿದ್ದು, ಅಂದೇ ನ್ಯಾಯಾಂಗ ವಶಕ್ಕೆ ಒಪ್ಪಿಸುವರು. ಈಗ ಪತ್ತೆಯಾಗಿರುವ ಚಾಕುವಿನಿಂದಲೇ ಅಂಜಲಿಯ ಕೊಲೆಯಾಗಿತ್ತೆ ಎಂಬುದು ಖಚಿತವಾಗಬೇಕಿದೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News