Alaya: ʻಯು ಟರ್ನ್‌ʼ ಚಿತ್ರದ ನಾಯಕಿಯ ಬಟ್ಟೆ ಮೇಲೆ ಕಾಲಿಟ್ಟ ಅಕ್ಷಯ್‌ ಕುಮಾರ್: ‌ಮುಜುಗರಕ್ಕೀಡಾದ ನಟಿ!

Alaya At Trailer Release Event: ಬಿ-ಟೌನ್‌ ಬೆಡಗಿ ಆಲಯಾ ಡ್ರೆಸ್‌ ಮೇಲೆ ನಟ ಅಕ್ಷಯ್‌ ಕುಮಾರ್‌ ತಮ್ಮ ಕಾಲನ್ನು ಇಟ್ಟಿದ್ದಾರೆ. ಆಗ ಈ ನಟಿ ಗಾಬರಿಗೊಂಡು ತಮ್ಮ ಡ್ರೆಸ್‌ ಬಿಡಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಇದೀಗ ಈ ವಿಡಯೋ ವೈರಲ್‌ ಆಗಿದೆ.   

Written by - Zee Kannada News Desk | Last Updated : Mar 27, 2024, 06:41 PM IST
  • ನಿನ್ನೆ ʻಬಡೇ ಮಿಯಾ ಚೋಟೆ ಮಿಯಾʼ ಸಿನಿಮಾದ ಪ್ರಮೋಷನಲ್‌ ಅದ್ದೂರೊಯಾಗಿ ನಡೆದಿತ್ತು.
  • ಟ್ರೇಲರ್‌ ಬಿಡುಗಡೆಯ ಇವೆಂಟ್‌ನಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಮಾನುಶಿ ಚಿಲ್ಲರ್ ಹಾಗೂ ಅಲಯಾ ಎಲ್ಲರೂ ಭಾಗಿಯಾಗಿದ್ದರು.
  • ಸದ್ಯಕ್ಕೆ ಬಡೇ ಮಿಯಾ ಚೋಟೆ ಮಿಯಾ ಸಿನಿಮಾದ ಟ್ರೇಲರ್ ಲಾಂಚ್ ಸಮಾರಂಭದ ಈ ವಿಡಿಯೋ ಸೋಶಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ.
Alaya: ʻಯು ಟರ್ನ್‌ʼ ಚಿತ್ರದ ನಾಯಕಿಯ ಬಟ್ಟೆ ಮೇಲೆ ಕಾಲಿಟ್ಟ ಅಕ್ಷಯ್‌ ಕುಮಾರ್: ‌ಮುಜುಗರಕ್ಕೀಡಾದ ನಟಿ! title=

Alaya And Akshay Kumar At Trailer Release Event: ಬಾಲಿವುಡ್‌ ಬೆಡಗಿ ಆಲಯಾ ಡ್ರೆಸ್‌ ಮೇಲೆ ನಟ ಅಕ್ಷಯ್‌ ಕುಮಾರ್‌ ಕಾಲಿಟ್ಟಿದ್ದಾರೆ. ಅದೇ ಸಂದರ್ಭದಲ್ಲಿ ಈ ನಟಿ ತಮ್ಮ ಬಟ್ಟೆ ಬಿಡಿಸಿಕೊಳ್ಳಲು ಪರದಾಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ. ನಿನ್ನೆ ʻಬಡೇ ಮಿಯಾ ಚೋಟೆ ಮಿಯಾʼ ಸಿನಿಮಾದ ಪ್ರಮೋಷನಲ್‌ ಅದ್ದೂರೊಯಾಗಿ ನಡೆದಿತ್ತು. ಈ ಚಿತ್ರ ಇದೇ ಏಪ್ರಿಲ್‌ 10 ರಂದು ತೆರೆಗೆ ಬರಲಿದ್ದು, ಕಾರ್ಯಕ್ರಮದ ಭಾಗವಾಗಿ ಟ್ರೇಲರ್‌ ರಿಲೀಸ್‌ ಕೂಡ ಮಾಡಲಾಗಿತ್ತು.

