ಸರ್ ಎಂ ವಿಶ್ವೇಶ್ವರಯ್ಯ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್ ಗೌರವ

ಇಂದು ಸರ್ ಎಂ ವಿಶ್ವೇಶ್ವರಯ್ಯನವರ 157ನೇ ಹುಟ್ಟುಹಬ್ಬ.ಆದ್ದರಿಂದ ಅವರ  ಹುಟ್ಟುಹಬ್ಬದ ಪ್ರಯುಕ್ತ ಗೂಗಲ್ ಅವರ ಡೂಡಲ್ ನ್ನು ಬಿಡುಗಡೆ ಮಾಡುವ ಮೂಲಕ ಗೌರವ ಸಲ್ಲಿಸಿದೆ. 

Last Updated : Sep 15, 2018, 11:43 AM IST
ಸರ್ ಎಂ ವಿಶ್ವೇಶ್ವರಯ್ಯ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್ ಗೌರವ title=

ಬೆಂಗಳೂರು: ಇಂದು ಸರ್ ಎಂ ವಿಶ್ವೇಶ್ವರಯ್ಯನವರ 157ನೇ ಹುಟ್ಟುಹಬ್ಬ.ಆದ್ದರಿಂದ ಅವರ  ಹುಟ್ಟುಹಬ್ಬದ ಪ್ರಯುಕ್ತ ಗೂಗಲ್ ಅವರ ಡೂಡಲ್ ನ್ನು ಬಿಡುಗಡೆ ಮಾಡುವ ಮೂಲಕ ಗೌರವ ಸಲ್ಲಿಸಿದೆ. 

ಮೈಸೂರು ಸಂಸ್ಥಾನದಲ್ಲಿ 19 ನೇ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ದೇಶದ ಅತ್ಯುನ್ನತ ಗೌರವ ಪುರಸ್ಕಾರವಾದ ಭಾರತ ರತ್ನವನ್ನು ಪಡೆದಿದ್ದಾರೆ. ವೃತ್ತಿಯಲ್ಲಿ ಇಂಜನಿಯರ್ ಆಗಿದ್ದ ಅವರು ಕನ್ನಂಬಾಡಿ ಅಣೆಕಟ್ಟನ್ನು ಕಟ್ಟುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಹೈದರಾಬಾದ್ ನಲ್ಲಿ  ಪ್ರವಾಹ ನಿಯಂತ್ರಣ ಪದ್ದತಿಗೆ ಯೋಜನೆಯನ್ನು ರೂಪಿಸಿದ್ದರು.

ಕೋಲಾರ ಜಿಲ್ಲೆ(ಇಂದಿನ ಚಿಕ್ಕಬಳ್ಳಾಪುರ್ ಜಿಲ್ಲೆ)ಮುದ್ದೇನಹಳ್ಳಿಯಲ್ಲಿ ಸೆಪ್ಟಂಬರ್ 15 1861 ರಂದು ಜನಿಸಿದ ಸರ್ ಎಂವಿ. ಮುಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವಿಯನ್ನು ಪಡೆದರು. ಮುಂದೆ ಪುಣೆಯ ಕಾಲೇಜ್ ಆಫ್ ಇಂಜನಿಯರಿಂಗ್ ನಲ್ಲಿ ತಂತ್ರಜ್ಞಾನದಲ್ಲಿ ಪದವಿ ಪಡೆದರು. ಬೆಂಗಳೂರಿನಲ್ಲಿರುವ  ಸರ್ಕಾರಿ ಇಂಜನಿಯರಿಂಗ್ ಕಾಲೇಜ್ ಸ್ಥಾಪನೆ ಸರ್ ಎಂ ವಿ ಯವರೇ ಮೂಲ ಕಾರಣಕರ್ತರು ಈಗ ಆ ಕಾಲೇಜನ್ನು ಸರ್ ಎಂ ವಿ ಅವರ ಹೆಸರಿನಲ್ಲಿ ಕರೆಯಲಾಗುತ್ತದೆ. 

ಸರ್ ಎಂ ವಿ ಏಪ್ರಿಲ್ 12 1962 ರಂದು ತಮ್ಮ 101 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. 

 

 

Trending News