Shivamogga: ಕೊಲೆ ಪ್ರಕರಣದ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು!

ಆರೋಪಿ ಜಬೀ ವಿರುದ್ಧ ಸುಲಿಗೆ, ಡಕಾಯಿತಿ, ಕೊಲೆ ಯತ್ನ, ಗಾಂಜಾ ಮಾರಾಟಕ್ಕೆ ಸೇರಿದಂತೆ ಒಟ್ಟು 11 ಪ್ರಕರಣಗಳು ದಾಖಲಾಗಿವೆ.

Written by - Zee Kannada News Desk | Last Updated : Oct 26, 2022, 01:01 PM IST
  • ಶಿವಮೊಗ್ಗದ ವೆಂಕಟೇಶ್ ನಗರದಲ್ಲಿ ಖಾಸಗಿ ಆಸ್ಪತ್ರೆ ಉದ್ಯೋಗಿಯ ಮರ್ಡರ್
  • ಕೊಲೆಗೆ ಬಳಸಿದ್ದ ಆಯುಧ ಜಪ್ತಿಗೆ ತೆರಳಿದ್ದ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಆರೋಪಿಯಿಂದ ಹಲ್ಲೆ
  • ಜೀವ ರಕ್ಷಣೆಗೆ ಕೊಲೆ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಶಿವಮೊಗ್ಗ ಪೊಲೀಸರು
Shivamogga: ಕೊಲೆ ಪ್ರಕರಣದ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು! title=
ಕೊಲೆ ಪ್ರಕರಣದ ಆರೋಪಿ ಕಾಲಿಗೆ ಗುಂಡು!

ಶಿವಮೊಗ್ಗ: ಕೊಲೆ ಪ್ರಕರಣದ ಆರೋಪಿಯೊಬ್ಬನ ಕಾಲಿಗೆ ಶಿವಮೊಗ್ಗ ಪೊಲೀಸರು ಗುಂಡು ಹಾರಿಸಿರುವ ಘಟನೆ ನಡೆದಿದೆ. ವೆಂಕಟೇಶ್​ ನಗರದಲ್ಲಿ ಸೋಮವಾರ ತಡರಾತ್ರಿ ಖಾಸಗಿ ಆಸ್ಪತ್ರೆ ಉದ್ಯೋಗಿ ವಿಜಯ್ (37) ಎಂಬುವರ ಕೊಲೆಯಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿ ಆಧಾರದ ಮೇಲೆ ಜಬೀ, ದರ್ಶನ್ ಹಾಗೂ ಕಟ್ಟೆ ಕಾರ್ತಿಕ್ ಎಂಬುವವರನ್ನು ಬಂಧಿಸಿದ್ದರು.

ಆರೋಪಿಗಳು ಹರ್ಷ ಫರ್ನ್ ಆಸ್ಪತ್ರೆಯ ಹಿಂಭಾಗದ ಚಾನಲ್ ಬಳಿ ಕೊಲೆಗೆ ಬಳಸಿದ್ದ ಆಯುಧವನ್ನು ಎಸೆದಿದು ಎಸ್ಕೇಪ್ ಆಗಿದ್ದರು. ಆರೋಪಿ ಜಬೀಯನ್ನು ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರ ಜಪ್ತಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಆರೋಪಿ ಜಬೀ ತನೆಗೆ ಬೆಂಗಾವಲಾಗಿದ್ದ ಸಿಬ್ಬಂದಿ ರೋಷನ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ.  

ಇದನ್ನೂ ಓದಿ: Bangalore crime : ಪ್ರಿಯತಮನ ಜೊತೆ ಚಕ್ಕಂದವಾಡಲು ಗಂಡನ ಕೊಲೆ: ಪತ್ನಿ ಜೊತೆ ಲವ್ವರ್ ಅಂದರ್‌

ಅದೃಷ್ಟಕ್ಕೆ ಜಬೀಯ ದಾಳಿಯಿಂದ ಸಿಬ್ಬಂದಿ ತಪ್ಪಿಸಿಕೊಂಡರಾದರೂ ಗಾಯಗೊಂಡಿದ್ದಾರೆ. ಈ ವೇಳೆ ಸಿಬ್ಬಂದಿ ಹಾಗೂ ತಮ್ಮನ್ನು ರಕ್ಷಿಸಿಕೊಳ್ಳಲು ಕುಂಸಿ ಪಿಐ ಹರೀಶ್ ಪಟೇಲ್, ಜಬೀ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಗಾಯಗೊಂಡ ಸಿಬ್ಬಂದಿ ರೋಷನ್​ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಜಬೀಯನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿ ಜಬೀ ವಿರುದ್ಧ ಸುಲಿಗೆ, ಡಕಾಯಿತಿ, ಕೊಲೆ ಯತ್ನ, ಗಾಂಜಾ ಮಾರಾಟಕ್ಕೆ ಸೇರಿದಂತೆ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ದರ್ಶನ್ ವಿರುದ್ಧ ಡಕಾಯಿತಿ, ಸುಲಿಗೆ ಸೇರಿ 7 ಪ್ರಕರಣ ಹಾಗೂ ಕಟ್ಟೆ ಕಾರ್ತಿಕ್ ವಿರುದ್ಧ 3 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿಷವಾದ ಜೀವ ಜಲ, ಕಲುಷಿತ ನೀರು ಸೇವಿಸಿ ಇಬ್ಬರು ಮೃತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News