Aishwarya Rai: ಸೂಪರ್ ಸ್ಟಾರ್ ರಜನಿಕಾಂತ್, ಶಾರುಖ್ ಖಾನ್, ಸಲ್ಮಾನ್ ಖಾನ್, ಮೆಗಾಸ್ಟಾರ್ ಚಿರಂಜೀವಿ ಮುಂತಾದ ಸ್ಟಾರ್ ಹೀರೋಗಳ ಜೊತೆ ನಟಿಸಿರುವ ಈಕೆ. ಸಿನಿಮಾ ಹಿನ್ನೆಲೆ ಇಲ್ಲದೆಯೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಹಲವು ನಾಯಕಿಯರು ಹಲವು ಸಂಕಷ್ಟಗಳನ್ನು ಎದುರಿಸಿ ಸ್ಟಾರ್ ಪಟ್ಟ ಗಳಿಸಿದ್ದಾರೆ. ಅವರಲ್ಲಿ ಈ ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಕೂಡ ಒಬ್ಬರು. ಒಂದೊಮ್ಮೆ ಮೊದಲ ಸಂಭಾವನೆ ರೂ.1500 ತೆಗೆದುಕೊಂಡಿದ್ದ ಈ ಸುಂದರ ತಾರೆ ಸದ್ಯ ಒಂದೇ ಚಿತ್ರಕ್ಕೆ ರೂ.12 ಕೋಟಿ ಸಂಭಾವನೆ ಪಡೆಯುತ್ತಾರೆ. ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ಅನೇಕ ಬ್ಲಾಕ್ಬಸ್ಟರ್ ಹಿಟ್ಗಳನ್ನು ನೀಡಿದ್ದಾರೆ. ಅಷ್ಟಕ್ಕೂ ಯಾರೀಕೆ ಎನ್ನುವ ಪ್ರಶ್ನೆ ನಿಮನ್ನ ಕಾಡುತ್ತಿದೆಯಾ ? ಅವರೇ ವಿಶ್ವ ಸುಂದರಿ ಐಶ್ವರ್ಯ ರೈ.
ಐಶ್ವರ್ಯ ರೈ 1992 ರಲ್ಲಿ ಮಾಡೆಲಿಂಗ್ ಪ್ರಾರಂಭಿಸಿದರು. ಆಗ ಅವರು ಒಂದು ಚಿತ್ರೀಕರಣಕ್ಕೆ ಪಡೆಯುತ್ತಿದ್ದ ಸಂಭಾವನೆ ಕೇವಲ ರೂ.1500. 1994 ರಲ್ಲಿ ಮಿಸ್ ಯೂನಿವರ್ಸ್ನಲ್ಲಿ ಪಾಲ್ಗೊಂಡಿದ್ದ ಇವರು ಭಾರತವನ್ನು ಪ್ರತಿನಿಧಿಸಿ ವಿಜೇತರಾಗಿದ್ದರು.ಅದಾದ ಮೂರು ವರ್ಷಗಳ ನಂತರ ಐಶ್ವರ್ಯ ರೈ ಮಣಿರತ್ನಂ ನಿರ್ದೇಶನದ ಇರುವರ್ ಚಿತ್ರದ ಮೂಲಕ ಕಾಲಿವುಡ್ ಸಿನಿಮಾಗೆ ಪಾದಾರ್ಪಣೆ ಮಾಡಿದ್ದರು. ಅದೇ ವರ್ಷದಲ್ಲಿ, ಔರ್ ಪ್ಯಾರ್ ಹೋ ಗಯಾ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೂ ಪ್ರವೇಶಿಸಿದ್ದರು.
ಇದನ್ನೂ ಓದಿ: ವಿಷ್ಣು ದಾದಾ ಎರಡನೇ ಪುತ್ರಿ ಯಾರು ಗೊತ್ತಾ..? ನೋಡಿ ಇವರೇ ಆಕೆ..!
ಮಣಿರತ್ನಂ ನಿರ್ದೇಶನದಲ್ಲಿ ಐಶ್ವರ್ಯಾ ನಟಿಸಿದ ಪ್ರತಿ ಸಿನಿಮಾವೂ ಸೂಪರ್ ಹಿಟ್ ಆಗಿತ್ತು. ಸೌತ್ ಇಂಡಸ್ಟ್ರಿಯಲ್ಲೂ ಈ ಚೆಲುವೆಗೆ ಒಳ್ಳೆಯ ಕ್ರೇಜ್ ಹುಟ್ಟಿಕೊಂಡಿತ್ತು. ನಿರ್ದೇಶಕ ಶಂಕರ್ ನಿರ್ದೇಶನದ ಜೀನ್ಸ್ ಕೂಡ ಭರ್ಜರಿ ಯಶಸ್ಸು ಕಂಡಿತ್ತು. ಹೀಗೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಐಶ್ವರ್ಯ ಇಂದು ಸುಮಾರು ರೂ.776 ಕೋಟಿ ಆಸ್ತಿಯ ಒಡತಿ.
ಸದ್ಯಕ್ಕೆ ಐಶ್ವರ್ಯಾ ಪ್ಯಾನ್ ಇಂಡಿಯಾ ಸೆಲೆಬ್ರಿಟಿಯಾಗಿ ಫೇಮಸ್ ಆಗಿದ್ದಾರೆ. ಹಲವು ಚಿತ್ರಗಳು ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅವರು ಒಂದೇ ಚಿತ್ರಕ್ಕೆ ರೂ.12 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.