ದೇಸಾಯಿ ಚಿತ್ರದ ಹಾಡು ರಿಲೀಸ್‌ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

Desai movie Song: ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ವಿಜಯ್ ಪ್ರಕಾಶ್ ಹಾಗೂ ಅನುರಾಧ ಭಟ್ ಈ ಹಾಡನ್ನು ಹಾಡಿದ್ದಾರೆ .

Written by - YASHODHA POOJARI | Last Updated : Jun 10, 2024, 02:37 PM IST
  • ದೇಸಾಯಿ ಚಿತ್ರದ ಹಾಡು ರಿಲೀಸ್
  • ಹಾಡು ರಿಲೀಸ್‌ ಮಾಡಿದ ಅಶ್ವಿನಿ
  • ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿದ ಹಾಡು
ದೇಸಾಯಿ ಚಿತ್ರದ ಹಾಡು ರಿಲೀಸ್‌ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್  title=

Desai movie Song released: ಶ್ರೀವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಲಾಂಛನದಲ್ಲಿ ಮಹಾಂತೇಶ ವಿ ಚೋಳದಗುಡ್ಡ ಕಥೆ ಬರೆದು ನಿರ್ಮಿಸಿರುವ, ನಾಗಿರೆಡ್ಡಿ ಭಡ ನಿರ್ದೇಶನದ ಹಾಗೂ "ಲವ್ 360" ಖ್ಯಾತಿಯ ಪ್ರವೀಣ್ ಕುಮಾರ್ ನಾಯಕನಾಗಿ ನಟಿಸಿರುವ "ದೇಸಾಯಿ" ಚಿತ್ರದ  "ಒಲವು ಮೂಡುವ ಕಾಲವು" ಹಾಡನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ, ಚಿತ್ರದ  ಟೀಸರ್ ಹಾಗೂ ಹಾಡು ತುಂಬಾ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ವಿಜಯ್ ಪ್ರಕಾಶ್ ಹಾಗೂ ಅನುರಾಧ ಭಟ್ ಈ ಹಾಡನ್ನು ಹಾಡಿದ್ದಾರೆ .   

ಇದನ್ನೂ ಓದಿ: ನಟ ಯುವರಾಜ್ ಕುಮಾರ್‌ ದಾಂಪತ್ಯದಲ್ಲಿ ಬಿರುಕು, ಪತ್ನಿಯಿಂದ ವಿಚ್ಚೇದನ ಕೋರಿ ಅರ್ಜಿ

ಈ ವೇಳೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮುಂದೆ ಮಾತನಾಡಿದ ನಿರ್ಮಾಪಕ ಮಹಾಂತೇಶ್ ವಿ ಚೋಳಚಗುಡ್ಡ, "ಮೇಡಂ ಪುನೀತ್ ರಾಜಕುಮಾರ್ ಅವರನ್ನು ಈ ಚಿತ್ರದ ನಾಯಕರಾಗಿ ಮಾಡಬೇಕೆಂದು ನನಗೆ ಆಸೆಯಿತ್ತು" ಎಂಬ ವಿಷಯವನ್ನು ತಿಳಿಸಿದರು. ಚಿತ್ರದ ನಾಯಕ ಪ್ರವೀಣ್ ಕುಮಾರ್, ನಾಯಕಿ ರಾಧ್ಯ, ನಿರ್ದೇಶಕ ನಾಗಿರೆಡ್ಡಿ ಭಡ ಹಾಗೂ ಶೋಭಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  

ಲವ್ 360" ಖ್ಯಾತಿಯ ಪ್ರವೀಣ್ ಕುಮಾರ್ ,ರಾಧ್ಯ, "ಒರಟ" ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ (ಕಾಂತಾರ) ಮುಂತಾದವರು ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: ಈ ಸ್ಟಾರ್‌ ನಟಿಯನ್ನು ಕಾಡ್ತಿದೆ ಅಪರೂಪದ ಕಾಯಿಲೆ.. 48 ದಿನಗಳಿಂದ ನರಕಯಾತನೆ.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News