Birsa Munda: ಧರತಿ ಕಾ ಅಬ್ಬಾ ಬಿರ್ಸಾ ಮುಂಡಾ

Written by - Zee Kannada News Desk | Last Updated : Jun 9, 2021, 04:53 PM IST
  • ಇಂದು ದೇಶಾದ್ಯಂತ ಆದಿವಾಸಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ.
  • ಮುಂಡಾ ಬುಡಕಟ್ಟಿನ ಯುವಕ ಬಿರ್ಸಾ ಮುಂಡಾ ಈಗ ಬಂಗಾಳ, ಬಿಹಾರ ಮತ್ತು ಜಾರ್ಖಂಡ್ ಗಡಿಯಲ್ಲಿರುವ ಪ್ರದೇಶಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದರು.
Birsa Munda: ಧರತಿ ಕಾ ಅಬ್ಬಾ ಬಿರ್ಸಾ ಮುಂಡಾ title=
Photo Courtesy: Twitter

ಇಂದು ದೇಶಾದ್ಯಂತ ಆದಿವಾಸಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ.ಮುಂಡಾ ಬುಡಕಟ್ಟಿನ ಯುವಕ ಬಿರ್ಸಾ ಮುಂಡಾ ಈಗ ಬಂಗಾಳ, ಬಿಹಾರ ಮತ್ತು ಜಾರ್ಖಂಡ್ ಗಡಿಯಲ್ಲಿರುವ ಪ್ರದೇಶಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದರು. 

ಇಂದು ಬಿರ್ಸಾ ಮುಂಡಾ (Birsa Munda) ಅವರ ಹುತಾತ್ಮ ದಿನವಾಗಿರುವ ಹಿನ್ನಲೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಗೌರವ ಸಲ್ಲಿಸಿದ್ದಾರೆ.:ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ, ಧರ್ತಿ ಅಬಾ" ಬಿರ್ಸಾ ಮುಂಡಾ ಅವರ ಪುಣ್ಯತಿಥಿ ನಿಮಿತ್ತ ಅವರನ್ನು ಸ್ಮರಿಸಲಾಗುತ್ತಿದೆ.ನಿರ್ಭೀತ ಬುಡಕಟ್ಟು ನಾಯಕ ದಬ್ಬಾಳಿಕೆಯ ಬ್ರಿಟಿಷ್ ಆಡಳಿತದ ವಿರುದ್ಧ ಬುಡಕಟ್ಟು ಚಳವಳಿಯನ್ನು ಮುನ್ನಡೆಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ "ಎಂದು ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ.

ಇನ್ನೊಂದೆಡೆಗೆ ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಗೌರವ ಸಲ್ಲಿಸುತ್ತಾ" ಮೂಢ ನಂಬಿಕೆ ಮತ್ತು ರೋಗಗಳ ಹರಡುವಿಕೆಯನ್ನು ನಿರ್ಮೂಲನೆ ಮಾಡುವಲ್ಲಿ ಬಿರ್ಸಾ ಮುಂಡಾ ಅವರ ಪ್ರಯತ್ನವನ್ನು ಶ್ಲಾಘಿಸಿದರು. ಬಿರ್ಸಾ ಮುಂಡಾ ಅವರ ಸ್ಪೂರ್ತಿಯಿಂದಾಗಿ ನಾವು COVID-19 ವಿರುದ್ಧ ಹೋರಾಡಬೇಕಾಗಿದೆ" ಎಂದು ಸ್ಮರಿಸಿದ್ದಾರೆ.

ಇದನ್ನೂ ಓದಿ: ಬ್ರಿಟಿಷರ ವಿರುದ್ಧ ರಣ ಕಹಳೆಯೂದಿದ ಜನಪದ ನಾಯಕ ಬಿರ್ಸಾ ಮುಂಡಾ

ಛೋಟಾನಾಗ್ಪುರ್ ಪ್ರಸ್ಥಭೂಮಿಯ ಬುಡಕಟ್ಟು ಪ್ರದೇಶದಲ್ಲಿ ಜನಿಸಿದ ಬಿರ್ಸಾ ಮುಂಡಾ ಅವರು ಕೇವಲ ಹದಿಹರೆಯದವರಾಗಿದ್ದಾಗ ಬುಡಕಟ್ಟು ಹಕ್ಕುಗಳಿಗಾಗಿ ಹೋರಾಡಲು ಪ್ರಾರಂಭಿಸಿದರು. ಬಿರ್ಸಾ ಮುಂಡಾ ಜರ್ಮನ್ ಮಿಷನ್ ಶಾಲೆಯಲ್ಲಿ ಅಧ್ಯಯನ ಮಾಡಿದರೂ ಅವರು ಕೆಲವೇ ವರ್ಷಗಳಲ್ಲಿ ಹೊರಗುಳಿದರು. ಬ್ರಿಟಿಷ್ ವಸಾಹತುಶಾಹಿ ದೊರೆಗಳ ದಬ್ಬಾಳಿಕೆಯನ್ನು ನೋಡಿದ ಬಿರ್ಸಾ ಮುಂಡಾ ತನ್ನದೇ ಆದ 'ಬಿರ್ಸೈಟ್'  ಪಂಥವನ್ನು ಪ್ರಾರಂಭಿಸಿದರು. ಮುಂಡಾ ಮತ್ತು ಒರಾನ್ ಬುಡಕಟ್ಟು ಜನಾಂಗದವರಲ್ಲಿ ಅನೇಕರು ಅವರ ಪಂಥ ಮತ್ತು ಅವರ ಆಂದೋಲನಕ್ಕೆ ಸೇರಿದರು.

ವಸಾಹತುಶಾಹಿ ಆಡಳಿತಗಾರರ ದೌರ್ಜನ್ಯದ ಬಗ್ಗೆ ಅವರ ಅರಿವು ಹೆಚ್ಚಾಗುತ್ತಿದ್ದಂತೆ, ಬಿರ್ಸಾ ಮುಂಡಾ 1886 ಮತ್ತು 1890 ರ ನಡುವೆ ಚೈಬಾಸದಲ್ಲಿ ಮಿಷನರಿ ವಿರೋಧಿ ಮತ್ತು ಸ್ಥಾಪನಾ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಮಾರ್ಚ್ 3, 1900 ರಂದು ಅವರನ್ನು ಬ್ರಿಟಿಷ್ ಪೊಲೀಸರು ಬಂಧಿಸಿದರು. ಅದೇ ವರ್ಷ ಜೂನ್ 9 ರಂದು ರಾಂಚಿ ಜೈಲಿನಲ್ಲಿ 25 ನೇ ವಯಸ್ಸಿನಲ್ಲಿ ಬಿರ್ಸಾ ಮುಂಡಾ ಹುತಾತ್ಮರಾದರು. ನವೆಂಬರ್ 15, 2000 ರಂದು ಜಾರ್ಖಂಡ್ ಅವರ ಜನ್ಮ ವಾರ್ಷಿಕೋತ್ಸವದಂದು ವಿಭಜಿಸಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News