Actress Madhubala: ನೆನಪಿದ್ದಾರಾ ರವಿಚಂದ್ರನ್‌ ʼಅಣ್ಣಯ್ಯʼಸಿನಿಮಾ ನಟಿ; ಈಕೆ ಮದುವೆಯಾಗಿದ್ದು ಯಾರನ್ನ ಗೊತ್ತಾ?

Actress Madhubala: ಹಲವಾರು ಹಿಟ್‌ ಸಿನಿಮಾಗಳಲ್ಲಿ ನಟಿಸಿದ ಬಳಿಕ ಈ ನಟಿ ಇದ್ದಕ್ಕಿದ್ದ ಹಾಗೇ ಸಿನಿಮಾರಂಗವನ್ನು ತೊರೆದರು. ಮದುವೆಯಾದ ಬಳಿಕ ಈ ನಟಿಗೆ ಸಂಕಷ್ಟಗಳ ಸರಮಾಲೆ ಎದುರಾದವು. ಈ ನಟಿಯ ಪತಿ ಯಾರು? ಇದ್ದಕ್ಕಿದ್ದ ಹಾಗೇ ಈ ನಟಿ ಸಿನಿಮಾ ರಂಗದಿಂದ ದೂರ ಉಳಿದಿದ್ದೇಕೆ? ಈ ನಟಿಯ ಬಗ್ಗೆ ಮತ್ತಷ್ಟು ಇಂಟೆರೆಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : May 27, 2024, 04:26 PM IST
  • ನೆನಪಿದ್ದಾರಾ ʼಅಣ್ಣಯ್ಯʼ ಸಿನಿಮಾದಲ್ಲಿ ನಟಿಸಿದ ಮಧುಬಾಲಾ?
  • ಹಲವಾರು ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ನಟಿಸಿರುವ ಮಧುಬಾಲಾ
  • ಖ್ಯಾತ ನಟಿ ಮಧುಬಾಲಾ ಮದುವೆಯಾಗಿದ್ದು ಯಾರನ್ನು ಗೊತ್ತಾ..?
Actress Madhubala: ನೆನಪಿದ್ದಾರಾ ರವಿಚಂದ್ರನ್‌ ʼಅಣ್ಣಯ್ಯʼಸಿನಿಮಾ ನಟಿ; ಈಕೆ ಮದುವೆಯಾಗಿದ್ದು ಯಾರನ್ನ ಗೊತ್ತಾ? title=
ನೆನಪಿದ್ದಾರಾ ಅಣ್ಣಯ್ಯ ನಟಿ?

Actress Madhubala: ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ʼಅಣ್ಣಯ್ಯʼ ಸಿನಿಮಾ ಯಾರಿಗ್‌ ತಾನೇ ಇಷ್ಟ ಇಲ್ಲ ಹೇಳಿ. ಇಂದಿಗೂ ಈ ಸಿನಿಮಾದ ಹಾಡುಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ಈ ಚಿತ್ರದಲ್ಲಿ ರವಿಚಂದ್ರನ್‌ಗೆ ಜೋಡಿಯಾಗಿದ್ದ ಮಧುಬಾಲ ಅದ್ಭುತ ಅಭಿನಯದ ಮೂಲಕ ತಮ್ಮ ಮೊದಲ ಚಿತ್ರದಲ್ಲಿಯೇ ಕನ್ನಡಿಗರ ಮನೆಗೆದ್ದಿದ್ದರು. ಈ ಸಿನಿಮಾದಲ್ಲಿ ಮಿಂಚಿದ ಬಳಿಕ ಕನ್ನಡ ಚಿತ್ರರಂಗದಲ್ಲಿ ಮಧುಬಾಲಾ ಉತ್ತಂಗದ ಶಿಖರವನ್ನೇರಿದ್ದರು. ಹಲವಾರು ಸಿನಿಮಾಗಳಲ್ಲಿ ಇವರಿಗೆ ಸಾಲು ಸಾಲು ಅವಕಾಶಗಳು ದೊರೆತವು. ಸಿಕ್ಕ ಅವಕಾಶಗಳನ್ನು ಸರಿಯಾಗಿಯೇ ಸದುಪಯೋಗಪಡಿಸಿಕೊಂಡ ಈ ನಟಿ ಅದ್ಭುತ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. 

ಹಲವಾರು ಹಿಟ್‌ ಸಿನಿಮಾಗಳಲ್ಲಿ ನಟಿಸಿದ ಬಳಿಕ ಈ ನಟಿ ಇದ್ದಕ್ಕಿದ್ದ ಹಾಗೇ ಸಿನಿಮಾರಂಗವನ್ನು ತೊರೆದರು. ಮದುವೆಯಾದ ಬಳಿಕ ಈ ನಟಿಗೆ ಸಂಕಷ್ಟಗಳ ಸರಮಾಲೆ ಎದುರಾದವು. ಈ ನಟಿಯ ಪತಿ ಯಾರು? ಇದ್ದಕ್ಕಿದ್ದ ಹಾಗೇ ಈ ನಟಿ ಸಿನಿಮಾ ರಂಗದಿಂದ ದೂರ ಉಳಿದಿದ್ದೇಕೆ? ಈ ನಟಿಯ ಬಗ್ಗೆ ಮತ್ತಷ್ಟು ಇಂಟೆರೆಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ. ಸಾಮಾನ್ಯವಾಗಿ ನಟಿ ಮಧುಬಾಲಾ ಅಂತಾ ಹೇಳಿದರೆ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಅಣ್ಣಯ್ಯ ಸಿನಿಮಾದ ನಟಿ ಅಂದರೆ ಸಾಕು ತಟ್ಟಂತ ಇವರು ನೆನಪಾಗುತ್ತಾರೆ. 90ರ ದಶಕದಲ್ಲಿ ಕನ್ನಡ, ತೆಲುಗು, ಮಲಯಾಳಂ, ಹಿಂದಿ ಹಾಗೂ ತಮಿಳು ಸೇರಿದಂತೆ ಎಲ್ಲಾ ಭಾಷೆಗಳಲ್ಲಿಯೂ ಅಭಿನಯಿಸುತ್ತ ಪಂಚಭಾಷಾ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ನಟಿ ಮಧುಬಾಲಾ 1991ರಲ್ಲಿ ತಮಿಳು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಇದನ್ನೂ ಓದಿ: ಬಾಲಿವುಡ್ ನತ್ತ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ! EXCLUSIVE ಮಾಹಿತಿ ಇದು

