Bappi Lahiri Dies: ಕಿಶೋರ್ ಕುಮಾರ್ ಅವರ ಹತ್ತಿರದ ಸಂಬಂಧಿ ಬಪ್ಪಿ ಲಾಹಿರಿ!

Bappi Lahiri Dies: ಬಪ್ಪಿ ಲಾಹಿರಿ ಬಾಲಿವುಡ್‌ಗೆ ಅನೇಕ ಸ್ಮರಣೀಯ ಹಾಡುಗಳನ್ನು ನೀಡಿದ್ದಾರೆ. ಆದರೆ ಅವರು ಕಿಶೋರ್ ಕುಮಾರ್ ಅವರ ಹತ್ತಿರದ ಸಂಬಂಧಿ ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Feb 16, 2022, 11:02 AM IST
  • ಬಪ್ಪಿ ಲಾಹಿರಿ ಕಿಶೋರ್ ಕುಮಾರ್ ಬಾಲಿವುಡ್‌ಗೆ ಅನೇಕ ಸ್ಮರಣೀಯ ಹಾಡುಗಳನ್ನು ನೀಡಿದ್ದಾರೆ
  • ಬಪ್ಪಿ ಲಾಹಿರಿ ವೃತ್ತಿಜೀವನವು ನಟನೆಯೊಂದಿಗೆ ಪ್ರಾರಂಭವಾಯಿತು
  • ಅನೇಕ ಪ್ರಸಿದ್ಧ ಹಾಡುಗಳನ್ನು ನೀಡಿದ್ದಾರೆ
Bappi Lahiri Dies: ಕಿಶೋರ್ ಕುಮಾರ್ ಅವರ ಹತ್ತಿರದ ಸಂಬಂಧಿ ಬಪ್ಪಿ ಲಾಹಿರಿ! title=
Bappi Lahiri relationship with Kishore Kumar

Bappi Lahiri Dies: ಭಾರತದಲ್ಲಿ ಡಿಸ್ಕೋ ಸಂಗೀತದ ಬೀಟ್‌ಗಳನ್ನು ಜನರಿಗೆ ಪರಿಚಯಿಸಿದ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಬಪ್ಪಿ ಲಾಹಿರಿ (Bappi Lahiri) ನಿಧನರಾಗಿದ್ದಾರೆ. ತಮ್ಮ ಸಂಗೀತ ಹಾಗೂ ಧ್ವನಿಯಿಂದಾಗಿ ಛಾಪು ಮೂಡಿಸಿದ್ದ ಬಪ್ಪಿ ಲಾಹಿರಿ ಅವರ ನಿಧನದಿಂದಾಗಿ (Bappi Lahiri Passed Away) ಸಂಗೀತ ಪ್ರೇಮಿಗಳು ಮತ್ತು ಸಿನಿ ಇಂಡಸ್ಟ್ರಿ ಆಘಾತಕ್ಕೊಳಗಾಗಿದೆ. ಅವರ ಸಂಗೀತ ಮತ್ತು ಧ್ವನಿಗಾಗಿ ಜನರು ಬಪ್ಪಿ ಲಾಹಿರಿಯನ್ನು ಇಷ್ಟಪಡುತ್ತಾರೆ, ಆದರೆ ಅವರು ಶ್ರೇಷ್ಠ ಗಾಯಕ ಕಿಶೋರ್ ಕುಮಾರ್  (Kishor Kumar) ಅವರಿಗೆ ತುಂಬಾ ಆತ್ಮೀಯರಾಗಿದ್ದರು  ಎಂದು ನಿಮಗೆ ತಿಳಿದಿದೆಯೇ. ಇಬ್ಬರಿಗೂ ಆತ್ಮೀಯ ಸಂಬಂಧವಿತ್ತು. 

ಬಪ್ಪಿ ಲಾಹಿರಿ ಕಿಶೋರ್ ಅವರ ಸೋದರಳಿಯರು:
ಹೌದು! ಸಂಗೀತ ಸಂಯೋಜಕ ಬಪ್ಪಿ ಲಾಹಿರಿ ಕಿಶೋರ್ (Bappi Lahiri) ಕುಮಾರ್ ಅವರ ಸಂಬಂಧದಲ್ಲಿ ಅವರ ಸೋದರಳಿಯರಾಗಿದ್ದರು, ಇಬ್ಬರ ನಡುವೆ ಸಾಕಷ್ಟು ಪ್ರೀತಿ ಇತ್ತು ಮತ್ತು ರಕ್ತ ಸಂಬಂಧಕ್ಕಿಂತ ಹೆಚ್ಚಾಗಿ ಇಬ್ಬರ ನಡುವೆ ಗುರು-ಶಿಷ್ಯರ ಸಂಬಂಧವಾಗಿತ್ತು. ಕೆಲವೊಮ್ಮೆ ಗುರು-ಶಿಷ್ಯ, ಕೆಲವೊಮ್ಮೆ ದೋಸ್ತಿ ಮತ್ತು ಕೆಲವೊಮ್ಮೆ ಸೋದರ ಮಾವ-ಸೋದರಳಿಯನ ಈ ಜೋಡಿಯು ಬಾಲಿವುಡ್‌ಗೆ ಅನೇಕ ಸ್ಮರಣೀಯ ಹಾಡುಗಳನ್ನು ನೀಡಿದೆ. ಬಾಲಿವುಡ್‌ಗೆ  ಬಪ್ಪಿ ಎಂಟ್ರಿ ಕೊಟ್ಟವರು ಬೇರೆ ಯಾರೂ ಅಲ್ಲ ಕಿಶೋರ್ ಕುಮಾರ್ (Kishor Kumar). 

