Subhash Chandra Bose Jayanti 2021ನ್ನು 'ಪರಾಕ್ರಮ ದಿನ' ಎಂದು ಆಚರಿಸಲು ಮುಂದಾದ Modi ಸರ್ಕಾರ

Subhash Chandra Bose Jayanti 2021: ಈ ಕುರಿತು ಅಧಿಸೂಚನೆ ಹೊರಡಿಸಿರುವ ಕೇಂದ್ರ ಸಂಸ್ಕೃತಿ ಸಚಿವಾಲಯ, " ಭಾರತದ ಜನರು ಸುಭಾಸ್ ಚಂದ್ರ ಬೋಸ್ ಅವರ 125ನೇ ಜಯಂತಿ ವರ್ಷವನ್ನು  ದೇಶಕ್ಕೆ ಈ ಮಹಾನ್ ನಾಯಕ ನೀಡಿರುವ ಅಮೂಲ್ಯ ಕೊಡುಗೆಯನ್ನು ಸ್ಮರಿಸುತ್ತಾರೆ. ಹೀಗಾಗಿ ಭಾರತ ಸರ್ಕಾರ ಸುಭಾಶ್ ಚಂದ್ರ ಬೋಸ್ ಅವರ 125 ನೇ ಜಯಂತಿಯನ್ನು ಜನವರಿ 23, 2021ಕ್ಕೆ ಆರಂಭಿಸುವ ನಿರ್ಯಾಯ ಕೈಗೊಂಡಿದೆ. ಈ ದಿನದಂದು ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದಲ್ಲಿ ಅವರನ್ನು ಸತ್ಕರಿಸಲಾಗುವುದು" ಎಂದು ಹೇಳಿದೆ.

Written by - Nitin Tabib | Last Updated : Jan 19, 2021, 03:56 PM IST
  • ನೇತಾಜಿ ಜನ್ಮದಿನವನ್ನು ಪರಾಕ್ರಮ ದಿನವೆಂದು ಆಚರಿಸಲಾಗುವುದು.
  • ಈ ಕುರಿತು ಅಧಿಸೂಚನೆ ಹೊರಡಿಸಿದ ಕೇಂದ್ರ ಸಂಸ್ಕೃತಿ ಸಚಿವಾಲಯ
  • ಜನವರಿ 23ರಂದು ಸುಭಾಸ್ ಚಂದ್ರ ಬೋಸ್ ಅವರ 125ನೇ ಜಯಂತಿ ಆಚರಣೆ.
Subhash Chandra Bose Jayanti 2021ನ್ನು 'ಪರಾಕ್ರಮ ದಿನ' ಎಂದು ಆಚರಿಸಲು ಮುಂದಾದ Modi ಸರ್ಕಾರ title=
Subhash Chandra Bose Jayanti 2021(File Photo)

Subhash Chandra Bose Jayanti 2021 - ನವದೆಹಲಿ: ಪ್ರತಿ ವರ್ಷ ಆಚರಿಸಲಾಗುವ ಸ್ವತಂತ್ರ ಸೇನಾನಿ ಸುಭಾಸ್ ಚಂದ್ರ ಬೋಸ್ ಅವರ ಜಯಂತಿಯನ್ನು ಈ ಬಾರಿ 'ಪರಾಕ್ರಮ ದಿನ' ಎಂದು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಅಧಿಸೂಚನೆ ಹೊರಡಿಸಿರುವ ಕೇಂದ್ರ ಸಂಸ್ಕೃತಿ ಸಚಿವಾಲಯ ಜನವರು 23, 2021 ರಂದು ಸುಭಾಶ್ ಚಂದ್ರ ಬೋಸ್ ಜಯಂತಿ ಆಚರಿಸಲಾಗುವುದು ಎಂದು ಹೇಳಿದೆ.

ಜನವರಿ 23, 2021 ರಂದು ಸುಭಾಸ್ ಚಂದ್ರ ಬೋಸ್ ಅವರ 125ನೇ ಜಯಂತಿ ಉತ್ಸವವನ್ನು ಆಚರಿಸಲಾಗುತ್ತಿದೆ. ಈ ದಿನದಂದೇ ಕೇಂದ್ರ ಸರ್ಕಾರ ಅವರ ಜನ್ಮದಿನವನ್ನು ಪರಾಕ್ರಮ ದಿನ ರೂಪದಲ್ಲಿ ಆಚರಿಸಲಿದೆ.

