ಚಿನ್ನದ ವ್ಯಾಪಾರಿಯಿಂದ ಸುಲಿಗೆ ಆರೋಪ: PSI ಮತ್ತು ASI ಸಸ್ಪೆಂಡ್..!

ಎಲ್ಲಾ ದಾಖಲೆಗಳಿದ್ದರೂ ಚಿನ್ನದ ಬ್ಯಾಗ್ ಸಮೇತ ಚಿನ್ನದ ವ್ಯಾಪಾರಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ಠಾಣೆಗೆ ಕರೆದೊಯ್ದು ದಾಖಲಾತಿ ಬುಕ್‍ನಲ್ಲಿ ಈ ಬಗ್ಗೆ ಎಂಟ್ರಿ ಮಾಡಿರಲಿಲ್ಲ.

Written by - Zee Kannada News Desk | Last Updated : Dec 10, 2022, 01:48 PM IST
  • ಚಿನ್ನದ ವ್ಯಾಪಾರಿಯಿಂದ ಸುಲಿಗೆ ಆರೋಪದಡಿ ಓರ್ವ ಪಿಎಸ್‍ಐ ಹಾಗೂ ಎಎಸ್‍ಐ ಸಸ್ಪೆಂಡ್
  • ಎಸ್‍.ಜೆ.ಪಾರ್ಕ್ ಪೊಲೀಸ್ ಠಾಣೆ PSI ಅಶೋಕ್ ಠಾಕೂರ್ ಹಾಗೂ ASI ರಮೇಶ್ ಅಮಾನತು
  • ಎಲ್ಲಾ ದಾಖಲೆಗಳಿದ್ದರೂ ಚಿನ್ನದ ಬ್ಯಾಗ್ ಸಮೇತ ಚಿನ್ನದ ವ್ಯಾಪಾರಿ ವಶಕ್ಕೆ ಪಡೆದಿದ್ದ ಪೊಲೀಸರು
ಚಿನ್ನದ ವ್ಯಾಪಾರಿಯಿಂದ ಸುಲಿಗೆ ಆರೋಪ: PSI ಮತ್ತು ASI ಸಸ್ಪೆಂಡ್..! title=
ಪಿಎಸ್‍ಐ ಹಾಗೂ ಎಎಸ್‍ಐ ಸಸ್ಪೆಂಡ್!

ಬೆಂಗಳೂರು: ಚಿನ್ನದ ವ್ಯಾಪಾರಿಯಿಂದ ಸುಲಿಗೆ ಮಾಡಿದ ಆರೋಪ ಸಂಬಂಧ ಓರ್ವ ಪಿಎಸ್‍ಐ ಹಾಗೂ ಎಎಸ್‍ಐ ಸಸ್ಪೆಂಡ್ ಮಾಡಿ ಕೇಂದ್ರ ವಿಭಾಗದ ಡಿಸಿಪಿ ಆದೇಶ ಹೊರಡಿಸಿದ್ದಾರೆ.

ಎಸ್‍.ಜೆ.ಪಾರ್ಕ್ ಪೊಲೀಸ್ ಠಾಣೆ PSI ಅಶೋಕ್ ಠಾಕೂರ್ ಹಾಗೂ ASI ರಮೇಶ್ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿಗಳಾಗಿದ್ದಾರೆ. ಡಿಸೆಂಬರ್ 3ರಂದು ತನ್ನ ಜ್ಯುವೆಲ್ಲರಿ ಶಾಪ್‍ಗೆ ಚಿನ್ನ ಕೊಂಡೊಯ್ತಿದ್ದ ಚಿನ್ನದ ವ್ಯಾಪಾರಿಯನ್ನು ಚಿನ್ನದ ಬ್ಯಾಗ್ ಸಮೇತ ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಹೆಂಡತಿಯನ್ನು ಸ್ನೇಹಿತರೊಂದಿಗೆ ಮಲಗಿಸಿದ: ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ ಪಾಪಿ ಗಂಡ...!

ಎಲ್ಲಾ ದಾಖಲೆಗಳಿದ್ದರೂ ಚಿನ್ನದ ಬ್ಯಾಗ್ ಸಮೇತ ವಶಕ್ಕೆ ಪಡೆದಿದ್ದ ಪೊಲೀಸರು ಠಾಣೆಗೆ ಕರೆದೊಯ್ದು ದಾಖಲಾತಿ ಬುಕ್‍ನಲ್ಲಿ ಈ ಬಗ್ಗೆ ಎಂಟ್ರಿ ಮಾಡಿರಲಿಲ್ಲ. ಡಿಸೆಂಬರ್ 3ರ ಬೆಳಗ್ಗೆ 11ರ ಸುಮಾರಿಗೆ ಟೌನ್‍ಹಾನ್ ಬಳಿಯಿಂದ ಚಿನ್ನದ ವ್ಯಾಪಾರಿಯನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ಠಾಣೆಗೆ ಕರೆದೊಯ್ದಿದ್ದರು.

ಚಿನ್ನದ ವ್ಯಾಪಾರಿಯಿಂದ ಹಣ ಪಡೆದು ಚಿನ್ನದ ಬ್ಯಾಗನ್ನು ಕೊಟ್ಟು ಕಳಿಸಿರುವ ಆರೋಪದಡಿ ಪಿಎಸ್‍ಐ ಮತ್ತು ಎಎಸ್‍ಐ ಅವರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಹಲಸೂರು ಗೇಟ್ ಎಸಿಪಿ ನಾರಾಯಣಸ್ವಾಮಿಯವರು ತನಿಖೆ ಕೈಗೊಂಡಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸಿಗರೇಟ್ ಹಣ ಕೇಳಿದಕ್ಕೆ ಹಲ್ಲೆ : ಮೂವರು ಪುಡಿ ರೌಡಿಗಳ ಬಂಧನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News