ಮೂಲತಃ ತಮಿಳಿನವರಾದ ಮಧುಬಾಲಾರಿಗೆ ತಮಿಳು ಭಾಷೆಯ ಮೇಲೆ ಬಹಳ ಹಿಡಿತವಿದ್ದ ಕಾರಣ ತಮಿಳು ಸಿನಿಮಾ ಮೂಲಕವೇ ತಮ್ಮ ಸಿನಿರಂಗದ ವೃತ್ತಿಜೀವನ ಪ್ರಾರಂಭಿಸಿದರು. ಆದರೆ ತಮಿಳಿನಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡಿದರೂ ಇವರಿಗೆ ತಕ್ಕಮಟ್ಟ ಯಶಸ್ಸು ತಂದುಕೊಟ್ಟಿದ್ದು ಬಾಲಿವುಡ್ ಸಿನಿಮಾ. ಹೀಗೆ ಪಂಚಭಾಷೆಯ ಸಿನಿಮಾಗಳಲ್ಲಿ ಬೇಡಿಕೆ ಹೊಂದಿದ್ದ ಮಧುಬಾಲಾ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗೆ ಅಣ್ಣಯ್ಯ ಸಿನಿಮಾದಲ್ಲಿ ನಟಿಸಿ ಮಿಂಚಿದರು. 

ಕರುನಾಡಿನ ಸಿನಿಪ್ರೇಮಿಗಳು ಇಂದಿಗೂ ಮಧುಬಾಲಾರಿಗೆ ತುಂಬು ಹೃದಯದ ಪ್ರೀತಿ ನೀಡುತ್ತಾರೆ. ಅಣ್ಣಯ್ಯ ಸಿನಿಮಾ ಹಿಟ್ಟಾದ ಬಳಿಕ ಮಧುಬಾಲಾರಿಗೆ ಸಾಕಷ್ಟು ಸಿನಿಮಾಗಳ ಆಫರ್ ಬಂದರೂ ಸಹ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧಾರ ಮಾಡುತ್ತಾರೆ. 1999ರ ಏಪ್ರಿಲ್ 19ರಂದು ಉದ್ಯಮಿ ಆನಂದ ಶಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಮದುವೆಯಾದ ಕೆಲ ದಿನಗಳಷ್ಟೇ ಸುಖವಾಗಿ ಜೀವನ ನಡೆಸುತ್ತಾರೆ. ಆದರೆ ಪತಿ ಬ್ಯುಸಿನೆಸ್‌ನಲ್ಲಿ ಲಾಸ್‌ ಆದ ಕಾರಣ ಈ ನಟಿ ಕಂಗೆಟ್ಟು ಹೋಗುತ್ತಾರೆ. ಆಸ್ತಿಪಾಸ್ತಿಯನ್ನೆಲ್ಲ ಮಾರಿ ಸಾಲ ತೀರಿಸುವಂತಹ ದುಸ್ಥಿತಿ ಎದುರಾಗುತ್ತದೆ.

ಇದನ್ನೂ ಓದಿ: ಚಿನ್ನು ನನ್ನ ಮಗ.. 2 ವರ್ಷದ ಹಿಂದೆ ಅವನನ್ನ ಕಳ್ಕೊಂಡೆ: ಕಣ್ಣೀರಿಟ್ಟ ಆಂಕರ್‌ ಅನುಶ್ರೀ

ಪತಿಯ ಕಷ್ಟದ ಸಂದರ್ಭದಲ್ಲಿ ಕೈ ಬಿಡದ ಮಧುಬಾಲ ಅವರು ಒಂದಷ್ಟು ಪ್ರಾಜೆಕ್ಟ್‌ಗಳಿಗೆ ಸಹಿಮಾಡಿ ಮದುವೆಯಾದ ಬಳಿಕ ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡುತ್ತಾರೆ. ನಂತರ ಸಿಕ್ಕ ಸಿಕ್ಕ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ನಟಿ ಹಳಿತಪ್ಪಿದ್ದ ತಮ್ಮ ಸಾಂಸಾರಿಕ ಜೀವನವನ್ನು ಸರಿದಾರಿಗೆ ತರಲು ಪ್ರಯತ್ನಿಸುತ್ತಾರೆ. ಈಗ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮಧುಬಾಲಾ ಅವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಅವರು ತಮ್ಮ ಪತಿ ಆನಂದ್‌ ಶಾ ಮ್ತು ಇಬ್ಬರು ಮುದ್ದಾದ ಹೆಣ್ಣು ಮಕ್ಕಳೊಂದಿಗೆ ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಇಂದಿಗೂ ಪೋಷಕ ಪಾತ್ರಗಳಿಗೆ ಅವರಿಗೆ ಬೇಡಿಕೆ ಹೆಚ್ಚಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News