ʼಚಿಕ್ಕದಾಗಿ ಸೇರ್ಕೊಂಡು ದೊಡ್ಡದಾಗಿ ಲವ್‌ ಮಾಡೋಣʼ : ಐಶುಗೆ ನವಾಜ್‌ ಲವ್‌ ಪ್ರಪೋಸ್‌

ಬಿಗ್‌ ಬಾಸ್‌ ಮನೆಯಲ್ಲಿ ಆಟದ ಜೊತೆ ಪಾಠವೂ ಇರುತ್ತದೆ. ಟಾಸ್ಕ್‌ ಜೊತೆ ಜೊತೆಗೆ ಭಾವನೆಗಳ ಬುತ್ತಿ ಕೂಡ ಇರುತ್ತದೆ. ಸದ್ಯ ಸೈಕ್‌ ನವಾಜ್‌ ಐಶ್ವರ್ಯ ಪಿಸಿಗೆ ಪ್ರೇಮ ನಿವೇದನೆ ಮಾಡಿದ್ದು, ನವಾಜ್‌ ಲವ್‌ ಪ್ರಪೋಸ್‌ ಸ್ಟೈಲ್‌ಗೆ ಐಶು ಕರಗಿ ನೀರಾಗಿದ್ದಾರೆ. ಇದನ್ನು ನೋಡಿದ ಜನ್ರು ಸೈಕ್‌ ಆಗಿಬಿಟ್ಟಿದ್ದಾರೆ.

Written by - Krishna N K | Last Updated : Sep 29, 2022, 08:25 PM IST
  • ಐಶ್ವರ್ಯ ಪಿಸಿಗೆ ಪ್ರೇಮ ನಿವೇದನೆ ಮಾಡಿದ ಸೈಕ್‌ ನವಾಜ್‌
  • ನವಾಜ್‌ ಲವ್‌ ಪ್ರಪೋಸ್‌ ಸ್ಟೈಲ್‌ಗೆ ಐಶು ಕರಗಿ ನೀರಾದ ಐಶು
  • ಇದನ್ನು ನೋಡಿ ಸೈಕ್‌ ಆದ ಜನ
ʼಚಿಕ್ಕದಾಗಿ ಸೇರ್ಕೊಂಡು ದೊಡ್ಡದಾಗಿ ಲವ್‌ ಮಾಡೋಣʼ : ಐಶುಗೆ ನವಾಜ್‌ ಲವ್‌ ಪ್ರಪೋಸ್‌ title=

Bigg Boss season 9 : ಬಿಗ್‌ ಬಾಸ್‌ ಮನೆಯಲ್ಲಿ ಆಟದ ಜೊತೆ ಪಾಠವೂ ಇರುತ್ತದೆ. ಟಾಸ್ಕ್‌ ಜೊತೆ ಜೊತೆಗೆ ಭಾವನೆಗಳ ಬುತ್ತಿ ಕೂಡ ಇರುತ್ತದೆ. ಸದ್ಯ ಸೈಕ್‌ ನವಾಜ್‌ ಐಶ್ವರ್ಯ ಪಿಸಿಗೆ ಪ್ರೇಮ ನಿವೇದನೆ ಮಾಡಿದ್ದು, ನವಾಜ್‌ ಲವ್‌ ಪ್ರಪೋಸ್‌ ಸ್ಟೈಲ್‌ಗೆ ಐಶು ಕರಗಿ ನೀರಾಗಿದ್ದಾರೆ. ಇದನ್ನು ನೋಡಿದ ಜನ್ರು ಸೈಕ್‌ ಆಗಿಬಿಟ್ಟಿದ್ದಾರೆ.

