Dil Bechara ಬಿಡುಗಡೆಗೂ ಮುನ್ನ ಅಭಿಮಾನಿಗಳಿಂದ #SSRDidntCommitSuicide ಟ್ರೆಂಡಿಂಗ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಆತ್ಮಹತ್ಯೆಯಾಗಿದ್ದು ಎನ್ನುವ ಮುಂಬೈ ಪೋಲಿಸ್ ರ ವರದಿಯನ್ನು ಅಭಿಮಾನಿಗಳು ಇಂದಿಗೂ ನಂಬುವ ಸ್ಥಿತಿಯಲ್ಲಿ ಇಲ್ಲ. ಪ್ರತಿ ದಿನ ಕಳೆದಂತೆ, ಇದು ಆತ್ಮಹತ್ಯೆಯಲ್ಲ ಎಂದು ನಂಬುವ ನಟರ ಅಭಿಮಾನಿಗಳ ನೇತೃತ್ವದ ಸೋಷಿಯಲ್ ಮೀಡಿಯಾ ಅಭಿಯಾನವು ವೇಗವನ್ನು ಪಡೆಯುತ್ತಿದೆ.

Last Updated : Jul 23, 2020, 09:21 PM IST
 Dil Bechara ಬಿಡುಗಡೆಗೂ ಮುನ್ನ ಅಭಿಮಾನಿಗಳಿಂದ #SSRDidntCommitSuicide ಟ್ರೆಂಡಿಂಗ್ title=
file photo

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಆತ್ಮಹತ್ಯೆಯಾಗಿದ್ದು ಎನ್ನುವ ಮುಂಬೈ ಪೋಲಿಸ್ ರ ವರದಿಯನ್ನು ಅಭಿಮಾನಿಗಳು ಇಂದಿಗೂ ನಂಬುವ ಸ್ಥಿತಿಯಲ್ಲಿ ಇಲ್ಲ. ಪ್ರತಿ ದಿನ ಕಳೆದಂತೆ, ಇದು ಆತ್ಮಹತ್ಯೆಯಲ್ಲ ಎಂದು ನಂಬುವ ನಟರ ಅಭಿಮಾನಿಗಳ ನೇತೃತ್ವದ ಸೋಷಿಯಲ್ ಮೀಡಿಯಾ ಅಭಿಯಾನವು ವೇಗವನ್ನು ಪಡೆಯುತ್ತಿದೆ.

ಸುಶಾಂತ್ ಅವರ ಕೊನೆಯ ಚಿತ್ರ 'ದಿಲ್ ಬೆಚರಾ' ಬಿಡುಗಡೆಗೂ ಮುನ್ನ ಅಭಿಮಾನಿಗಳು ಟ್ವಿಟ್ಟರ್ ಮತ್ತು #SSRDidntCommitSuicide ಟ್ರೆಂಡಿಂಗ್ ಮಾಡುತ್ತಿದೆ.ಜೂನ್ 14, 2020 ರಂದು ಸುಶಾಂತ್ ಸಿಂಗ್ ರಜಪೂತ್ ಅವರ ಬಾಂದ್ರಾ ನಿವಾಸದಲ್ಲಿ  ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವರದಿಯ ಪ್ರಕಾರ, ಅವರು ಕಳೆದ ಕೆಲವು ತಿಂಗಳುಗಳಿಂದ ಖಿನ್ನತೆಯೊಂದಿಗೆ ಹೋರಾಡುತ್ತಿದ್ದರು ಮತ್ತು ಅದಕ್ಕೆ ಔಷಧಿಗಳನ್ನು ಸಹ ಪಡೆದಿದ್ದರು ಎನ್ನಲಾಗಿದೆ.ನಟನಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಈವರೆಗೆ 36 ಕ್ಕೂ ಹೆಚ್ಚು ಜನರ ಹೇಳಿಕೆಯನ್ನು ದಾಖಲಿಸಿದ್ದಾರೆ.

ನಟನ ಸಾವಿಗೆ ಒಂದು ತಿಂಗಳಾಗಿದೆ ಮತ್ತು ಅವರ ಅಭಿಮಾನಿಗಳು ನ್ಯಾಯಯುತ ತನಿಖೆಗಾಗಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ.ಏತನ್ಮಧ್ಯೆ, ಅವರ ಕೊನೆಯ ಚಿತ್ರ 'ದಿಲ್ ಬೆಚರಾ' ಜುಲೈ 24, 2020 ರಂದು ಡಿಜಿಟಲ್ ರೂಪದಲ್ಲಿ ಬಿಡುಗಡೆಯಾಗುತ್ತಿದೆ. ಇದು  ನಿರ್ದೇಶಕ ಮುಖೇಶ್ ಚಾಬ್ರಾ ಮತ್ತು ನಟಿ ಸಂಜನಾ ಸಂಘಿ  ಅವರ ಚೊಚ್ಚಲ ಚಿತ್ರವಾಗಿದೆ.

Trending News