ಅಭಿಷೇಕ್-ಐಶ್ವರ್ಯಾ ಡಿವೋರ್ಸ್‌ ಸುದ್ದಿ ಸುಳ್ಳು...!? ವಿಚ್ಛೇದನ ವದಂತಿಗೆ ಬ್ರೇಕ್‌ ಹಾಕಿಯೇಬಿಡ್ತು ಆ ಫೋಟೋ

Abhishek Bachchan surprises Aishwarya Rai: ಇನ್‌ʼಸ್ಟಾಗ್ರಾಂನಲ್ಲಿ ಅಭಿಷೇಕ್ ವಿಚ್ಛೇದನದ ಪೋಸ್ಟ್ʼಗೆ ಲೈಕ್‌ ಮಾಡುವ ಮೂಲಕ ಈ ಊಹಾಪೋಹ ಇನಷ್ಟು ಹೆಚ್ಚಾಗಿ ಪಸರಿಸಲು ಪ್ರಾರಂಭವಾಯಿತು. ಆದ್ರೆ, ಈಗ ಐಶ್-ಅಭಿಷೇಕ್ ದಾಂಪತ್ಯ ಜೀವನದಲ್ಲಿ ಎಲ್ಲವೂ ಚೆನ್ನಾಗಿ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸ್ವತಃ ಅಭಿಷೇಕ್ ಬಚ್ಚನ್ ಪುರಾವೆ ನೀಡುತ್ತಿದ್ದಾರೆ. 

Written by - Bhavishya Shetty | Last Updated : Jul 25, 2024, 05:40 PM IST
    • ETimes ನಲ್ಲಿನ ವರದಿಯ ಪ್ರಕಾರ, ಅಭಿಷೇಕ್ ಬಚ್ಚನ್ ಹೊಸ ಕಾರು ಖರೀದಿಸಿದ್ದಾರೆ
    • ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ಮದುವೆ ಆಗಿ 17 ವರ್ಷಗಳು ಕಳೆದಿವೆ.
    • ಈ ಜೋಡಿಗೆ ಆರಾಧ್ಯ ಎಂಬ ಮಗಳಿದ್ದಾಳೆ
ಅಭಿಷೇಕ್-ಐಶ್ವರ್ಯಾ ಡಿವೋರ್ಸ್‌ ಸುದ್ದಿ ಸುಳ್ಳು...!? ವಿಚ್ಛೇದನ ವದಂತಿಗೆ ಬ್ರೇಕ್‌ ಹಾಕಿಯೇಬಿಡ್ತು ಆ ಫೋಟೋ title=
File Photo

Abhishek Bachchan surprises Aishwarya Rai: ಬಾಲಿವುಡ್ ನಟ ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ಮದುವೆ ಆಗಿ 17 ವರ್ಷಗಳು ಕಳೆದಿವೆ. ಈ ಜೋಡಿಗೆ ಆರಾಧ್ಯ ಎಂಬ ಮಗಳಿದ್ದಾಳೆ. ಆದರೆ ಕಳೆದ ಕೆಲವು ದಿನಗಳಿಂದ ಐಶ್-ಅಭಿಷೇಕ್ ಜೋಡಿಯ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದು, ಇವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

ಇನ್‌ʼಸ್ಟಾಗ್ರಾಂನಲ್ಲಿ ಅಭಿಷೇಕ್ ವಿಚ್ಛೇದನದ ಪೋಸ್ಟ್ʼಗೆ ಲೈಕ್‌ ಮಾಡುವ ಮೂಲಕ ಈ ಊಹಾಪೋಹ ಇನಷ್ಟು ಹೆಚ್ಚಾಗಿ ಪಸರಿಸಲು ಪ್ರಾರಂಭವಾಯಿತು. ಆದ್ರೆ, ಈಗ ಐಶ್-ಅಭಿಷೇಕ್ ದಾಂಪತ್ಯ ಜೀವನದಲ್ಲಿ ಎಲ್ಲವೂ ಚೆನ್ನಾಗಿ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸ್ವತಃ ಅಭಿಷೇಕ್ ಬಚ್ಚನ್ ಪುರಾವೆ ನೀಡುತ್ತಿದ್ದಾರೆ. 

ಇದನ್ನೂ ಓದಿ:  ವಿವಾಹಿತ ನಟನ ಜೊತೆ 15 ವರ್ಷ ಡೇಟ್... ವಯಸ್ಸು 52 ಆದ್ರೂ ಇನ್ನೂ ಸಿಂಗಲ್ ಈ ಸ್ಟಾರ್‌ ನಟಿ!

