ಬಲೂಚಿಸ್ತಾನ್: ಪಾಕಿಸ್ತಾನದ ಪರ್ವತ ಪ್ರದೇಶವಾದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನೂರಾರು ಅಡಿ ಕಂದರಕ್ಕೆ ಪ್ಯಾಸೆಂಜರ್ ವ್ಯಾನ್‍ವೊಂದು ಉರುಳಿಬಿದ್ದು ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮಗುವಿಗೆ ಗಾಯವಾಗಿದೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.
ಇದನ್ನೂ ಓದಿ: Nigeria church attack: ಚರ್ಚ್‌ಗೆ ನುಗ್ಗಿ ಗುಂಡಿನ ದಾಳಿ, 50ಕ್ಕೂ ಹೆಚ್ಚು ಮಂದಿ ಮೃತ
ಸುಮಾರು 23ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದ ಈ ವ್ಯಾನ್ ಲೋರಲೈನಿಂದ ಹೊರಟಿತ್ತು. ಝೋಬ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಈ ವಾಹನವು ಕಿಲ್ಲಾ ಸೈಫುಲ್ಲಾ ಪ್ರದೇಶದ ಬಳಿ ಕಂದರಕ್ಕೆ ಉರುಳಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Viral Video: ಗನ್ ತೋರಿಸಿ ದರೋಡೆ ಮಾಡಿದ ಬಾಲಕ, ಭಯಾನಕ ದೃಶ್ಯ ವೈರಲ್
ವಾಹನವು ಅಖ್ತರ್ಜೈ ಬಳಿ ಬೆಟ್ಟದ ತುದಿಯಿಂದ ಬಿದ್ದಿದ್ದು, ಅಪಘಾತದಲ್ಲಿ ವಾಹನದಲ್ಲಿದ್ದ 22 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಹಫೀಜ್ ಮುಹಮ್ಮದ್ ಖಾಸಿಮ್ ಹೇಳಿದ್ದಾರೆ. ಅಪಘಾತದಲ್ಲಿ ಅಪ್ರಾಪ್ತ ಬಾಲಕ ಗಾಯಗೊಂಡಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಅತನನ್ನು ಕ್ವೆಟ್ಟಾಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಝೋಬ್‌ನಲ್ಲಿ 1,572 ಮೀಟರ್‌ಗಳಷ್ಟು ಎತ್ತರದಲ್ಲಿರುವ ಅಖ್ತರ್‌ಝೈ ಬುಡಕಟ್ಟು ಪ್ರದೇಶವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.