ಬೆಂಗಳೂರು: ಮದುವೆಯಾಗುತ್ತೇನೆ ಎಂದು ನಂಬಿಸಿ ಯುವತಿಯನ್ನು 7 ತಿಂಗಳ ಗರ್ಭಿಣಿ ಮಾಡಿ ಯುವಕನೊಬ್ಬ ಕೈಕೊಟ್ಟಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸಾಗರ್ ಎಂಬಾತ ಯುವತಿಯೊಬ್ಬಳಿಗೆ ವಂಚಿಸಿ ಪರಾರಿಯಾಗಿದ್ದಾನೆ.
ಸಂತ್ರಸ್ತೆ ಲ್ಯಾಬ್ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಇದೇ ಲ್ಯಾಬ್ನಲ್ಲಿ ಸಾಗರ್ ಸಿಸ್ಟಮ್ ವರ್ಕ್ ಮಾಡಿಕೊಂಡಿದ್ದ. ಈ ನಡುವೆ ಇಬ್ಬರ ನಡುವೆ ಲವ್ ಶುರುವಾಗಿತ್ತು. ಯುವತಿಯನ್ನು ಪ್ರೀತಿ ಪ್ರೇಮ ಎಂದು ಪುಸಲಾಯಿಸಿದ್ದ ಸಾಗರ್ ಹಲವು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಇದಕ್ಕೆ ಯುವತಿ ವಿರೋಧಿಸಿದರೂ ಸಹ ಲೈಂಗಿಕ ಕ್ರಿಯೆ ನಡೆಸಿದ್ದ. ಇದರಿಂದಾಗಿ ಯುವತಿ 7 ತಿಂಗಳ ಗರ್ಭಿಣಿಯಾಗಿದ್ದಳು. ಈ ವಿಚಾರ ತಿಳಿದ ಈತ ಯುವತಿಗೆ ಬಲವಂತವಾಗಿ ಗರ್ಭಪಾತ ಮಾತ್ರೆ ನುಂಗಿಸಿದ್ದ. ಇದರಿಂದಾಗಿ ಯುವತಿಗೆ ತೀವ್ರ ರಕ್ತಸ್ರಾವವಾಗಿ 7 ತಿಂಗಳ ಮಗು ಹೊರಬಂದಿತ್ತು. ನಂತರ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿತ್ತು.
ಇದನ್ನೂ ಓದಿ- ನಿಮ್ಮ ಹೆಸರಲ್ಲಿ ಡ್ರಗ್ಸ್ ಸಪ್ಲೈ ಆಗುತ್ತಿದೆ ಎಂದು ಬೆದರಿಕೆ ಹಾಕಿ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿದ ಸೈಬರ್ ಖದೀಮರು
ವಿಚಾರ ತಿಳಿದ ಯುವತಿ ಪೋಷಕರು ಸಾಗರ್ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಈ ವೇಳೆ ಯುವತಿ ಪೋಷಕರ ಜೊತೆ ರಾಜಿ ಮಾಡಿಕೊಂಡು ಯುವತಿಗೆ ತಾಳಿ ಕಟ್ಟಿ ಮದುವೆಯಾಗಿದ್ದ. ನಂತರ ಅಧಿಕೃತವಾಗಿ ಯುವತಿ ಅಧಿಕೃತವಾಗಿ ರಿಜಿಸ್ಟರ್ ಆಗಿ ಮದುವೆಯಾಗುವಂತೆ ಕೇಳಿದ್ದಳು. ಆದರೆ ಕೀಚಕ ಸಾಗರ್ ಮಾತ್ರ ಈಗ ಫೋನ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ- ಉದ್ಯೋಗದ ಹೆಸರಿನಲ್ಲಿ ಮಹಾ ಮೋಸ: ಯುವಕರೇ ಎಚ್ಚರ! ಎಚ್ಚರ! ಎಚ್ಚರ!
ಈ ಘಟನೆಯಿಂದ ಮನನೊಂದ ಸಂತ್ರಸ್ತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದಾಳೆ. ಪ್ರಕರಣ ಸಂಬಂಧ ಸಾಗರ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.