ಮಾಧ್ಯಮ ವರದಿಗಳ ಪ್ರಕಾರ, ಅಭಿಷೇಕ್ ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಇನ್ನು ಈ ಹೊಸ ಕಾರು,  ಐಶ್ವರ್ಯಾ ರೈಗೆ ಗಿಫ್ಟ್‌ ಆಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.  

ETimes ನಲ್ಲಿನ ವರದಿಯ ಪ್ರಕಾರ, ಅಭಿಷೇಕ್ ಬಚ್ಚನ್ ಹೊಸ ಕಾರು ಖರೀದಿಸಿದ್ದಾರೆ. ಕಳೆದ ರಾತ್ರಿ ಅಭಿಷೇಕ್ ತನ್ನ ಸೋದರಳಿಯ ಅಗಸ್ತ್ಯ ನಂದಾ ಮತ್ತು ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಅವರನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಡಿನ್ನರ್ ಡೇಟ್ʼಗೆ ಕರೆದುಕೊಂಡು ಹೋಗಿದ್ದರು. 

ಸೆಲೆಬ್ರಿಟಿ ಛಾಯಾಗ್ರಾಹಕ ಯೋಗೇನ್ ಶಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಭಿಷೇಕ್ ಅವರ ಹೊಸ ಕಾರಿನ ಬಗ್ಗೆ ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಅಭಿಷೇಕ್ ತಮ್ಮ ಹೊಸ ಕಾರಿನಲ್ಲಿ ತಮ್ಮ ನೆಚ್ಚಿನ ನಂಬರ್ ಪ್ಲೇಟ್ ಅನ್ನು ಹಾಕಿಸುವ ಮೂಲಕ ತಮ್ಮ ಪತ್ನಿ ಐಶ್ವರ್ಯಾ ರೈ ಅವರಿಗೆ ಸರ್ಪ್ರೈಸ್‌ ನೀಡಿದ್ದಾರೆ ಎಂದು ಹೇಳಿದ್ದಾರೆ. ಇದರೊಂದಿಗೆ, ಅಭಿಷೇಕ್ ಮತ್ತು ಐಶ್ ಬಗ್ಗೆ ಮಾಡಲಾಗುತ್ತಿರುವ ಊಹಾಪೋಹಗಳನ್ನು ಸಹ ತಳ್ಳಿ ಹಾಕಿದ್ದಾರೆ.

ಅಭಿಷೇಕ್ ಬಚ್ಚನ್ ಅವರ ಹೊಸ ಕಾರು ಕಪ್ಪು ಬಣ್ಣದ್ದಾಗಿದ್ದು,  ಅದರ ಸಂಖ್ಯೆ 5050 ಆಗಿದೆ. ಅಂದಹಾಗೆ ಇದು ಐಶ್ವರ್ಯಾ ಅವರ ನೆಚ್ಚಿನ ಸಂಖ್ಯೆಯಾಗಿದೆ. ಐಶ್ವರ್ಯಾ ರೈ ಗರ್ಭಿಣಿಯಾಗಿದ್ದಾಗ ಅವರನ್ನು 5050 ನಂಬರ್ ಪ್ಲೇಟ್‌ನ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ. ಇನ್ನು ಆರಾಧ್ಯ ಬಚ್ಚನ್‌ʼಗೆ ಜನ್ಮ ನೀಡಿದ ನಂತರವೂ ಐಶ್‌ʼರನ್ನು ಅದೇ ನಂಬರ್ ಪ್ಲೇಟ್‌ʼನ ಕಾರಿನಲ್ಲಿ ಮನೆಗೆ ಕರೆತರಲಾಯಿತು. 

ಇದನ್ನೂ ಓದಿ: ಲಂಡನ್​ʼಗೆ ಶಿಫ್ಟ್ ಆಗುವ ವದಂತಿ ಮಧ್ಯೆ ವಿರುಷ್ಕಾ ಹೊಸ ಫೋಟೋ ವೈರಲ್! ಅಲ್ಲಿಯೇ ಸೆಟ್ಲ್​ ಆಗೋ ಸುಳಿವು ನೀಡಿದ್ರಾ ಸ್ಟಾರ್ ದಂಪತಿ?

ಈ ಸುದ್ದಿಗಳ ಬಗ್ಗೆ ಬಚ್ಚನ್ ಕುಟುಂಬದಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಅಭಿಷೇಕ್ ನಿಜವಾಗಿಯೂ ಐಶ್ವರ್ಯಾ ಅವರ ನೆಚ್ಚಿನ ಸಂಖ್ಯೆಯ ಕಾರನ್ನು ಖರೀದಿಸಿದ್ದಾರೋ ಅಥವಾ ಇಲ್ಲವೋ? ಈ ಬಗ್ಗೆಯೂ ಖಚಿತವಾದ ಪುರಾವೆಗಳಿಲ್ಲ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News