ಟ್ರೇಲರ್‌ ಬಿಡುಗಡೆಯ ಇವೆಂಟ್‌ನಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಮಾನುಶಿ ಚಿಲ್ಲರ್ ಹಾಗೂ ಅಲಯಾ ಎಲ್ಲರೂ ಭಾಗಿಯಾಗಿದ್ದರು. ಆಗ ಗ್ರೂಪ್‌ ಫೋಟೋಗೆ ಫೋಸ್‌ ನೀಡುವ ವೇಳೆ ಅಕ್ಷಯ್‌ ಕುಮಾರ್‌ ಗೊತ್ತಿಲ್ಲದಂತೆ ಪಕ್ಕದಲ್ಲಿಯೇ ನಿಂತಿದ್ದ ಅಲಯಾ ಬಟ್ಟೆಯ ಮೇಲೆ ಕಾಲಿಟ್ಟಿದ್ದರು. ಅದೇ ಸಂದರ್ಭದಲ್ಲಿ ಅಲಯಾ ಇದನ್ನ ಗಮನಿಸಿ  ಗಾಬರಿ ಪಟ್ಟರು. ಈ ನಟಿ ಫೋಟೋ ತೆಗೆಯೋ ತನಕ ಹಾಕಿಕೊಂಡಿದ್ದ ಡ್ರೆಸ್‌ನ್ನ ಬಿಗಿಯಾಗಿ ಹಿಡಿದುಕೊಂಡೇ ನಿಂತಿದ್ದರು.

 
 
 
 

 
 
 
 
 
 
 
 
 
 
 

A post shared by F I L M Y G Y A N (@filmygyan)

ಇದನ್ನೂ ಓದಿ: ದೇವಸ್ಥಾನದಲ್ಲಿ ಗುಟ್ಟಾಗಿ ಮದುವೆಯಾದ ನಟ ಸಿದ್ಧಾರ್ಥ್ - ಅದಿತಿ ರಾವ್..! ಕಾರಣವೇನು ಗೊತ್ತೆ..?

ಬಿಟೌನ್‌ ಬೆಡಗಿ ಆಲಯಾ ನಟ ಅಕ್ಷಯ್ ಕುಮಾರ್‌ ಕಾಲು ಕೆಳಗೆ ಸಿಕ್ಕಿ ಹಾಕೊಂಡಿದ್ದ ತಮ್ಮ ಡ್ರೆಸ್ ಅನ್ನು ಫೋಟೋ ಸೆಷನ್ ಮುಗಿಯುವರೆಗೂ ಗಟ್ಟಿಯಾಗಿ ಹಿಡಿದುಕೊಂಡಿದ್ದ ನಟಿ, ತದನಂತರ ಕೊನೆಗೂ ಡ್ರೆಸ್ ನ ಬಿಡಿಸಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಸದ್ಯಕ್ಕೆ ಬಡೇ ಮಿಯಾ ಚೋಟೆ ಮಿಯಾ ಸಿನಿಮಾದ ಟ್ರೇಲರ್ ಲಾಂಚ್ ಸಮಾರಂಭದ ಈ ವಿಡಿಯೋ ಸೋಶಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ.

ಹಿಂದಿ ಚಿತ್ರರಂಗದ ನಟಿ ಅಲಯಾ ಡ್ರೆಸ್ಸಿಂಗ್ ಸೆನ್ಸ್  ನೋಡಿದ ನೆಟ್ಟಿಗರು, ಇಷ್ಟು ಉದ್ದದ ಬಟ್ಟೆಯನ್ನು ಹಾಕಿಕೊಳ್ಳದೇ ಇದ್ದರೆ ಈ ಸಮಸ್ಯೆನೇ ಇರ್ತಿರಲಿಲ್ಲ ಅಂತ ಕಮೆಂಟ್‌ ಮಾಡಿದ್ದಾರೆ. ಮತ್ತೆ ಇನ್ನೊಬ್ಬರು ಇಂತಹ ಸ್ಥಿತಿ ಅಲಯಾಗೆ ಬರಬಾರದಿತ್ತೆಂದು ಕಾಲೆಳೆಯುತ್ತಿದ್ದಾರೆ. ಮತ್ತೊಬ್ಬರು ಅದು ಡ್ರೆಸ್ ಅಲ್ಲ. ಇದು ಡ್ರೆಸ್ ಹೆಸರಿನಲ್ಲಿ ಡ್ರೆಸ್ ಮೆಟೀರಿಯಲ್ ಅಂತ ಆಕೆಯ ಡ್ರೆಸ್‌ ಬಗ್ಗೆ ಆಡಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News