ಕ್ಯಾನ್ಸರ್‌ನಿಂದ ಬಳಲುತ್ತಿರೋ ಪುಟ್ಟ ಅಭಿಮಾನಿಗೆ ಧೈರ್ಯ ತುಂಬಿದ ಅಪ್ಪು ಮಡದಿ: ಅಶ್ವಿನಿ‌ ಪುನೀತ್‌ ರಾಜ್‌ಕುಮಾರ್

Ashwini Puneeth Rajkumar: ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ನಿನ್ನೆ ಬ್ಲಡ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪ್ಪುವಿನ ಆರು ವರ್ಷದ ಪಟ್ಟ ಹರ್ಷವೆಂಬ ಅಭಿಮಾನಿಯನ್ನು ಮನೆಗೆ ಕರೆಸಿ ಧೈರ್ಯ ತುಂಬಿ, ಆತನ ಆಸೆಯನ್ನು ಪೂರೈಸಿ ಕಳುಹಿಸಿಕೊಟ್ಟಿದ್ದಾರೆ. 

Written by - Zee Kannada News Desk | Last Updated : Nov 7, 2023, 03:46 PM IST
  • ಪತಿಯ ಹಾದಿಯಲ್ಲಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಹ ಸಾಗುತ್ತಿದ್ದಾರೆ.
  • ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪ್ಪುವಿನ ಪುಟ್ಟ ಅಭಿಮಾನಿಯನ್ನು ಕರೆಸಿ ಧೈರ್ಯ ತುಂಬಿದ್ದಾರೆ.
  • ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ತಮ್ಮದೇ ಕಾರಿನಲ್ಲಿ ಹರ್ಷನ ಜೊತೆ ಡ್ರೈವರ್ ಅನ್ನು ಕಳುಹಿಸಿ ಪಿಆರ್‌ಕೆ ಸ್ಟುಡಿಯೋ ಹಾಗೂ ಮನೆಯನ್ನು ತೋರಿಸಿ ಕಳುಹಿಸಿ ಕೊಟ್ಟಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿರೋ ಪುಟ್ಟ ಅಭಿಮಾನಿಗೆ ಧೈರ್ಯ ತುಂಬಿದ ಅಪ್ಪು ಮಡದಿ: ಅಶ್ವಿನಿ‌ ಪುನೀತ್‌ ರಾಜ್‌ಕುಮಾರ್ title=

Ashwini Puneeth Rajkumar with Small Appu Fan: ಸ್ಯಾಂಡಲ್‌ವುಡ್‌ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಫ್ಯಾನ್ಸ್‌ಗಾಗಿ ಜೀವ ಮಿಡಿಯುತ್ತಿದ್ದು,  ತಮ್ಮ ತಂದೆಯಂತೆ  ಇವರು ಅಭಿಮಾನಿಗಳನ್ನು ದೇವರಂತೆ ಕಾಣುತ್ತಿದ್ದರು. ಇವರದ್ದೇ ಹಾದಿಯಲ್ಲಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಹ ಸಾಗುತ್ತಿದ್ದು, ತಮ್ಮ ಅಭಿಮಾನಿಗೆ ಏನಾದರೂ ಕಷ್ಟ ಬಂತು ಅಂದರೆ ಅಲ್ಲಿ ಇವರಿರುತ್ತಿದ್ದರು. ಪುನೀತ್‌ ಬ್ಯುಸಿ ಇದ್ದರೆ ಅವರ ಆಪ್ತರ ಮೂಲಕ ಸಹಾಯ ಹಸ್ತ ಚಾಚುತ್ತಿದ್ದರು. ಎಲ್ಲರ ಅಂಜನಿಪುತ್ರ ಸಾವನ್ನಪ್ಪಿದ ಬಳಿಕವೇ ಈ ಸಹಾಯ ಮನೋಭಾವ ಜಗತ್ತಿಗೆ ಗೊತ್ತಾಗಿದ್ದು, ಸದ್ಯ ಅದೇ ದಾರಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಹ ಸಾಗುತ್ತಿದ್ದಾರೆ.

ನಿನ್ನೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪ್ಪುವಿನ ಪುಟ್ಟ ಅಭಿಮಾನಿಯನ್ನು ಕರೆಸಿ ಧೈರ್ಯ ತುಂಬಿದ್ದಾರೆ. ಹರ್ಷ ಎಂಬ 6 ವರ್ಷ ಪುಟಾಣಿ ಅಭಿಮಾನಿಗೆ, ಬ್ಲಾಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು,ಈತನಿಗೆ ಅಪ್ಪು ಅಂದರೆ ಪಂಚ ಪ್ರಾಣ. ಪುನೀತ್ ರಾಜ್‌ಕುಮಾರ್ ಅಗಲಿದಾಗ ಈತನಿಗೆ ನಾಲ್ಕೂವರೆ ವರ್ಷವಾಗಿದ್ದು, ಅಲ್ಲಿಂದ ಅಪ್ಪು ಮನೆಗೆ ಹೋಗಬೇಕು, ಅವರ ಮನೆಯನ್ನು ನೋಡಬೇಕು ಅನ್ನೋ ಆಸೆಯುತ್ತು. 

