ಬಸ್ ನಿಲ್ದಾಣಕ್ಕೆ ಹೊಸ ರೂಪ ನೀಡಿದ ಅಪ್ಪು ಅಭಿಮಾನಿಗಳು...!

Puneeth Rajkumar: ಕರುನಾಡಿನ ಕಣ್ಮಣಿ, ಅಭಿಮಾನಿಗಳ ಪ್ರೀತಿಯ ಅಪ್ಪು, ಡಾ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ.‌ ಅಪ್ಪು ಸಿನಿಮಾ ನೋಡುತ್ತಲ್ಲೇ ಮೈ ಮರೆಯೋ ಕೋಟ್ಯಾಂತರ ಅಭಿಮಾನಿಗಳು ಅಪ್ಪು ಅವರ ಸಾಮಾಜ ಸೇವೆಯಿಂದ ಪ್ರೇರಣೆ ಪಡೆದಿರುವುದು ಸುಳ್ಳಲ್ಲ. ಇದಕ್ಕೆ ಸಾಕ್ಷಿ ಹಾವೇರಿಯ ವಿದ್ಯಾರ್ಥಿಗಳು

Written by - Yashaswini V | Last Updated : Mar 17, 2023, 03:22 PM IST
  • ಬಸ್ ನಿಲ್ದಾಣಕ್ಕೆ ಹೊಸ ರೂಪ ನೀಡಿದ ಅಪ್ಪು ಅಭಿಮಾನಿಗಳು...!
  • ಸ್ವಂತ ಹಣದಿಂದ ಸ್ಟೂಡೆಂಟ್ಸ್ ಸೇರಿ ಬಸ್ ನಿಲ್ದಾಣಕ್ಕೆ ನ್ಯೂ ಲುಕ್...
  • ಅಪ್ಪು ಅಭಿಮಾನಿಗಳ ಅಭಿಮಾನಕ್ಕೆ ಜನಸಾಮಾನ್ಯರು ಫುಲ್ ಖುಷ್...
ಬಸ್ ನಿಲ್ದಾಣಕ್ಕೆ ಹೊಸ ರೂಪ ನೀಡಿದ ಅಪ್ಪು ಅಭಿಮಾನಿಗಳು...! title=
Puneeth Rajkumar Birthday

Puneeth Rajkumar Birthday: ದೊಡ್ಮನೆ ಕುಡಿ ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ನಮ್ಮನ್ನೆಲ್ಲ ಅಗಲಿ ವರ್ಷವೇ ಕಳೆದಿದೆ. ಆದರೆ ಅವರು ನಮ್ಮೊಂದಿಗಿಲ್ಲ ಎಂಬ ಕಹಿ ಸತ್ಯವನ್ನು ಇಂದಿಗೂ ಕೂಡ ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಅಪ್ಪು ಕೇವಲ ನಟನಾಗಿ ಮಾತ್ರವಲ್ಲ ಅವರ ನಡತೆಯಿಂದ ಪ್ರತಿಯೊಬ್ಬರ ಮನಸಿನಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ಅವರ ಡಾನ್ಸ್, ನಟನೆ, ಎಲ್ಲರನ್ನೂ ಸಮಾನರಾಗಿ ಕಾಣುತ್ತಿದ್ದ ಅವರ ಗುಣ ಹೀಗೆ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. 

ಡಾ‌. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ಇಷ್ಟು ಅಭಿಮಾನಿಗಳನ್ನ ಬಿಟ್ಟು ಪವರ್ ಸ್ಟಾರ್ ಬಾರದ ಲೋಕಕ್ಕೆ ಪಯಣ ಬೆಳಸಿದರು. ಅಂದು ಅಪ್ಪು ಅವರ ಅಗಲಿಕೆಯಿಂದ ದೇಶವಷ್ಟೇ ಬಲ್ಲ ವಿದೇಶದಲ್ಲಿಯೂ ಕೋಟ್ಯಾಂತರ ಅಭಿಮಾನಿಗಳು ಕಣ್ಣಿರು ಹಾಕಿದ್ದರು. ಪವರ್ ಮ್ಯಾನ್ ನ ಸಾಮಾಜಿಕ ಕಾರ್ಯಕ್ಕೆ ಕರುನಾಡು ಮಾತ್ರವಲ್ಲದೆ, ಇಡೀ ಜಗತ್ತೆ ತಲೆ ಬಾಗಿತ್ತು. 

ಇದನ್ನೂ ಓದಿ- SHIVANNA- APPU: ʼನೀನು ಹುಟ್ಟಿದ್ದೇ ಒಂದು ಉತ್ಸವ, ನೀನು ಬೆಳೆದಿದ್ದೆ ಇತಿಹಾಸʼ

ಅಪ್ಪು ಸಿನಿಮಾ ನೋಡುತ್ತಲ್ಲೇ ಮೈ ಮರೆಯೋ ಕೋಟ್ಯಾಂತರ ಅಭಿಮಾನಿಗಳು ಅಪ್ಪು ಅವರ ಸಾಮಾಜ ಸೇವೆಯಿಂದಲೂ ಪ್ರೇರಣೆ ಪಡೆದು ಇಂದಿಗೂ ಕೂಡ ಅಪ್ಪು ನಮ್ಮೊಂದಿಗೆ ಇದ್ದಾರೆ ಎಂದು ಅವರ ಹೆಸರಿನಲ್ಲಿ ತಮ್ಮ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿದ್ದಾರೆ. ಇಂದು (ಮಾರ್ಚ್ 17) ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದ ಪ್ರಯುಕ್ತ, ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ಅಪ್ಪು ಹೆಸರಿನಲ್ಲಿ ಹಲವು ರೀತಿಯಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. 

ಇದನ್ನೂ ಓದಿ- ಕನ್ನಡದ ಪಠ್ಯ ಪುಸ್ತಕದಲ್ಲಿ ʼಅʼ ಎಂದರೆ ʼಅಪ್ಪುʼ ಎಂದಾಗಲಿ..!

ಇದೇ ಮಾದರಿಯಲ್ಲಿ ಹಾವೇರಿ ಜಿಲ್ಲೆಯ ಜೆಹೆಚ್ ಕಾಲೇಜಿನ ಪಕ್ಕದಲ್ಲಿರುವ ಅವನತಿ ಸ್ಥಿತಿಗೆ ತಲುಪಿದ್ದ ಬಸ್ ನಿಲ್ಣಾಣಕ್ಕೆ ಅಪ್ಪು ಅಭಿಮಾನಿಗಳಾಗಿರುವ ವಿದ್ಯಾರ್ಥಿಗಳು ಹೊಸ ಲುಕ್ ನೀಡಿದ್ದಾರೆ.  ಅಪ್ಪು ಜನ್ಮದಿನದ ಪ್ರಯುಕ್ತ ಜೆ ಹೆಚ್ ಕಾಲೇಜ್ ಹಾಗೂ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳೆಲ್ಲರೂ ಒಟ್ಟಿಗೆ ಸೇರಿ ತಮ್ಮ ಸ್ವಂತ ಹಣದಿಂದ ಬಣ್ಣ ಬಳಿದು ಬಸ್ ನಿಲ್ದಾಣಕ್ಕೆ ಹೊಸ ರೂಪವನ್ನೇ ನೀಡಿ ಜನಸಾಮಾನ್ಯರಿಗೆ ಉಡುಗೊರೆಯಾಗಿ ನೀಡಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಜನರೂ ಕೂಡ ಫುಲ್ ಖುಷ್ ಆಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News