ನವದೆಹಲಿ: ಅಭಿಷೇಕ್ ಬಚ್ಚನ್ ತಮ್ಮ 44 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಪತ್ನಿ ಐಶ್ವರ್ಯಾ ರೈ ಬಚ್ಚನ್ ಅವರು ಇಡೀ ಕುಟುಂಬದ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಅಭಿಷೇಕ್ ಅವರನ್ನು ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಐಶ್ವರ್ಯ ಅಭಿಷೇಕ್ ಗಾಗಿ ವಿಶೇಷ ಕೇಕ್ ತಯಾರಿಸಿದ್ದಾರೆ, ಇದರಲ್ಲಿ ಫುಟ್ಬಾಲ್, ಅವರ ಕಬಡ್ಡಿ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಅವರ ನೆಚ್ಚಿನ ಸಣ್ಣ- ಸಣ್ಣ ವಸ್ತುಗಳು ಇವೆ. ಐಶ್ವರ್ಯಾ ಅವರು ಅಬಿತಾಬ್ ಬಚ್ಚನ್, ಜಯ ಬಚ್ಚನ್ ಮತ್ತು ಆರಾಧ್ಯ ಬಚ್ಚನ್ ಸೇರಿದಂತೆ ಇಡೀ ಕುಟುಂಬದ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅದನ್ನು ಹಂಚಿಕೊಳ್ಳುತ್ತಿರುವಾಗ, ಹ್ಯಾಪಿ ಬರ್ತ್ಡೇ ಬೇಬಿ, ಪಾಪಾ… ಲವ್ ಲವ್ ಲವ್ ಆಲ್ವೇಸ್ ಎಂದು ಬರೆದಿದ್ದಾರೆ.
ಐಶ್-ಅಭಿ ಒಂದು ವರ್ಷದ ಡೇಟ್ ಬಳಿಕ ಏಪ್ರಿಲ್ 20, 2007 ರಂದು ವಿವಾಹವಾದರು. ಆ ಸಮಯದಲ್ಲಿ ಐಶ್ವರ್ಯಾ 33 ಮತ್ತು ಅಭಿಷೇಕ್ 31 ವರ್ಷ. ಅವರಿಗೆ ಆರಾಧ್ಯ ಎಂಬ ಮಗಳು ಇದ್ದಾಳೆ. ಅಭಿಷೇಕ್ ಮತ್ತು ಐಶ್ವರ್ಯವಿವಾಹವಾದ ಸಮಯದಲ್ಲಿ, ಅಮಿತಾಬ್ ಅವರ ತಾಯಿ ತೇಜಿ ಬಚ್ಚನ್ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಅವರು ತಮ್ಮ ಮೊಮ್ಮಗನ ಮದುವೆಯನ್ನು ನೋಡಲು ಬಯಸಿದ್ದರು. ವಿವಾಹವನ್ನು ತುಂಬಾ ಸರಳ ಶೈಲಿಯಲ್ಲಿ ಮಾಡಲಾಯಿತು.
ಅಭಿಷೇಕ್ ಮತ್ತು ಐಶ್ವರ್ಯಾ 'ಧೈ ಅಕ್ಷರ್ ಪ್ರೇಮ್ ಕೆ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು, ಆದರೆ 'ಗುರು' ಚಿತ್ರೀಕರಣದ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. 'ಗುರು' ಚಿತ್ರದ ಪ್ರಿಮಿಯರ್ ನಲ್ಲಿ ಅಭಿಷೇಕ್ ಐಶ್ವರ್ಯ ಅವರನ್ನು ಮದುವೆಗೆ ಪ್ರಪೋಸ್ ಮಾಡಿದರು. ಈ ಜೋಡಿ ತಮ್ಮ ಮದುವೆಯಲ್ಲಿ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರು ವಿನ್ಯಾಸಗೊಳಿಸಿದ ಶೆರ್ವಾನಿ ಅಭಿಷೇಕ್ ಧರಿಸಿದ್ದರು. ಅದೇ ಸಮಯದಲ್ಲಿ, ಐಶ್ವರ್ಯ ಗೋಲ್ಡನ್ ಕಲರ್ ಸೀರೆಯನ್ನು ಧರಿಸಿದ್ದರು. ಈ ಸೀರೆಯನ್ನು ನೀತಾ ಲೂಲಾ ವಿನ್ಯಾಸಗೊಳಿಸಿದ್ದಾರೆ.
ಇವರ ವರ್ಕ್ ಫ್ರಂಟ್ ಬಗ್ಗೆ ಮಾತನಾಡುವುದಾದರೆ ಐಶ್ವರ್ಯ ಅವರು 'ಹಮ್ ದಿಲ್ ದೇ ಚುಕೆ ಸನಮ್', 'ದೇವದಾಸ್', 'ಜೋಧಾ ಅಕ್ಬರ್', 'ಧೂಮ್ -2', 'ತಾಲ್' ನಂತಹ ಸೂಪರ್ಹಿಟ್ ಚಿತ್ರಗಳನ್ನು ಬಾಲಿವುಡ್ಗೆ ನೀಡಿದ್ದಾರೆ. ಅಭಿಷೇಕ್ ಬಚ್ಚನ್, ಪ್ರಸ್ತುತ ತಮ್ಮ ಮುಂಬರುವ ವೆಬ್ ಸರಣಿ ಬ್ರೀಥ್ ಸೀಸನ್ -2 ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅಲ್ಲದೆ, ಅವರು 'ಬಾಬ್ ಬಿಸ್ವಾಸ್' ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಈ ಮಾಹಿತಿಯನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳಿಗೆ ನೀಡಿದ್ದಾರೆ.