ಶಹಜಹಾನ್‌ಪುರ (ಉತ್ತರ ಪ್ರದೇಶ) : ಲಿಂಗ ಬದಲಿಸುವುದಾಗಿ ನಂಬಿಸಿದ ಮಂತ್ರವಾದಿಯೊಬ್ಬ, ಮಹಿಳೆಯ ಪ್ರಾಣವನ್ನೇ ತೆಗೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಹಿಳೆಯನ್ನು ಕೊಂದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಸ್ಥಳೀಯ ಮಂತ್ರವಾದಿಯನ್ನು ಸಹ ಬಂಧಿಸಿದ್ದಾರೆ. ಮೃತಳ ಸಹೋದರನ ದೂರಿನ ಮೇರೆಗೆ ಪೊಲೀಸರು ಆಕೆಯ 25 ವರ್ಷದ ಸಲಿಂಗ ಸಂಗಾತಿಯನ್ನು ಸಹ ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಶಹಜಹಾನ್‌ಪುರದ ನಿವಾಸಿ ಮೃತ ಯುವತಿ ಮತ್ತು ಲಖಿಂಪುರ ಖೇರಿಯಲ್ಲಿ ವಾಸಿಸುತ್ತಿದ್ದ 25 ವರ್ಷದ ಮತ್ತೊಬ್ಬ ಯುವತಿಯ ಜೊತೆ ಓದುತ್ತಿದ್ದಳು. ಕಾಲೇಜಿನಲ್ಲಿ ಇವರಿಬ್ಬರ ಪರಿಚಯವಾಗಿತ್ತು. ಇಬ್ಬರೂ ಡಿಗ್ರಿ ಓದುತ್ತಿದ್ದ ಸಮಯದಲ್ಲಿ ಭೇಟಿಯಾಗಿದ್ದರು ಮತ್ತು ಕೆಲವು ತಿಂಗಳುಗಳಿಂದ ಸಂಬಂಧ ಹೊಂದಿದ್ದರು.
ಲಖಿಂಪುರ ಖೇರಿ ಮಹಿಳೆ ತನ್ನ ಕುಟುಂಬದವರ ಒತ್ತಾಯದ ಹೊರತಾಗಿಯೂ ಪುರುಷನನ್ನು ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳಿದ್ದಳು. ತನ್ನ ಸಂಬಂಧದ ಬಗ್ಗೆಯೂ ಮನೆಯವರಿಗೆ ತಿಳಿಸಿದ್ದಳು. ಇಬ್ಬರೂ ಸಲಿಂಗಿಗಳಾದ ಕಾರಣ ಸಾಮಾಜಿಕ ಕಳಂಕಕ್ಕೆ ಹೆದರಿದ ಎರಡೂ ಕುಟುಂಬಗಳೂ ಇದನ್ನು ವಿರೋಧಿಸಿದ್ದವು ಎಂದು ಶಹಜಹಾನ್‌ಪುರದ ಎಎಸ್‌ಪಿ ಸುಧೀರ್ ಜೈಸ್ವಾಲ್ ಹೇಳಿದ್ದಾರೆ.
ಇದನ್ನೂ ಓದಿ: Crime News : ಚಲಿಸುತ್ತಿದ್ದ ಆಟೋದಲ್ಲಿ ಕತ್ತು ಸೀಳಿ ಪ್ರೇಯಸಿಯ ಕಗ್ಗೊಲೆ
ರಾಮ್ ನಿವಾಸ್ ಎಂದು ಗುರುತಿಸಲಾದ ಮಂತ್ರವಾದಿ, ಬಂಧಿತ ಯುವತಿಯ ತಾಯಿಯೊಂದಿಗೆ ಸಂಪರ್ಕದಲ್ಲಿದ್ದ. ಹೀಗಾಗಿ ಆತ ಮೃತ ಯುವತಿಯ ಲಿಂಗವನ್ನು ಬದಲಾಯಿಸುವುದಾಗಿ ನಂಬಿಸಿದ್ದಾನೆ. ಇದರಿಂದ ಮೃತ ಯುವತಿ ಮತ್ತು ಆಕೆ ಮದುವೆ ಆಗುವುದು ಸುಲಭವಾಗುತ್ತದೆ ಎಂದು ಹೇಳಿದ್ದ ಎಂದು ಲಖಿಂಪುರ ಖೇರಿಯ ಮೊಹಮ್ಮದಿ ಪೊಲೀಸ್ ಠಾಣೆಯ ಉಸ್ತುವಾರಿ ಅಂಬರ್ ಸಿಂಗ್ ಹೇಳಿದ್ದಾರೆ.
