WWE ಸೂಪರ್‌ಸ್ಟಾರ್ ಬ್ರೇ ವ್ಯಾಟ್ ʼವಿಂಡ್‌ಹ್ಯಾಮ್ ರೋಟುಂಡಾʼ ನಿಧನ..!

Windham Rotunda : ʼವಿಂಡ್‌ಹ್ಯಾಮ್ ರೋಟುಂಡಾʼ ಎಂದು ಖ್ಯಾತಿ ಗಳಿಸಿದ್ದ WWE ಸೂಪರ್‌ಸ್ಟಾರ್ ಬ್ರೇ ವ್ಯಾಟ್ ಅವರು ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

Written by - Krishna N K | Last Updated : Aug 25, 2023, 12:48 PM IST
  • WWE ಸೂಪರ್‌ಸ್ಟಾರ್ ಬ್ರೇ ವ್ಯಾಟ್ ಅವರು ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.
  • ಈ ಕುರಿತು ಟ್ರಿಪಲ್ ಎಚ್‌ ಸೋಷಿಯಲ್‌ ಮೀಡಿಯಾದ ಮೂಲಕ ಮಾಹಿತಿ ನೀಡಿದ್ದಾರೆ.
  • WWE ಅಧಿಕೃತವಾಗಿ ಕುಸ್ತಿ ಪಟುವಿನ ನಿಧನದ ಬಗ್ಗೆ ತಿಳಿಸುವ ಮೂಲಕ ಸಂತಾಪ ಸೂಚಿಸಿದೆ.
WWE ಸೂಪರ್‌ಸ್ಟಾರ್ ಬ್ರೇ ವ್ಯಾಟ್ ʼವಿಂಡ್‌ಹ್ಯಾಮ್ ರೋಟುಂಡಾʼ ನಿಧನ..! title=

Bray Wyatt  : WWE ಖ್ಯಾತಿಯ ಬ್ರೇ ವ್ಯಾಟ್ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಈ ಕುರಿತು ಟ್ರಿಪಲ್ ಎಚ್‌ ಸೋಷಿಯಲ್‌ ಮೀಡಿಯಾದ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೆ WWE ಅಧಿಕೃತವಾಗಿ ಕುಸ್ತಿ ಪಟುವಿನ ನಿಧನದ ಬಗ್ಗೆ ತಿಳಿಸುವ ಮೂಲಕ ಸಂತಾಪ ಸೂಚಿಸಿದೆ.

ಹೌದು.. WWE ಹಾಲ್ ಆಫ್ ಫೇಮರ್ ಮೈಕ್ ರೊಟುಂಡಾ ಅವರು ಕರೆ ಮಾಡಿ ವಿಂಡ್‌ಹ್ಯಾಮ್ ರೊಟುಂಡಾ - ಬ್ರೇ ವ್ಯಾಟ್ ಇಂದು ಮುಂಜಾನೆ ಅನಿರೀಕ್ಷಿತವಾಗಿ ನಿಧನರಾದರು ಎಂಬ ದುರಂತ ಸುದ್ದಿಯನ್ನು ನಮಗೆ ತಿಳಿಸಿದರು ಎಂದು ಟ್ರಿಪಲ್ ಎಚ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ, WWE ಹೇಳಿದರು, ವಿಂಡ್‌ಹ್ಯಾಮ್ ರೊಟುಂಡಾ ಅವರು 36 ನೇ ವಯಸ್ಸಿನಲ್ಲಿ ಆಗಸ್ಟ್ 24 ರಂದು ನಿಧನರಾದರು ಎಂದು ತಿಳಿಸುವ ಮೂಲಕ ಸಂತಾಪ ಸೂಚಿಸಿದೆ.

ಇದನ್ನೂ ಓದಿ: 69ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡಿಗರ ಕಮಾಲ್‌

ಬ್ರೇ ವ್ಯಾಟ್ ಅವರ ತಂದೆ ಮೈಕ್ WWE ನಲ್ಲಿ ಹೆಸರಾಂತ ಆಟಗಾರರಾಗಿದ್ದರು. ವ್ಯಾಟ್‌ನ ಚಿಕ್ಕಪ್ಪ ಬ್ಯಾರಿ ವಿಂಡ್‌ಹ್ಯಾಮ್ 1980 ರ ದಶಕ ಮತ್ತು 1990 ರ ದಶಕದ ಆರಂಭದಲ್ಲಿ ಅತ್ಯಂತ ಜನಪ್ರಿಯ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದರು. ರೊಟುಂಡಾ ಸಹೋದರ ಟೇಲರ್ ಸಹ ಕುಸ್ತಿ ಪಟು. \

ವಿಂಡ್‌ಹ್ಯಾಮ್ ರೊಟುಂಡಾ ಮಾಜಿ ಡಬ್ಲ್ಯೂಡಬ್ಲ್ಯೂಇ ಆಟಗಾರ್ತಿ ರಿಂಗ್ ಅನೌನ್ಸರ್ ಜೋಜೋ ಆಫರ್‌ಮ್ಯಾನ್‌ ಜೊತೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಎರಡು ಬಾರಿ WWE ಯೂನಿವರ್ಸಲ್ ಚಾಂಪಿಯನ್ ಮತ್ತು WWE ಚಾಂಪಿಯನ್ ಆಗಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News