ಬೆಂಗಳೂರು : ಹೆಂಡತಿ ಹಿಂದೆ ಬಿದ್ದಿದ್ದ ಪಗಾಲ್ ಪ್ರೇಮಿಯನ್ನು ಕೊಂದ ಆರೋಪದಡಿ ಶಿವಾಜಿನಗರ ಪೊಲೀಸರು ಜಿಷಾನ್ ಎಂಬಾತನನ್ನು ಬಂಧಿಸಿದ್ದಾರೆ. ಜಾವದ್ ಎಂಬ ಪಾಗಲ್ ಪ್ರೇಮಿ ತನ್ನ ಲವರ್ ಗೆ ಮದುವೆಯಾಗಿದ್ರು ಸಹ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಈ ಹಿನ್ನೆಲೆ ಆರೋಪಿ ಜಿಷಾನ್ ಹೆಂಡತಿ ಸಹವಾಸಕ್ಕೆ ಬರದಂತೆ ವಾರ್ನ್ ಮಾಡಿದ್ದ.
ಇದನ್ನೂ ಓದಿ: ಸರ್ಕಾರದ ಹೊಸ ಪ್ಲಾನ್: ಟ್ರಾಫಿಕ್ ಪೊಲೀಸರ ಮಾದರಿಯಲ್ಲಿ ಜೈಲು ಸಿಬ್ಬಂದಿಗೂ ಬಾಡಿವೋರ್ನ್ ಕ್ಯಾಮೆರಾ
ಅದೇ ಚಾಳಿ ಮುಂದುವರೆಸಿದ್ದ ಜಾವದ್ ಜುಲೈ 15ನೇ ತಾರೀಖು ತಡರಾತ್ರಿ ಜಿಷಾನ್ ಮನೆ ಬಳಿ ಹೋಗಿ ಮತ್ತೆ ಗಲಾಟೆ ಶುರು ಮಾಡಿ ಮಾಜಿ ಪ್ರೇಯಸಿಗೆ ಲವ್ ಮಾಡು ಅಂತಾ ದುಂಬಾಲು ಬಿದ್ದಿದ್ದ . ಈ ಗಲಾಟೆ ಅತಿರೇಕಕ್ಕೆ ಹೋಗಿ ಜಿಷಾನ್ ಜಾವದ್ ನ ಕುತ್ತಿಗೆ ಭಾಗಕ್ಕೆ ಕತ್ತರಿಯಿಂದ ಇರಿದಿದ್ದ.
ತೀವ್ರ ರಕ್ತ ಸ್ರಾವವಾಗುತ್ತಿದ್ದರೂ ಆಸ್ಪತ್ರೆಗೆ ತೆರಳಿ ಪ್ರಾಣ ಉಳಿಸುವಂತೆ ವೈದ್ಯರ ಬಳಕ ಬೇಡಿಕೊಂಡಿದ್ದ. ಆದರೆ ಚಿಕಿತ್ಸೆ ನೀಡುವ ವೇಳೆಗೆ ಜಾವದ್ ಮೃತಪಟ್ಟಿದ್ದ. ಇತ್ತ ಕೊಲೆ ಮಾಡಿದ್ದ ಜಿಷಾನ್ ನಾನು ಕೊಲೆ ಮಾಡಿಲ್ಲ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದ.
ಇದನ್ನೂ ಓದಿ: ಮಾರ್ಕೊಪೋಲೋ-ಟಾಟಾ ಮೋಟಾರ್ ಬಿಕ್ಕಟ್ಟು ಬಹುತೇಕ ಇತ್ಯರ್ಥ
ಕೊನೆಗೆ ತಮ್ಮದೇ ಸ್ಟೈಲಲ್ಲಿ ವಿಚಾರಿಸಿದ ಪೊಲೀಸರ ಮುಂದೆ ಜಿಷಾನ್ ತಪ್ಪೊಪ್ಪಿಕೊಂಡು ಈಗ ಜೈಲು ಸೇರಿದ್ದಾನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.