ನವದೆಹಲಿ: ಬಾಲಿವುಡ್‍ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಸುಶಾಂತ್ ಸಿಂಗ್‍ರದ್ದು ಆತ್ಮಹತ್ಯೆಯಲ್ಲಿ, ಅದು ಕೊಲೆ ಎಂದು ಶವ ಪರೀಕ್ಷೆ ಮಾಡಿದ್ದ ಶವಾಗಾರದ ಸಿಬ್ಬಂದಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. 2020ರ ಜೂನ್ 14ರಂದು ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ಫ್ಲಾಟ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಕೊಲೆ ಮಾಡಲಾಗಿದೆ ಅಂತಾ ವ್ಯಾಪಕ ಚರ್ಚೆಯಾಗಿತ್ತು. ನಟನ ಶವ ಪರೀಕ್ಷೆ ವರದಿಯಲ್ಲಿ ಆತ್ಮಹತ್ಯೆ ಎಂದು ಉಲ್ಲೇಖಿಸಲಾಗಿದ್ದರೂ, ಅದನ್ನು ಕೊಲೆ ಎಂದೇ ಸುಶಾಂತ್ ಸಿಂಗ್ ಕುಟುಂಬಸ್ಥರು ಆರೋಪಿಸಿದ್ದರು.
ಇದಕ್ಕೆ ಪುಷ್ಟಿ ನೀಡುವಂತೆ ಮುಂಬೈನ ಕೂಪರ್ ಆಸ್ಪತ್ರೆಯ ಶವಾಗಾರ ಸಿಬ್ಬಂದಿ ರೂಪಕುಮಾರ್ ಶಾ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸುಶಾಂತ್ ಸಿಂಗ್ ಮೃತದೇಹ ನೋಡಿದಾಗ ಅದರ ಮೇಲೆ ಗಾಯದ ಗುರುತುಗಳಿದ್ದವು. ಈ ವಿಚಾರವನ್ನು ಅಧಿಕಾರಿಗಳಿಗೆ ನಾನು ಅಂದೇ ತಿಳಿಸಿದ್ದೆ.ಆದರೆ ಅವರು ನನ್ನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲವೆಂದು ಅವರು ತಿಳಿಸಿದ್ದಾರೆ.
#WATCH via ANI Multimedia | Sushant Singh Rajput case rises from grave; man who conducted autopsy claims ‘actor was murdered’https://t.co/Xw3ljWd5s5
— ANI (@ANI) December 26, 2022
ಇದನ್ನೂ ಓದಿ: ವಿಗ್ ಹಾಕಿದ್ರಾ ಅಥವಾ ಕೂದಲು ಕಸಿ ಮಾಡಿಸಿಕೊಂಡ್ರಾ ಡಿಬಾಸ್ ದರ್ಶನ್...?
‘ಕೈ ಪೋ ಚೆ’ ನಟ ಸುಶಾಂತ್ ಸಿಂಗ್ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ 2 ವರ್ಷಗಳ ಬಳಿಕ ಕೂಪರ್ ಆಸ್ಪತ್ರೆಯ ಉದ್ಯೋಗಿ - ಹೈ-ಪ್ರೊಫೈಲ್ ಪ್ರಕರಣದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದು, ನಟನದ್ದು ಆತ್ಮಹತ್ಯೆಯಲ್ಲ, ಅದು ಕೊಲೆ ಎಂದು ವಾದಿಸಿದ್ದಾರೆ. ‘ಸುಶಾಂತ್ ಸಿಂಗ್ ರಜಪೂತ್ ನಿಧನರಾದಾಗ ನಾವು 5 ಮೃತದೇಹಗಳನ್ನು ಕೂಪರ್ ಆಸ್ಪತ್ರೆಯಲ್ಲಿ ಪೋಸ್ಟ್‌ಮಾರ್ಟಮ್‌ಗಾಗಿ ಸ್ವೀಕರಿಸಿದ್ದೇವೆ. ನಾವು ಮರಣೋತ್ತರ ಪರೀಕ್ಷೆ ಮಾಡಲು ಹೋದಾಗ 5 ಮೃತದೇಹಗಳ ಪೈಕಿ ಒಂದು ಶವ ಬಾಲಿವುಡ್ ನಟನದ್ದು ಎಂದು ನಮಗೆ ತಿಳಿಯಿತು. ಸುಶಾಂತ್ ದೇಹ ಮತ್ತು ಕುತ್ತಿಗೆಯ ಮೇಲೆ ಹಲವಾರು ಗಾಯದ ಗುರುತುಗಳಿದ್ದವು’ ಎಂದು ರೂಪಕುಮಾರ್ ಹೇಳಿದ್ದಾರೆ.
ಉನ್ನತ ಅಧಿಕಾರಿಗಳ ಸೂಚನೆಯಂತೆ ಅವರ ದೇಹದ ಚಿತ್ರಗಳನ್ನು ಕ್ಲಿಕ್ಕಿಸಲು ಮಾತ್ರ ತಂಡಕ್ಕೆ ಅವಕಾಶ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ. ಸುಶಾಂತ್ ಸಿಂಗ್ ಅವರಿಗೆ ನ್ಯಾಯ ಸಿಗಬೇಕು, ತನಿಖಾ ಸಂಸ್ಥೆಗಳು ಕರೆದರೆ ಎಲ್ಲಾ ಸತ್ಯಾಂಶವನ್ನು ವಿವರಿಸುವುದಾಗಿ ರೂಪಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ನಟ ದರ್ಶನ ಮೇಲೆ ಚಪ್ಪಲಿ ಎಸೆತ ಪ್ರಕರಣ : ಮೂವರ ಜನರ ಬಂಧನ
ರೂಪಕುಮಾರ್ ಹೇಳಿಕೆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸುಶಾಂತ್ ಸಿಂಗ್ ಅವರಿಗೆ ನ್ಯಾಯ ಸಿಗಬೇಕೆಂದು ಲಕ್ಷಾಂತರ ಅಭಿಮಾನಿಗಳು ಆಗ್ರಹಿಸಿದ್ದಾರೆ. ಟ್ವಿಟರ್ ಸೇರಿದಂತೆ ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಸೋಮವಾರ #SushantSinghRajput ಹ್ಯಾಶ್‍ಟ್ಯಾಗ್ ಟ್ರೆಂಡಿಂಗ್‍ನಲ್ಲಿತ್ತು. ಪ್ರತಿಭಾನ್ವಿತ ನಟನನ್ನು ಮೋಸದಿಂದ ಕೊಲೆ ಮಾಡಲಾಗಿದೆ, ಕೂಡಲೇ ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.