ತನ್ನದೆ ಶೈಲಿಯಲ್ಲಿ ಲವ್‌ ಪ್ರಪೋಸ್‌ ಮಾಡಿರುವ ನವಾಜ್‌, ನೋಡಿ ಐಶ್ವರ್ಯ ಅವರೇ, ನಾನು ನೋಡಿದಾಗಿಂದಲೂ ನಿಮ್ಮ ಮೇಲೆ ಫಿದಾ ಆಗ್ಬಿಟ್ಟಿದೀನಿ, ಇಂಗ್ಲೀಷ್‌ನಲ್ಲಿ ನಿಮ್ಮ ಥರಾ ಮಾತಾಡೋಕೆ ನನಗೆ ಬರಲ್ಲ, ನಮ್ಮಗೆ ಚಿಕ್ಕದು ಆದ್ರೆ ನನ್ನ ಮನಸ್ಸು ತುಂಬಾ ದೊಡ್ಡದು, ಚಿಕ್ಕ ಚಿಕ್ಕದಾಗಿ ಸೇರ್ಕೊಂಡು ದೊಡ್ಡ ದೊಡ್ಡದಾಗಿ ಪ್ರೀತಿ ಮಾಡೋಣ, ದೊಡ್ಡ ದೊಡ್ಡದಾಗಿ ಪ್ರೀತಿ ಮಾಡಿ ಚಿಕ್ಕ ಚಿಕ್ಕದಾಗಿ ಖುಷಿ ಪಡೋಣ, ಆ ಚಿಕ್ಕ ಚಿಕ್ಕ ಖುಷಿಯಲ್ಲಿಯೇ ಚಿಕ್ಕ ಚಿಕ್ಕ ಮಗುವಿಗೆ ಜನ್ಮ ಕೊಡೋಣ. ಆ ಚಿಕ್ಕ ಚಿಕ್ಕ ಮಕ್ಕಳನ್ನ ದೊಡ್ಡ ದೊಡ್ಡದಾಗಿ ಸಾಕೋಣ ದೊಡ್ಡ ದೊಡ್ಡದಾಗಿ ಸಾಯ್ಬೇಕಾದ್ರೆ ಚಿಕ್ಕ ಚಿಕ್ಕದಾಗಿ ನಕ್ಕೊಂಡು ಸಾಯೋಣ ನಮ್ಮ ಮಕ್ಕಳು ದೊಡ್ಡ ದೊಡ್ಡದಾಗಿ ಸಮಾಧಿ ಕಟ್ಟುತ್ತಾರೆ ಚಿಕ್ಕ ಚಿಕ್ಕದಾಗಿ ನಾವು ಅವರ ಮನಸ್ಸಿನಲ್ಲಿ ಆನಂದವಾಗಿರುತ್ತೇವೆ ಎಂದು ಲವ್‌ ಎಕ್ಸ್‌ಪ್ರೆಸ್‌ ಮಾಡಿದ್ದಾನೆ.

ಇದನ್ನೂ ಓದಿ: Virat Kohli ‌: ʼನಿಮ್ಮ ಅತ್ತಿಗೆ ಜೊತೆ ಬ್ಯುಸಿ ಇದ್ದಿನ್ರೋ... ಪ್ಲೀಸ್ ಡಿಸ್ಟರ್ಬ್‌ ಮಾಡಬೇಡಿʼ

ಇನ್ನು ನವಾಜ್‌ ಪ್ರಪೋಸಲ್‌ಗೆ ಐಶ್ವರ್ಯ, ಬಿಡಪ್ಪ ನಿಂಗೆ ಒಳ್ಳೆ ಹುಡುಗಿ ಸಿಗ್ತಾಳೆ, ನೀ ಹಿಂಗೆ ಹೇಳಿದ್ರೆ ಯಾವ ಹುಡುಗಿ ಆದ್ರೂ ನಿನ್ನ ಲವ್‌ ಮಾಡ್ತಾರೆ ಅಂತ ನವಾಜ್‌ ಲವ್‌ ಪ್ರಪೋಸಲ್‌ನ ನಾಜೂಕಾಗೆ ತಿರಸ್ಕರಿಸಿದ್ರು. ಇನ್ನು ಮುಂಜಾನೆ ಬಿಗ್‌ ಹೌಸ್‌ನಲ್ಲಿ ಈ ದಿನ ಅಮ್ಮಂದಿರ ದಿನವಾಗಿತ್ತು. ಎಲ್ಲಾ ಸ್ಪರ್ಧಿಗಳು ಅಮ್ಮನ ಸವಿನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು. ತಾಯಿಯ ಜೊತೆ ಕಳೆದ ಸಮಯ, ಸಂಗತಿಗಳನ್ನು ಎಲ್ಲರೂ ಹಂಚಿಕೊಂಡರು.

ಸ್ವಲ್ಪ ಎಮೋಷನಲ್ ಆದ ವಿನೋದ್‌ ಗೊಬ್ಬರಗಾಲ, ನಾನು ಬೆಂಗಳೂರಿಗೆ ಬಂದ್ಬಿಟ್ಟೆ.. ಅವ್ವ ನಂಗೆ ಇಲ್ಲಿ ಇರೋಕೆ ಆಗಲ್ಲ ಅಂದು ಅತ್ತೆ, ನನ್ನವ್ವ ತಡೆಯಲಾರದೆ.. ಮನೆಗೆ ಬಾ ಮಗನೆ ಇರೋವರೆಗೂ ನಾನು ಸಾಕ್ತೀನಿ ಅಂತ ಧೈರ್ಯ ತುಂಬಿದ್ರು ಎಂದು ಅವರ ತಾಯಿಯನ್ನು ನೆನೆದು ಅತ್ತರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News