ಬೆಂಗಳೂರು: ಓದುವ ವಯಸ್ಸಲ್ಲಿ ಏನಾದ್ರೂ ವ್ಯತ್ಯಾಸವಾದರೆ ಏನೆಲ್ಲಾ ಆಗುತ್ತೆ ಎಂಬುದಕ್ಕೆ ಇಲ್ಲಿ ನಡೆದಿರುವ ಘಟನೆ ಸಾಕ್ಷಿಯಾಗಿದೆ. ನಗರದ
ಚಾಲುಕ್ಯ ಸರ್ಕಲ್ ನಲ್ಲಿರುವ ಹೈ ಪಾಯಿಂಟ್ ಅಪಾರ್ಟ್ ನಲ್ಲಿ ಯುವತಿಯೊಬ್ಬಳು ಬಿಲ್ಡಿಂಗ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪ್ರಕೃತಿ(18) ಮೃತ ಯುವತಿಯಾಗಿದ್ದು ಅಪಾರ್ಟ್ಮೆಂಟ್ ನ 10ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ. ಮೃತ ಪ್ರಕೃತಿ ಸೋಫಿಯಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ಟಾಪರ್ ಆಗಿದ್ದಳು.
ಇದನ್ನೂ ಓದಿ- Surya Mukundaraj : 'ಡಿಕೆ ರವಿ ಲವ್ ಕೇಸ್ ಬೆಳಕಿಗೆ ಬರಲಿಲ್ಲ, ರೋಹಿಣಿ ವಿರುದ್ಧ ದೂರು ದಾಖಲಾಗಲಿಲ್ಲ'
ಕೆಲ ದಿನಗಳಿಂದ ಖಿನ್ನತೆಗೊಳಗಾಗಿದ್ದ ಪ್ರಕೃತಿ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂಬ ಮಾಹಿತಿ ಇದೆ. ಇದೇ ಕಾರಣಕ್ಕೆ ಪೋಷಕರು ವೈದ್ಯರ ಬಳಿ ಅನೇಕ ದಿನಗಳ ಕಾಲ ಪ್ರಕೃತಿಗೆ ಕೌನ್ಸಿಲಿಂಗ್ ಸಹ ಕೊಡಿಸಿದ್ದರಂತೆ.
ಇದನ್ನೂ ಓದಿ- ಗಂಡನ ಜೊತೆ ಅಕ್ರಮವಾಗಿ ನೆಲೆಸಿದ್ದ ಪಾಕ್ ಯುವತಿ ಗಡಿಪಾರು : ಪಾಕ್'ಗೆ ಹೋಗಲ್ಲ ಎಂದು ಹೈಡ್ರಾಮ!
ಇಷ್ಟಾದ್ರು ನಿನ್ನೆ ಸಂಜೆ ಕಾಲೇಜಿನ ಪಕ್ಕದಲ್ಲಿರುವ ಅಪಾರ್ಟ್ಮೆಂಟ್ ಗೆ ಬಂದಿದ್ದ ಈಕೆ ನೇರವಾಗಿ ಮೇಲೆ ಮಹಡಿಗೆ ಹೋಗಲು ಯತ್ನಿಸಿದ್ದಾಳೆ. ಈ ವೇಳೆ ಹತ್ತನೇ ಮಹಡಿಯಲ್ಲಿ ಟೆರಸ್ ಎಂಟ್ರಿ ಲಾಕ್ ಆಗಿತ್ತು. ಆದರೆ ಆತ್ಮಹತ್ಯೆಗೆ ನಿರ್ಧರಿಸಿ ಬಂದಿದ್ದ ಪ್ರಕೃತಿ ಹತ್ತನೇ ಮಹಡಿಯಿಂದ ಜಿಗಿದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸದ್ಯ ಘಟನೆ ಹಿನ್ನೆಲೆ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.