Coimbatore DIG Suicide: ಗುಂಡು ಹಾರಿಸಿಕೊಂಡು ಕೊಯಮತ್ತೂರು ಡಿಐಜಿ ಆತ್ಮಹತ್ಯೆ!

Coimbatore DIG Suicide: 2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ವಿಜಯಕುಮಾರ್ ಕಾಂಚೀಪುರಂ, ಕಡಲೂರು, ನಾಗಪಟ್ಟಣಂ ಮತ್ತು ತಿರುವರೂರು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮತ್ತು ಚೆನ್ನೈನ ಅಣ್ಣಾನಗರದ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.

Written by - Puttaraj K Alur | Last Updated : Jul 7, 2023, 05:26 PM IST
  • ಗುಂಡು ಹಾರಿಸಿಕೊಂಡು ಕೊಯಮತ್ತೂರು ಪೊಲೀಸ್ ಉಪ ಮಹಾನಿರೀಕ್ಷಕ ಸಿ.ವಿಜಯಕುಮಾರ್ ಆತ್ಮಹತ್ಯೆ
  • ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಿ.ವಿಜಯಕುಮಾರ್
  • ಖಿತನ್ನತೆಯಿಂದ ಬಳಲುತ್ತಿದ್ದ ಸಿ.ವಿಜಯಕುಮಾರ್‍ಗೆ ಕೌನ್ಸೆಲಿಂಗ್ ಕೂಡ ನಡೆಯುತ್ತಿತ್ತು
Coimbatore DIG Suicide: ಗುಂಡು ಹಾರಿಸಿಕೊಂಡು ಕೊಯಮತ್ತೂರು ಡಿಐಜಿ ಆತ್ಮಹತ್ಯೆ! title=
ಕೊಯಮತ್ತೂರು ಡಿಐಜಿ ಆತ್ಮಹತ್ಯೆ!

ಕೊಯಮತ್ತೂರು: ಕೊಯಮತ್ತೂರು ಪೊಲೀಸ್ ಉಪ ಮಹಾನಿರೀಕ್ಷಕ (DIG) ಸಿ.ವಿಜಯಕುಮಾರ್ ಇಂದು(ಜುಲೈ 7) ಬೆಳಗ್ಗೆ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿತ್ತು.  

ಕೊಯಮತ್ತೂರಿನ ರೆಡ್ ಫೀಲ್ಡ್ಸ್‌ನಲ್ಲಿರುವ ಕ್ವಾರ್ಟರ್ಸ್‌ನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದ ವಿಜಯಕುಮಾರ್ ಶುಕ್ರವಾರ ಬೆಳಗ್ಗೆ 6.15ರ ವೇಳೆಗೆ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Modi surname defamation case : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗಿಲ್ಲ ರಿಲೀಫ್

ವಿಜಯಕುಮಾರ್ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಖಿತನ್ನತೆಯಿಂದ ಬಳಲುತ್ತಿದ್ದ ಅವರಿಗೆ ಕೌನ್ಸೆಲಿಂಗ್ ಕೂಡ ನಡೆಯುತ್ತಿತ್ತು. ಕೆಲ ದಿನಗಳ ಹಿಂದಷ್ಟೇ ಅವರ ಕುಟುಂಬಸ್ಥರು ಚೆನ್ನೈಯಿಂದ ಕೊಯಮತ್ತೂರಿಗೆ ಸ್ಥಳಾಂತರವಾಗಿದ್ದರು ಎನ್ನಲಾಗಿದೆ.

ವಿಜಯಕುಮಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. 2023ರ ಜನವರಿ 6ರಂದು ಕೊಯಮತ್ತೂರು ಶ್ರೇಣಿಯ ಪೊಲೀಸ್ ಉಪ ಮಹಾನಿರೀಕ್ಷಕರಾಗಿ (DIG) ಅವರು ಅಧಿಕಾರ ವಹಿಸಿಕೊಂಡಿದ್ದರು.

ಇದನ್ನೂ ಓದಿ: Viral Video: ಮನ್ಯಾಗ ಹೇಳಿ ಬಂದಿ ಏನೋ ತಮ್ಮಾ..? ಯಮನ ಜೊತೆ ಜಲ್ಲಾಟ ಆಡಿದ ಯುವಕ

2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ವಿಜಯಕುಮಾರ್ ಕಾಂಚೀಪುರಂ, ಕಡಲೂರು, ನಾಗಪಟ್ಟಣಂ ಮತ್ತು ತಿರುವರೂರು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮತ್ತು ಚೆನ್ನೈನ ಅಣ್ಣಾನಗರದ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News