ಇದನ್ನೂ ಓದಿ- Bappi Lahiri Dies: ಹಿರಿಯ ಸಂಗೀತ ಸಂಯೋಜಕ ಬಪ್ಪಿ ಲಾಹಿರಿ ವಿಧಿವಶ

ನಟನೆಯೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಬಪ್ಪಿ ಲಾಹಿರಿ:
ಸಂದರ್ಶನವೊಂದರಲ್ಲಿ ಮಾತನಾಡಿದ ಬಪ್ಪಿ ಲಾಹಿರಿ (Bappi Lahiri), ನಿರ್ಮಾಪಕ ನಿರ್ದೇಶಕ ಕಿಶೋರ್ ಕುಮಾರ್ ಅವರ ಸೋದರಳಿಯ. ನಾನು 20 ನೇ ವಯಸ್ಸಿನಲ್ಲಿ 'ಬಡ್ತಿ ಕಾ ನಾಮ್ ದಾಡಿ' ಎಂಬ ಹಾಸ್ಯ ಚಲನಚಿತ್ರದಲ್ಲಿ ಕೆಲಸ ಮಾಡಿದ್ದೇನೆ.  ಆ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿದ್ದೇನೆ. ಹಾಗಾಗಿ ನೀವು ಚಿತ್ರದಲ್ಲಿ ಕೆಲಸ ಮಾಡಬಹುದೆಂದು ನಾನು ಭಾವಿಸುತ್ತೇನೆ ಎಂದು ಕಿಶೋರ್ ಕುಮಾರ್ (Kishor Kumar) ಹೇಳಿದರು. ಆದರೆ, ನನಗೆ ಸರಿಯಾಗಿ ಹಿಂದಿ ಮಾತನಾಡಲು ಬರುತ್ತಿರಲಿಲ್ಲ. ಹಾಗಾಗಿ ಸಿನಿಮಾದಲ್ಲಿ ಹೇಗೆ ಕೆಲಸ ಮಾಡಬಲ್ಲೆ ಎಂದು ನಟನೆಗೆ ಬರಲಿಲ್ಲ ಎಂದರು. ಆದರೆ, ಬಾಲಿವುಡ್‌ಗೆ ಸ್ಮರಣೀಯ ಹಾಡುಗಳನ್ನು ನೀಡಲು ಬಪ್ಪಿ ಲಾಹಿರಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. 

ಕೆಟ್ಟ ಸ್ಥಿತಿಯಲ್ಲಿಯೂ ಬಪ್ಪಿ ಜೊತೆಯಾಗಿದ್ದ ಕಿಶೋರ್:
ಬಾಲಿವುಡ್‌ನಲ್ಲಿ 'ಡಿಸ್ಕೋ ಡ್ಯಾನ್ಸರ್' ನಂತರ ಬಪ್ಪಿ ಲಾಹಿರಿ ಗಲ್ಲಾಪೆಟ್ಟಿಗೆಯಲ್ಲಿ ಕೇವಲ ನಾಣ್ಯಗಳಷ್ಟೇ ಸಂಗ್ರಹವಾದ ಕಾಲವೊಂದಿತ್ತು. ಆದರೆ ಈ ಯಶಸ್ಸಿನಿಂದ ಅಸೂಯೆ ಪಟ್ಟ ಕೆಲವರು ಬಾಲಿವುಡ್‌ನಲ್ಲಿ ಬಪ್ಪಿ ಲಾಹಿರಿಗೆ (Bappi Lahiri) ಬಹಿಷ್ಕಾರ ಹಾಕಿದರು. ಅದರ ನಂತರ ಅವರು ಸಂಯೋಜಿಸಿದ ಹಾಡುಗಳನ್ನು ಹಾಡುವುದನ್ನು ಸಹ ನಿಲ್ಲಿಸಿದ್ದರು. ಆದರೆ, ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ, ಕಿಶೋರ್ ಕುಮಾರ್ ಮಾತ್ರ ಅವರ ಹಾಡುಗಳನ್ನು ಹಾಡಿದರು.  

ಇದನ್ನೂ ಓದಿ- ಅಲ್ಲು ಅರ್ಜುನ್ ಮೇಲಿನ ಪ್ರೀತಿಗೆ ಅಭಿಮಾನಿ ತೋರಿದ ವಿಶೇಷ ಅಭಿಮಾನ

69 ನೇ ವಯಸ್ಸಿನಲ್ಲಿ ನಿಧನ:
ಬಪ್ಪಿ ಲಾಹಿರಿ ಇಂದು ಅಂದರೆ ಬುಧವಾರ 16 ಫೆಬ್ರವರಿ 2022 ರಂದು ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಬಪ್ಪಿ ಲಾಹಿರಿ ಅವರು 1970-80ರ ದಶಕದ ಆರಂಭದಲ್ಲಿ 'ಚಲ್ತೇ ಚಲ್ತೆ', 'ಡಿಸ್ಕೋ ಡ್ಯಾನ್ಸರ್' ಮತ್ತು 'ಶರಾಬಿ'ಯಂತಹ ಹಲವಾರು ಚಲನಚಿತ್ರಗಳಲ್ಲಿ ಜನಪ್ರಿಯ ಹಾಡುಗಳನ್ನು ನೀಡುವ ಮೂಲಕ ಹೆಸರುವಾಸಿಯಾಗಿದ್ದಾರೆ. ಅವರ ಕೊನೆಯ ಬಾಲಿವುಡ್ ಹಾಡು 'ಬ್ಯಾಂಕಸ್' 2020 ರ ಚಿತ್ರ 'ಬಾಘಿ 3' ಗಾಗಿ ಆಗಿತ್ತು.

Trending News