ವರಮಹಾಲಕ್ಷ್ಮಿ ಹಬ್ಬಕ್ಕೆ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ ನಟ ಧ್ರುವ ಸರ್ಜಾ..! ಏನದು..?

ವರಮಹಾಲಕ್ಷ್ಮಿ ಹಬ್ಬದಂದು ನಟ ಧ್ರುವ ಸರ್ಜಾ ತಮ್ಮ ಫ್ಯಾನ್ಸ್‌  ಜೊತೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸರ್ಜಾ ಕುಟುಂಬ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದು, ಈ ಕುರಿತು ಆಕ್ಷನ್‌ ಪ್ರೀನ್ಸ್‌ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ರಿವೀಲ್‌ ಮಾಡಿದ್ದಾರೆ.

Written by - Krishna N K | Last Updated : Aug 25, 2023, 02:41 PM IST
  • ವರಮಹಾಲಕ್ಷ್ಮಿ ಹಬ್ಬದಂದು ನಟ ಧ್ರುವ ಸರ್ಜಾ ತಮ್ಮ ಫ್ಯಾನ್ಸ್‌ ಜೊತೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
  • ಈ ಕುರಿತು ಆಕ್ಷನ್‌ ಪ್ರೀನ್ಸ್‌ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಗುಡ್‌ ನ್ಯೂಸ್‌ ರಿವೀಲ್‌ ಮಾಡಿದ್ದಾರೆ.
  • ವಿಡಿಯೋ ನೋಡಿದ ಧ್ರುವ ಫ್ಯಾನ್ಸ್‌ ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ.
ವರಮಹಾಲಕ್ಷ್ಮಿ ಹಬ್ಬಕ್ಕೆ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ ನಟ ಧ್ರುವ ಸರ್ಜಾ..! ಏನದು..? title=

Dhruva Sarja : ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಮತ್ತೆ ತಂದೆಯಾಗುತ್ತಿದ್ದಾರೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಈ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಈ ಕುರಿತು ವಿಡಿಯೋ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಪತ್ನಿ ಪ್ರೇರಣಾ ಗರ್ಭಿಣಿಯಾಗಿದ್ದಾಗಿ ತಿಳಿಸಿದ್ದಾರೆ.

ಹೌದು.. ವಿಡಿಯೋದಲ್ಲಿ ಮೊದಲು ಕಾಡಿನ ಸುಂದರ ಪ್ರಕೃತಿ ನಡುವೆ ಸಾಗುವ ಅಕ್ಷರಗಳ ಪಯಣದಲ್ಲಿ ಅಭಿಮಾನಿಗಳ ತಲೆಗೆ ಕೆಲಸಕೊಡಲಾಗಿದ್ದು, ನಂತರ ಪ್ಯಾರಾಚೂಟ್‌ನಲ್ಲಿ ಅಪ್ಪನ ತೊಳಿನಲ್ಲಿ ಮಗಳು ಹಾಗೂ ಪತ್ನಿ ಪ್ರೇರಣಾ ಗರ್ಭಿಣಿಯಾಗಿರುವ ದೃಶ್ಯ ಕಾಣಿಸುತ್ತದೆ. ವಿಡಿಯೋ ನೋಡಿದ ಧ್ರುವ ಫ್ಯಾನ್ಸ್‌ ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by Dhruva Sarja (@dhruva_sarjaa)

ಇದನ್ನೂ ಓದಿ:  ವರಮಹಾಲಕ್ಷ್ಮಿ ಹಬ್ಬದ ಶುಭ ಕೋರಿ, ಮಾಧ್ಯಮದವರ ಕ್ಷಮೆ ಕೇಳಿದ DBoss..! 

ಅಂದಹಾಗೆ 2019ರಲ್ಲಿಯೇ ಧ್ರುವ ಸರ್ಜಾ ಮತ್ತು ಪ್ರೇರಣಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2022ರ ಅಕ್ಟೋಬರ್‌ 1 ರಂದು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಇದೀಗ ಇದೇ ಜೋಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News