ಹೀಗಾಗಿ ಸಲಿಂಗ ಪ್ರೇಮಿಯ ಜೊತೆ ಮದುವೆಯಾಗಲು ತನ್ನ ಲಿಂಗವನ್ನು ಬದಲಾಯಿಸುವ ಭರವಸೆಯೊಂದಿಗೆ ಮೃತ ಯುವತಿ ಈ ಮಂತ್ರವಾದಿಯ ಮಾತಿಗೆ ಮರುಳಾಗಿದ್ದಳು. ಅಂಬರ್ ಸಿಂಗ್ ಅವರ ಪ್ರಕಾರ, ಮೃತ ಯುವತಿಯನ್ನ ಏಪ್ರಿಲ್ 18 ರಂದು ಲಖಿಂಪುರ ಖೇರಿಯಿಂದ ಸುಮಾರು 50 ಕಿಮೀ ದೂರದಲ್ಲಿರುವ ಪ್ರದೇಶಕ್ಕೆ ಕರೆಸಲಾಯಿತು.
ಏಪ್ರಿಲ್ 26 ರಂದು ಆಕೆಯ ಸಹೋದರ ಪರ್ವಿಂದರ್ ಕುಮಾರ್ ಅವರು ತನ್ನ ಸೋದರಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ಸಂತ್ರಸ್ತೆಯ ಕಾಲ್ ರೆಕಾರ್ಡ್‌ರಗಳನ್ನು ಸ್ಕ್ಯಾನ್ ಮಾಡಿದಾಗ ಬಂಧೀತ ಯುವತಿಯ ಜೊತೆ ಮೃತಳ ಸಂಬಂಧದ ಬಗ್ಗೆ ತಿಳಿದುಕೊಂಡ. ಇಬ್ಬರೂ ದೀರ್ಘಕಾಲದವರೆಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು.
ಇದನ್ನೂ ಓದಿ: ಹೆಂಡತಿಗೆ ಹೆದರಿಸಲು ಹೋಗಿ ತಾನೇ ಬೆಂಕಿ ಹಚ್ಚಿಕೊಂಡ ಭೂಪ!
ಕೊಲೆ, ಕ್ರಿಮಿನಲ್ ಸಂಚು ಸೇರಿದಂತೆ ಹಲವು ಆರೋಪಗಳಡಿ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ. ಅಲ್ಲದೇ ಮತ್ರವಾದಿಯನ್ನೂ ಪೊಲೀಸರು ಸೆರೆ ಹಿಡಿದಿದ್ದಾರೆ. ಆಕೆಯ ಲಿಂಗವನ್ನು ಬದಲಾಯಿಸುವ ಧಾರ್ಮಿಕ ಕ್ರಿಯೆಯನ್ನು ನಡೆಸುವ ನೆಪದಲ್ಲಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಂದಿರುವುದಾಗಿ ಮಂತ್ರವಾದಿ ಒಪ್ಪಿಕೊಂಡಿದ್ದಾನೆ.
ಅರಣ್ಯ ಪ್ರದೇಶದಲ್ಲಿ ಗೋಮತಿ ನದಿಯ ದಡದಲ್ಲಿ ಶವವನ್ನು ವಿಲೇವಾರಿ ಮಾಡಿದ ನಂತರ ಮಂತ್ರವಾದಿ ಪರಾರಿಯಾಗಿದ್ದಾನೆ ಎಂದು ಎಎಸ್ಪಿ ತಿಳಿಸಿದ್ದಾರೆ. ಬಂಧಿತ ಯುವತಿ ಮನೆ ಬಳಿ ಪೊಲೀಸರು 11 ಮೂಳೆಗಳನ್ನು ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.