ಇದನ್ನು ಓದಿ: ಅನುಷ್ಕಾ ಶೆಟ್ಟಿ ಮೊದಲು ನಟಿಸಿದ್ದು ತೆಲುಗಿನಲ್ಲಿ ಅಲ್ಲ… ಕನ್ನಡದ ಈ ಧಾರಾವಾಹಿಯಲ್ಲಿ! ಯಾವುದದು ಗೊತ್ತಾ?

ಹರ್ಷನ ತಂದೆ-ತಾಯಿ ಇಬ್ಬರೂ ಚಿತ್ರದುರ್ಗದವರಾಗಿದ್ದು, ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದು ನೆಲೆಸಿರುವ ಇವರು ತಂದೆ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರೆ, ಇತ್ತ ತಾಯಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಮನೆಯಲ್ಲಿ ಬಡತನವಿದ್ದರೂ, ಹರ್ಷನಿಗೆ ಬ್ಲಾಕ್ ಕ್ಯಾನ್ಸರ್ ಅಂತ ಗೊತ್ತಾದಾಗ ಚಿಕಿತ್ಸೆಯನ್ನು ಕೊಡಿಸಿದರೂ ಏನೂ ಪ್ರಯೋಜನ ಆಗಲಿಲ್ಲ.ವೈದ್ಯರೂ ಕೂಡ ಕೈ ಚಲ್ಲಿ ಕೂತಿದ್ದಾಗ, ಹರ್ಷನ ಆಸೆಗಳು ಏನಿವೆಯೋ ಅದನ್ನೆಲ್ಲ ತೀರಿಸಿ ಚೆನ್ನಾಗಿ ನೋಡಿಕೊಳ್ಳಿ ಅಂತ ಹೇಳಿದ್ದಾರೆ. 

ಇದೇ ಸಮಯದಲ್ಲಿ ಅಪ್ಪು ಮನೆಗೆ ನೋಡಬೇಕು,  ಅಶ್ವಿನಿ ಪುನೀತ್ ರಾಜ್‌ಕುಮಾರ್  ಭೇಟಿ ಮಾಡಬೇಕು ಎಂದಿದ್ದ ಅಂತ ಹರ್ಷ ಹಠ ಹಿಡಿದಿದಕ್ಕೆ, ಆಪ್ತರ ಮೂಲಕ ಹರ್ಷನ ಆಸೆಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ವರೆಗೂ ಮುಟ್ಟಿಸಿ, ಹರ್ಷನ ಮೆಡಿಕಲ್ ಡಿಟೈಲ್ಸ್, ಫೋಟೊಗಳು, ಪುನೀತ್ ಅಗಲಿದಾಗ ಅತ್ತಿದ್ದ ವಿಡಿಯೋವನ್ನು ಅಪ್ಪು ಮಡದಿಗೆ ಕಳುಹಿಸಿಕೊಟ್ಟಿದ್ದರು. ನವೆಂಬರ್ 6ರಂದು ಹರ್ಷನನ್ನು ಮನೆಗೆ ಕರೆಸಿಕೊಂಡು ಧೈರ್ಯ ತುಂಬಿ, ತಮ್ಮದೇ ಕಾರಿನಲ್ಲಿ ಹರ್ಷನ ಜೊತೆ ಡ್ರೈವರ್ ಅನ್ನು ಕಳುಹಿಸಿ ಪಿಆರ್‌ಕೆ ಸ್ಟುಡಿಯೋ ಹಾಗೂ ಮನೆಯನ್ನು ತೋರಿಸಿ ಕಳುಹಿಸಿ ಕೊಟ್ಟಿದ್ದಾರೆ. ಹೀಗಾಗಿ ಅಪ್ಪುವಿನಂತೆಯೇ ಅಶ್ವಿನಿ ಪುನೀತ್‌ಕುಮಾರ್ ಕೂಡ ಸಹಾಯ ಹಸ್ತ ಚಾಚುವುದಕ್ಕೆ ಮುಂದಾಗಿದ್ದರು, ಸದ್ಯ ಹರ್ಷನ ಪರಿಸ್ಥಿತಿ ಬೇರೆನೇ ಇದೆ ಎನ್ನಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News