Tunisha Suicide Case: ‘ಲವ್ ಜಿಹಾದ್’ಗೆ ಬಲಿಯಾದ್ರಾ ಯುವ ನಟಿ ತುನೀಶಾ ಶರ್ಮಾ?

Tunisha Suicide Case: ಕಿರುತೆರೆ ನಟಿ ತುನೀಶಾ ಶರ್ಮಾ ಸಾವು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಧಾರಾವಾಹಿಯೊಂದರ ಸೆಟ್‌ನಲ್ಲಿ ತುನೀಶಾ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣದಲ್ಲಿ ತುನೀಶಾ ಸಹನಟ ಶೀಜನ್ ಖಾನ್‍ನನ್ನು ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

Written by - Puttaraj K Alur | Last Updated : Dec 26, 2022, 09:13 PM IST
  • ಕಿರುತೆರೆ ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಪ್ರಕರಣದಿಂದ ಅನೇಕರಿಗೆ ಆಘಾತವುಂಟಾಗಿದೆ
  • ತುನೀಶಾ ಸ್ನೇಹಿತ ಶೀಜನ್ ಖಾನ್ ವಿರುದ್ಧ ನಟಿಯ ತಾಯಿ & ಮಾವನಿಂದ ಗಂಭೀರ ಆರೋಪ
  • ‘ಲವ್ ಜಿಹಾದ್’ ದೃಷ್ಟಿಕೋನದಲ್ಲಿಯೂ ತನಿಖೆ ನಡೆಸುವಂತೆ ಪೊಲೀಸರಿಗೆ ಆಗ್ರಹ
Tunisha Suicide Case: ‘ಲವ್ ಜಿಹಾದ್’ಗೆ ಬಲಿಯಾದ್ರಾ ಯುವ ನಟಿ ತುನೀಶಾ ಶರ್ಮಾ? title=
Tunisha Suicide Case

ನವದೆಹಲಿ: ಕಿರುತೆರೆ ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಧಾರಾವಾಹಿಯೊಂದರ ಸೆಟ್‌ನಲ್ಲಿ ತುನೀಶಾ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣ ಸಂಬಂಧ ತುನೀಶಾ ಸ್ನೇಹಿತ, ಸಹನಟ ಶೀಜನ್ ಖಾನ್ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಇದೀಗ ಶೀಜನ್ ವಿರುದ್ಧ ತುನೀಶಾ ತಾಯಿ ಹಾಗೂ ಆಕೆಯ ಮಾವ ಗಂಭೀರ ಆರೋಪ ಮಾಡಿದ್ದಾರೆ.

ಶೀಜಾನ್ ಖಾನ್ ತನ್ನ ಮಗಳನ್ನು ವಂಚಿಸಿ ಬಳಸಿಕೊಂಡಿದ್ದಾನೆ ಎಂದು ತುನೀಶಾ ತಾಯಿ ಸೋಮವಾರ ಆರೋಪಿಸಿದ್ದಾರೆ. ಪೊಲೀಸರ ಪ್ರಕಾರ 21 ವರ್ಷದ ನಟಿ ತುನೀಶಾ ಶನಿವಾರ ಪಾಲ್ಘರ್‌ನ ವಸೈ ಪ್ರದೇಶದಲ್ಲಿ ಧಾರಾವಾಹಿಯ ಸೆಟ್‌ನಲ್ಲಿರುವ ವಾಶ್‌ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತುನೀಶಾರ ತಾಯಿಯಿಂದ ಬಂದ ದೂರಿನ ಆಧಾರದ ಮೇಲೆ, ವಲೀವ್ ಪೊಲೀಸರು ನಟ ಶೀಜನ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿ ಪ್ರಕರಣ ದಾಖಲಿಸಿ ಭಾನುವಾರ ಬಂಧಿಸಿದ್ದಾರೆ. ಶೀಜಾನ್ ಖಾನ್ ತನ್ನ ಮಗಳಿಗೆ ಮೋಸ ಮಾಡಿದ್ದಾನೆಂದು ತುನೀಶಾ ತಾಯಿ ಆರೋಪಿಸಿದ್ದಾರೆ.

ಇದನ್ನೂ ಓದಿ: ವಿಗ್ ಹಾಕಿದ್ರಾ ಅಥವಾ ಕೂದಲು ಕಸಿ ಮಾಡಿಸಿಕೊಂಡ್ರಾ ಡಿಬಾಸ್ ದರ್ಶನ್...?

ತುನಿಶಾ ಜೊತೆ ಸಂಬಂಧ ಹೊಂದಿದ್ದ ಶೀಜನ್ ಖಾನ್ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ತುನೀಶಾ ಅಲ್ಲದೆ ಆತ ಇತರ ಮಹಿಳೆಯರೊಂದಿಗೂ ಸಂಬಂಧ ಹೊಂದಿದ್ದ. ಮೂರ್ನಾಲ್ಕು ತಿಂಗಳ ಕಾಲ ತುನೀಷಾಳನ್ನು ಬಳಸಿಕೊಂಡು ವಂಚಿಸಿರುವ ಶೀಜನ್‍ಗೆ ಕಠಿಣ ಶಿಕ್ಷೆಯಾಗಬೇಕು. ಯಾವುದೇ ಕಾರಣಕ್ಕೂ ಆತನನ್ನು ಬಿಡಬಾರದು, ನಾನು ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಹೀಗಾಗಿ ನಮಗೆ ನ್ಯಾಯ ದೊರಕಿಸಿಕೊಡಿ ಅಂತಾ ಯುವ ನಟಿಯ ತಾಯಿ ಮನವಿ ಮಾಡಿದ್ದಾರೆ.