ಇದಕ್ಕೆ ಸಂಬಂಧಿಸಿದಂತೆ ತನ್ನ ಅಧಿಸೂಚನೆಯಲ್ಲಿ ಬರೆದುಕೊಂಡಿರುವ ಸಂಸ್ಕೃತಿ ಇಲಾಖೆ,  " ಭಾರತದ ಜನರು ಸುಭಾಸ್ ಚಂದ್ರ ಬೋಸ್ ಅವರ 125ನೇ ಜಯಂತಿ ವರ್ಷವನ್ನು  ದೇಶಕ್ಕೆ ಈ ಮಹಾನ್ ನಾಯಕ ನೀಡಿರುವ ಅಮೂಲ್ಯ ಕೊಡುಗೆಯನ್ನು ಸ್ಮರಿಸುತ್ತಾರೆ. ಹೀಗಾಗಿ ಭಾರತ ಸರ್ಕಾರ ಸುಭಾಶ್ ಚಂದ್ರ ಬೋಸ್ ಅವರ 125 ನೇ ಜಯಂತಿಯನ್ನು ಜನವರಿ 23, 2021ಕ್ಕೆ ಆರಂಭಿಸುವ ನಿರ್ಯಾಯ ಕೈಗೊಂಡಿದೆ. ಈ ದಿನದಂದು ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದಲ್ಲಿ ಅವರನ್ನು ಸತ್ಕರಿಸಲಾಗುವುದು" ಎಂದು ಹೇಳಿದೆ.

"ರಾಷ್ಟ್ರದ ಪ್ರತಿ ಬೋಸ್ ಅವರಿಗಿದ್ದ ಅದಮ್ಯ ಭಾವನೆ ಹಾಗೂ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸಲು ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಸಂಸ್ಕೃತಿ ಸಚಿವಾಲಯ ಹೇಳಿದೆ. ಅಷ್ಟೇ ಅಲ್ಲ ಇನ್ನು ಮುಂದೆ ಪ್ರತಿ ವರ್ಷ ಜನವರಿ 23 ರಂದು ಅವರ ಜನ್ಮದಿನವನ್ನು 'ಪರಾಕ್ರಮ ದಿನ'ವೆಂದು ಆಚರಿಸಲಾಗುವುದು. ಇದರಿಂದ ದೇಶದ ಜನತೆ ಅದರಲ್ಲೂ ವಿಶೇಷವಾಗಿ ಯುವಕರಲ್ಲಿ ವಿಪತ್ತುಗಳನ್ನು ಎದುರಿಸಲು ನೇತಾಜಿ ಅವರ ಜೀವನದಿಂದ ಪ್ರೇರಣೆ ಸಿಗಲಿದೆ ಮತ್ತು ಅವರಲ್ಲಿ ದೇಶಭಕ್ತಿ ಹಾಗೂ ಸಾಹಸದ ಭಾವನೆ ತುಂಬಿಕೊಳ್ಳಲಿದೆ" ಎಂದು ಇಲಾಖೆ ಹೇಳಿದೆ. 

ಇದನ್ನು ಓದಿ- ಜನಗಣ ಮನ ರಾಷ್ಟ್ರಗೀತೆಯನ್ನು ತಿದ್ದುಪಡಿ ಮಾಡಲು ಪ್ರಧಾನಿ ಮೋದಿಗೆ ಸುಬ್ರಮಣ್ಯ ಸ್ವಾಮಿ ಪತ್ರ

Bangal Battle ಮಧ್ಯೆ ಸಡಗರ ದಿಂದ ಜನ್ಮದಿನ ಆಚರಣೆಗೆ ಮುಂದಾದ ಕೇಂದ್ರ
ಈ ಬಾರಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗಳಿವೆ. ಏತನ್ಮಧ್ಯೆ ಕೇಂದ್ರ ಸರ್ಕಾರ ಬಂಗಾಳಿ ಮಹಾ ನಾಯಕರಾಗಿರುವ ಸುಭಾಸ್ ಚಂದ್ರ ಬಾಸೆ ಅವರ ಜಯಂತಿಯನ್ನು ಸಡಗರದಿಂದ ಆಚರಿಸುವ ನಿರ್ಣಯ ಕೈಗೊಂಡಿದೆ. ಇದರ ಹಿಂದೆ ರಾಜಕೀಯ ಸ್ವಾರ್ಥ ಕೂಡ ಅಡಗಿದೆ. 

ಇದನ್ನು ಓದಿ-ದೆಹಲಿ ಕೆಂಪುಕೋಟೆಯಲ್ಲಿ ನೇತಾಜಿ ಮ್ಯೂಸಿಯಂ ಉದ್ಘಾಟಿಸಿದ ಪ್ರಧಾನಿ ಮೋದಿ

ಬೋಸ್ ಅವರ 125ನೇ ಜಯಂತಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಖುದ್ದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಕೊಲ್ಕತಾದಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ಕಾರ್ಯಕ್ರಮವೊಂದರಲ್ಲಿ ಶಾಮೀಲಾಗಲಿದ್ದಾರೆ ಹಾಗೂ ನೇತಾಜಿ ಸುಭಾಸ್ ಚಂದ್ರ ಮೆಮೋರಿಯಲ್ ಸಂಗ್ರಹಾಲಯವನ್ನು ಕೂಡ ಉದ್ಘಾಟಿಸಲಿದ್ದಾರೆ.

ಇದನ್ನು ಓದಿ- ನೇತಾಜಿ ಆಜಾದ್ ಹಿಂದ್ ಘೋಷಣೆಗೆ 75 ರ ಸಂಭ್ರಮ, ಕೆಂಪುಕೋಟೆಯಲ್ಲಿ ಮತ್ತೆ ಹಾರಿದ ತ್ರಿವರ್ಣ ಧ್ವಜ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News