Snake Skin in Food: ಆಹಾರದಲ್ಲಿ ಪತ್ತೆಯಾಯ್ತು ಹಾವಿನ ಚರ್ಮ!

ಈ ಘಟನೆ ನಡೆದಿರುವುದು ತಿರುವಂತಪುರಂನ ನೆಡುಮಂಗಡ ಪುರಸಭೆ ವ್ಯಾಪ್ತಿಯಲ್ಲಿರುವ ಚಂತಮುಕ್ಕಿನ ಶಾಲಿಮಾರ್ ಹೊಟೇಲ್‌ನಲ್ಲಿ ಎಂದು ತಿಳಿದುಬಂದಿದೆ. ಪ್ರಿಯಾ ಎಂಬ ಗ್ರಾಹಕರು ಶಾಲಿಮಾರ್‌ ಹೊಟೇಲ್‌ನಿಂದ ಪರೋಟವನ್ನು ಖರೀದಿಸಿದ್ದಾರೆ. 

Written by - Bhavishya Shetty | Last Updated : May 8, 2022, 12:13 PM IST
  • ಪರೋಟ ಪ್ಯಾಕ್‌ನಲ್ಲಿ ಹಾವಿನ ಚರ್ಮ ಪ್ರತ್ಯಕ್ಷ
  • ಕೇರಳದ ತಿರುವನಂತಪುರದಲ್ಲಿ ಘಟನೆ
  • ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ, ಶೋಕಾಸ್‌ ನೋಟೀಸ್‌ ಜಾರಿ
Snake Skin in Food: ಆಹಾರದಲ್ಲಿ ಪತ್ತೆಯಾಯ್ತು ಹಾವಿನ ಚರ್ಮ! title=
Snake Skin in Food

ಕೇರಳ: ಕಳೆದ ಕೆಲ ದಿನಗಳಿಂದ ಇಲ್ಲಿನ ಆಹಾರ ವ್ಯವಸ್ಥೆಯಲ್ಲಿ ಸಮಸ್ಯೆಗಳು ಕಂಡುಬರುತ್ತಿದೆ. ಇತ್ತೀಚೆಯಷ್ಟೆ ಶವರ್ಮಾ ತಿಂದು ಇಬ್ಬರು ಸಾವನ್ನಪ್ಪಿದ್ದರು. ಈ ಘಟನೆ ನಡೆದ ಬೆನ್ನಲ್ಲೇ ಮತ್ತೊಂದು ಪ್ರಕರಣ ದಾಖಲಾಗಿದೆ. ಗ್ರಾಹಕರು ಖರೀದಿಸಿದ ಆಹಾರದ ಪೊಟ್ಟಣದಲ್ಲಿ ಹಾವಿನ ಚರ್ಮ ಪತ್ತೆಯಾಗಿದೆ. 

ಇದನ್ನು ಓದಿ: ಚೇರ್‌ನಲ್ಲಿ ಕುಳಿತ ನಾಲ್ವರ ಶವಗಳು: ಇದು ಸಂಶೋಧನೆಯಂತೆ!

ಈ ಘಟನೆ ನಡೆದಿರುವುದು ತಿರುವಂತಪುರಂನ ನೆಡುಮಂಗಡ ಪುರಸಭೆ ವ್ಯಾಪ್ತಿಯಲ್ಲಿರುವ ಚಂತಮುಕ್ಕಿನ ಶಾಲಿಮಾರ್ ಹೊಟೇಲ್‌ನಲ್ಲಿ ಎಂದು ತಿಳಿದುಬಂದಿದೆ. ಪ್ರಿಯಾ ಎಂಬ ಗ್ರಾಹಕರು ಶಾಲಿಮಾರ್‌ ಹೊಟೇಲ್‌ನಿಂದ ಪರೋಟವನ್ನು ಖರೀದಿಸಿದ್ದಾರೆ. ಬಳಿಕ ಆಕೆ ಅದನ್ನು ತೆರೆದು ನೋಡಿದಾಗ ಪ್ಯಾಕಿಂಗ್‌ ಮಾಡಲು ಬಳಸಿದ ಪೇಪರ್‌ನ ತುಣುಕಿನಲ್ಲಿ ಹಾವಿನ ಚರ್ಮ ಇರುವುದು ಗೋಚರವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾ ದೂರು ನೀಡಿದ್ದಾರೆ. 

ಇನ್ನು ದೂರು ದಾಖಲಿಸಿಕೊಂಡ ಆಹಾರ ಸುರಕ್ಷತಾ ಅಧಿಕಾರಿಗಳು, ಹೋಟೇಲ್‌ಗೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಲ್ಲದೆ, ಬಂದ್‌ ಮಾಡುವಂತೆ ಸೂಚಿಸಿದ್ದಾರೆ. ಜೊತೆಗೆ ಶೋಕಾಸ್‌ ನೋಟೀಸ್‌ನ್ನು ಜಾರಿಗೊಳಿಸಲಾಗಿದೆ. 

ಇದನ್ನು ಓದಿ: Weight Loss: ತೂಕ ಕಳೆದುಕೊಳ್ಳುವಾಗ ಈ ತಪ್ಪುಗಳನ್ನು ಮಾಡಲೇಬಾರದು

ಇತ್ತೀಚೆಗೆಯಷ್ಟೆ ಕೇರಳದ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಶವರ್ಮಾ ತಿಂದು ತೀವ್ರ ಅಸ್ವಸ್ಥವಾಗಿ ಆಸ್ಪತ್ರೆ ಸೇರಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಘಟನೆ ಕಳೆದು ದಿನಗಳು ಉರುಳುತ್ತಿದೆ ಅಷ್ಟೇ, ಈ ಸಂದರ್ಭದಲ್ಲಿ ಮತ್ತೆ ಇಂತಹ  ಘಟನೆಗಳು ನಡೆದಿರುವುದು ಆಘಾತಕಾರಿ ಎನ್ನಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News