ಏತನ್ಮಧ್ಯೆ ಪೊಲೀಸರು ತುನೀಶಾ ಶರ್ಮಾ ಮತ್ತು ಶೀಜನ್ ಖಾನ್ ಅವರ ವಾಟ್ಸಾಪ್ ಚಾಟ್ ಮತ್ತು ಕರೆ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ತುನೀಶಾ ಗರ್ಭಿಣಿಯೇ ಎಂಬ ಪ್ರಶ್ನೆಗೆ ಪೊಲೀಸರಿಗೆ ಉತ್ತರ ಸಿಕ್ಕಿದ್ದು, ಪ್ರಾಥಮಿಕ ಶವಪರೀಕ್ಷೆ ವರದಿಯಲ್ಲಿ ಗರ್ಭಾವಸ್ಥೆಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲವೆಂದು ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Sreeleela: ಮೊದಲ ಬಾರಿ ಲೈವ್ ಬಂದು ಸಪ್ರೈಸ್ ಕೊಟ್ಟ ಶ್ರೀಲೀಲಾ!

ತುನೀಶಾ ಅವರು 'ಭಾರತ್ ಕಾ ವೀರ್ ಪುತ್ರ - ಮಹಾರಾಣಾ ಪ್ರತಾಪ್', 'ಫಿತೂರ್' ಮತ್ತು 'ಬಾರ್ ಬಾರ್ ದೇಖೋ' ಚಿತ್ರಗಳಲ್ಲಿ, ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ತುನೀಶಾ ‘ಅಲಿ ಬಾಬಾ: ದಸ್ತಾನ್-ಎ-ಕಾಬೂಲ್' ಧಾರಾವಾಹಿಯ ಚಿತ್ರೀಕರಣದಲ್ಲಿದ್ದರು. ಪೊಲೀಸರ ಪ್ರಕಾರ ಶೂಟಿಂಗ್ ಸೆಟ್‌ನ ವಾಶ್‌ರೂಂಗೆ ಹೋಗಿದ್ದ ಆಕೆ ಎಷ್ಟು ಹೊತ್ತಾದರೂ ವಾಪಸ್ ಬಂದಿರಲಿಲ್ಲ. ಬಾಗಿಲು ಒಡೆದು ನೋಡಿದಾಗ ನಟಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ತುನೀಶಾರ ಮಾವ ಹೇಳಿದ್ದೇನು?

ತುನೀಶಾ ಸಾವಿನ ಬಗ್ಗೆ ಮಾತನಾಡಿರುವ ಆಕೆಯ ಮಾವ ಪವನ್ ಶರ್ಮಾ, ‘ಶೀಜನ್ ಮತ್ತು ತುನೀಶಾ ನಡುವೆ ವಯಸ್ಸಿನ ವ್ಯತ್ಯಾಸವಿದೆ. ಆದರೆ ಆಕೆ ಆತನ ಜೊತೆಗೆ ಏಕೆ ಸಂಬಂಧ ಇಟ್ಟುಕೊಂಡಳು? ನಮಗೆ ಗೊತ್ತಿಲ್ಲ. ಇದೀಗ ಅವರಿಬ್ಬರ ವಯಸ್ಸು ಮತ್ತು ಧರ್ಮದ ಬಗ್ಗೆ ಮಾತನಾಡಲಾಗುತ್ತಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ನಮಗೆ ಗೊತ್ತಿಲ್ಲ, ಇದು ಆತ್ಮಹತ್ಯೆ ಎಂದು ಯಾರು ಹೇಳುತ್ತಾರೆ? ಯಾರು ನೋಡಿದ್ದಾರೆ? ಯಾವುದಾದರೂ ಸೂಸೈಡ್ ನೋಟ್ ಸಿಕ್ಕಿದೆಯೇ?’ ಎಂದು ಪ್ರಶ್ನಿಸಿದ್ದಾರೆ.

ಶೀಜನ್ ಬೇರೆ ಹುಡುಗಿಯರ ಜೊತೆ ಸಂಬಂಧ ಹೊಂದಿರುವ ಬಗ್ಗೆ ತುನೀಶಾ ನಮಗೆ ತಿಳಿಸಿದ್ದಳು ಎಂದು ಪವನ್ ಶರ್ಮಾ ಹೇಳಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ತುನೀಶಾಳ ತಾಯಿ, ಬೇರೆ ಹುಡುಗಿಯರ ಜೊತೆ ಸಂಬಂಧ ಇಟ್ಟುಕೊಂಡಿದ್ದರೆ ನನ್ನ ಮಗಳ ಜೀವನವನ್ನೇಕೆ ಹಾಳು ಮಾಡಿದೆ? ಎಂದು ಪ್ರಶ್ನಿಸಿದ್ದಾರೆ. ತುನೀಶಾ ಆತ್ಮಹತ್ಯೆ ಪ್ರಕರಣವನ್ನು ಪೊಲೀಸರು ‘ಲವ್ ಜಿಹಾದ್’ ದೃಷ್ಟಿಕೋನದಲ್ಲಿಯೂ ತನಿಖೆ ನಡೆಸಬೇಕು. ಆಕೆ ಕೇವಲ 20 ವರ್ಷದ ಹುಡುಗಿಯಾಗಿದ್ದಳು. ಆಕೆಯ ತಲೆಕೆಡಿಸಿ ‘ಲವ್ ಜಿಹಾದ್’ಗೆ ಬಲಿಯಾಗುವ ರೀತಿ ಮಾಡಿರಬಹುದು’ ಎಂದು ಪವನ್ ಶರ್ಮಾ ಶಂಕಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News