OTT ಪ್ಲಾಟ್‌ಫಾರ್ಮ್‌ನಲ್ಲಿ ಈಗ ʼರಾಕಿ ಔರ್‌ ರಾಣಿ ಕಿ ಪ್ರೇಮ ಕಹಾನಿʼ

OTT : ʼರಾಕಿ ಔರ್‌ ರಾಣಿ ಕಿ ಪ್ರೇಮ ಕಹಾನಿʼ 28 ಜುಲೈ 2023 ರಂದು ಥಿಯೇಟರ್‌ಗಳಲ್ಲಿ ತೆರೆ ಕಂಡಿದ್ದು, ಈಗ ಓಟಿಟಿ ಅಂಗಳಕ್ಕೆ ಪಾದಾರ್ಪಣೆ ಮಾಡಿದೆ.

Written by - Zee Kannada News Desk | Last Updated : Sep 22, 2023, 12:30 PM IST
  • ʼರಾಕಿ ಔರ್‌ ರಾಣಿ ಕಿ ಪ್ರೇಮ ಕಹಾನಿʼ ಓಟಿಟಿ ಅಂಗಳಕ್ಕೆ ಪಾದಾರ್ಪಣೆ ಮಾಡಿದೆ.
  • ಜಾಂಟಿ ರಾಕಿ ಪಾತ್ರದಲ್ಲಿ (ರಣವೀರ್‌ ಸಿಂಗ್‌) ಮತ್ತು ರಾಣಿ ಚಟರ್ಜಿ ಪಾತ್ರದಲ್ಲಿ (ಆಲಿಯಾ ಭಟ್‌) ನಟಿಸಿದ್ದಾರೆ.
  • (ಸೆ.22) ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಸಿನಿಮಾ ರಿಲೀಸ್‌ ಆಗಿದೆ.
OTT ಪ್ಲಾಟ್‌ಫಾರ್ಮ್‌ನಲ್ಲಿ ಈಗ ʼರಾಕಿ ಔರ್‌ ರಾಣಿ ಕಿ ಪ್ರೇಮ ಕಹಾನಿʼ title=

Rockey Aur Rani ki Prema Kahani : ಕರಣ್‌ ಜೋಹರ್‌ ನಿರ್ದೇಶನದಲ್ಲಿ ರಣವೀರ್‌ ಸಿಂಗ್‌ ಮತ್ತು ಆಲಿಯಾ ಭಟ್‌ ನಟನೆಯಲ್ಲಿ ತೆರೆಕಂಡ ಸಿನಿಮಾ ʼರಾಕಿ ಔರ್‌ ರಾಣಿ ಕಿ ಪ್ರೇಮ ಕಹಾನಿʼ ಥಿಯೇಟರ್‌ಗಳಲ್ಲಿ ಈಗಾಗಲೇ ರಿಲೀಸ್‌ ಆಗಿದ್ದು, ಈಗ ಮತ್ತೇ ಓಟಿಟಿ ಪ್ಲಾಟ್‌ಫಾರ್ಮ್‌ ಆದ ಅಮೆಜಾನ್‌ ಪ್ರೈಮ್‌ನಲ್ಲಿ ರಿಲೀಸ್‌ ಆಗಿದೆ. 

ಜಾಂಟಿ ರಾಕಿ ಪಾತ್ರದಲ್ಲಿ (ರಣವೀರ್‌ ಸಿಂಗ್‌) ಮತ್ತು ರಾಣಿ ಚಟರ್ಜಿ ಪಾತ್ರದಲ್ಲಿ (ಆಲಿಯಾ ಭಟ್‌) ನಟಿಸಿದ್ದಾರೆ.

ಇದನ್ನು ಓದಿ - Ragini Dwivedi: ಸೀರೆಯಲ್ಲಿ ತುಪ್ಪದ ಹುಡುಗಿ ಮಿಂಚಿಂಗ್‌ ಫೋಟೊಸ್‌

ಈ ಚಲನಚಿತ್ರವು ಹಿರಿಯ ತಾರೆಯರಾದ ಶಬಾನಾ ಅಜ್ಮಿ , ಜಯಾ ಬಚ್ಚನ್ ಮತ್ತು ಧರ್ಮೇಂದ್ರ , ಜೊತೆಗೆ ತೋಟಾ ರಾಯ್ ಚೌಧರಿ, ಚುರ್ನಿ ಗಂಗೂಲಿ, ಅಮೀರ್ ಬಶೀರ್, ಕ್ಷಿತೀ ಜೋಗ್ ಮತ್ತು ಇತರರನ್ನು ಒಳಗೊಂಡಂತೆ ನಾಕ್ಷತ್ರಿಕ ಪಾತ್ರವನ್ನು ಹೊಂದಿದೆ. ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಯಲ್ಲಿ ರಾಕಿ ಮತ್ತು ರಾಣಿಯ ಕಥೆಯನ್ನು ಹೇಳುತ್ತದೆ, ಪ್ರೀತಿಯಲ್ಲಿ ಬೀಳುವ ಮತ್ತು ಅವರ ಕುಟುಂಬದ ಅನುಮೋದನೆಯನ್ನು ಪಡೆಯಲು ಹಲವಾರು ಸವಾಲುಗಳನ್ನು ಜಯಿಸಬೇಕಾದ ಸಂದರ್ಭಗಳು ಒದಗಿ ಬರುತ್ತವೆ.

 
 
 
 

 
 
 
 
 
 
 
 
 
 
 

A post shared by Karan Johar (@karanjohar)

ಧರ್ಮ ಪ್ರೊಡಕ್ಷನ್ಸ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ನಿರ್ಮಾಣವಾಗಿರುವ  ಈ ಚಿತ್ರಕ್ಕೆ ಪ್ರೀತಮ್ ಸಂಗೀತ ಸಂಯೋಜಿಸಿದ್ದಾರೆ.

ಪ್ರೇಮಕಥೆಗಳಲ್ಲಿ ಸಾಮಾನ್ಯವಾಗಿ ಕಾಣುವ ಭಿನ್ನತೆಗಳ ಅಡಚಣೆಗಳ ಕುರಿತು ವ್ಯವಹರಿಸುತ್ತಾರೆ ಮತ್ತು ಸಿನಿಮಾ ಹಾಸ್ಯದಿಂದ ಕೂಡಿದ್ದು, ಕೆಲವು ಸ್ಪೂರ್ತಿದಾಯಕ ಬರವಣಿಗೆಗಳಿಂದ ಕೂಡಿದೆ. ಸದ್ಯ ಈ ಸಿನಿಮಾ ಇಂದು ಅಂದರೆ (ಸೆ.22) ರಂದು ಅಮೆಜಾನ್‌ ಪ್ರೈಮ್‌ನಲ್ಲಿ ರಿಲೀಸ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News