ಚೇತನ್‌ ಅಹಿಂಸಾಗೆ ಮತ್ತೆ ಬಿಗ್‌ ರಿಲೀಫ್‌ : ಕರ್ನಾಟಕ ಹೈಕೋರ್ಟ್‌ನಿಂದ ತಡೆಯಾಜ್ಞೆ ವಿಸ್ತರಣೆ

Chetan Ahimsa : ಸಮುದಾಯಗಳ ನಡುವೆ ದ್ವೇಷ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಹೊತ್ತುಕೊಂಡಿರುವ ನಟ, ಹೋರಾಟಗಾರ ಚೇತನ್‌ ಅಹಿಂಸಾಗೆ ಕರ್ನಾಟಕ ಹೈಕೋರ್ಟ್‌ ಸಾಗರೋತ್ತರ ಪೌರತ್ವ ಕಾರ್ಡ್‌ ರದ್ದುಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಣೆ ಮಾಡಿದೆ.   

Written by - Zee Kannada News Desk | Last Updated : Jun 3, 2023, 07:01 AM IST
  • ಸಮುದಾಯಗಳ ನಡುವೆ ದ್ವೇಷ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಹೊತ್ತುಕೊಂಡಿರುವ ನಟ
  • ಚೇತನ್‌ ಅಹಿಂಸಾಗೆ ಕರ್ನಾಟಕ ಹೈಕೋರ್ಟ್‌ ಸಾಗರೋತ್ತರ ಪೌರತ್ವ ಕಾರ್ಡ್‌ ರದ್ದುಗೊಳಿಸಿದೆ
  • ಈ ವಿಚಾರವಾಗಿ ನಟ ಚೇತನ್‌ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು.
ಚೇತನ್‌ ಅಹಿಂಸಾಗೆ ಮತ್ತೆ ಬಿಗ್‌ ರಿಲೀಫ್‌ : ಕರ್ನಾಟಕ ಹೈಕೋರ್ಟ್‌ನಿಂದ ತಡೆಯಾಜ್ಞೆ ವಿಸ್ತರಣೆ  title=

Karnataka Highcourt : ಸಮುದಾಯಗಳ ನಡುವೆ ದ್ವೇಷ ಬಿತ್ತುವುದರ ಜೊತೆಗೆ ಭಾರತೀಯ ವಿರೋಧಿ ಚಟುವಟಿಗಳ ಆರೋಪಗಳ ಹಿನ್ನಲೆ ಕೇಂದ್ರ  ಸರ್ಕಾರ ನೋಟಿಸ್‌ ನೀಡಿ ಉತ್ತರ ಪಡೆದುಕೊಂಡಿತ್ತು. ಆದರೆ ಚೇತನ್‌ ಅಹಿಂಸಾ ಅವರಿಂದ ಸಮಾಧನಕರ ಉತ್ತರ ಸಿಗದೇ ಇರುವುದಕ್ಕೆ 2018 ರಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಸಾಗರೋತ್ತರ ಪೌರತ್ವ ಕಾರ್ಡ್‌ ನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಈ ವಿಚಾರವಾಗಿ ನಟ ಚೇತನ್‌ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು.

 ಕರ್ನಾಟಕ ಹೈಕೋರ್ಟ್‌ ನಟ ಚೇತನ್‌ ಅವರಿಗೆ ಏ.21ರಂದು ಕಾನೂನಾತ್ಮಕ ಷರತ್ತುಬದ್ಧ ರಿಲೀಫ್‌ ನೀಡಿತ್ತು. ನ್ಯಾಯಾಂಗದ ಕುರಿತಾಗಿ ನಟ ಯಾವುದೇ ಟ್ವೀಟ್‌ ಮಾಡುವಂತಿಲ್ಲ, ಬಾಕಿಯಿರುವ ಕೇಸ್‌ಗಳ ಬಗ್ಗೆಯೂ ಟ್ವೀಟ್‌ ಮಾಡುವಂತಿಲ್ಲ ಎಂದು ಹೈಕೋರ್ಟ್‌ ಆದೇಶ ನೀಡಿತ್ತು. ಜೊತೆಗೆ ಈ ಹಿಂದೆ ನಟ ಚೇತನ್‌ ಅವರು ಮಾಡಿರುವ ಎಲ್ಲಾ ಟ್ವೀಟ್‌ಗಳನ್ನು ಡಿಲೀಟ್‌ ಮಾಡುವಂತೆ ಕೋರ್ಟ್‌ ವಕೀಲರು ತಿಳಿಸಿದ್ದಾರೆ. 

ಇದನ್ನೂ ಓದಿ-ಆರ್‌ವಿ ವಿಶ್ವವಿದ್ಯಾಲಯದ ಟೀನ್‌ ಇಂಡಿಯಾ ಸಿನಿಮಾ ಪ್ರಶಸ್ತಿ(ಟಿಐಎಫ್‌ಎ) 2023 ವಿಜೇತರ ಪಟ್ಟಿ ಪ್ರಕಟ

ವಾದ ವಿವಾದಗಳನ್ನು ಪರೀಶೀಲಿಸಿದ ಹೈಕೋರ್ಟ್‌ ಈ ಹಿಂದೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಜೂನ್‌ 20 ರವರೆಗೆ ವಿಸ್ತರಿಸಿದೆ. ಅಲ್ಲದೆ ನಟ ಚೇತನ್‌ ಅರ್ಜಿಗೆ ಆಕ್ಷೇಪನೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. 

ಇದನ್ನೂ ಓದಿ-'Mahabharat' ಧಾರಾವಾಹಿ ಖ್ಯಾತಿಯ 'ಶಕುನಿ ಮಾಮಾ' ಗುಫಿ ಪೈಂಟಲ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News