BBK10: ಮಿಂಚಿನಂತೆ ಬಂದು ಹೋದ ಅಮ್ಮ.. ಬಿಕ್ಕಿ ಬಿಕ್ಕಿ ಅತ್ತ ಕಾರ್ತಿಕ್!

Bigg Boss Kannada: ಬಿಗ್‌ಬಾಸ್‌ ಮನೆಯೊಳಗೆ ಈ ವಾರ ಭಾವುಕತೆಯ ಸಮುದ್ರವೇ ಮೊರೆಯುತ್ತಿದೆ. ಇಷ್ಟು ದಿನಗಳ ಕಾಲ ಮನೆಯವರಿಂದ ದೂರವಿದ್ದ ಮನೆಯ ಸದಸ್ಯರಿಗೆ ಬಿಗ್‌ಬಾಸ್‌ ಕುಟುಂಬದವರೊಂದಿಗೆ ಬೆರೆಯುವ ಅವಕಾಶ ನೀಡುತ್ತಿದ್ದಾರೆ.   

Written by - Savita M B | Last Updated : Dec 27, 2023, 12:15 PM IST
  • ಬಿಗ್‌ಬಾಸ್‌ ಮನೆಯೊಳಗೆ ಈ ವಾರ ಭಾವುಕತೆಯ ಸಮುದ್ರವೇ ಮೊರೆಯುತ್ತಿದೆ.
  • ಅಲ್ಲದೆ ಮನೆಯ ಕ್ಯಾಪ್ಟನ್ಸಿ ಟಾಸ್ಕ್‌ನ ಭಾಗವಾಗಲೂ ಬಿಗ್‌ಬಾಸ್‌ ಮನೆಮಂದಿಯ ಬಂಧುಗಳಿಗೆ ಅವಕಾಶ ನೀಡುತ್ತಿದ್ದಾರೆ.
  • ಅಮ್ಮನೊಡನೆ ಒಡನಾಡಲು ಕಾಯುತ್ತಿದ್ದ ಕಾರ್ತಿಕ್‌ಗೆ ಬಿಗ್‌ಬಾಸ್‌ ಶಾಕ್ ನೀಡಿದ್ದಾರೆ.
BBK10: ಮಿಂಚಿನಂತೆ ಬಂದು ಹೋದ ಅಮ್ಮ.. ಬಿಕ್ಕಿ ಬಿಕ್ಕಿ ಅತ್ತ ಕಾರ್ತಿಕ್! title=

BBK10: ಅಲ್ಲದೆ ಮನೆಯ ಕ್ಯಾಪ್ಟನ್ಸಿ ಟಾಸ್ಕ್‌ನ ಭಾಗವಾಗಲೂ ಬಿಗ್‌ಬಾಸ್‌ ಮನೆಮಂದಿಯ ಬಂಧುಗಳಿಗೆ ಅವಕಾಶ ನೀಡುತ್ತಿದ್ದಾರೆ. ಈವತ್ತು JioCinema ಬಿಡುಗಡೆ ಮಾಡಿರುವ ಪ್ರೋಮೊ, ಅಂಥದ್ದೇ ಮತ್ತೊಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. 

ಎಲ್ಲರೂ ಮನೆಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾಗ, ‘ನನ್ನ ಮುದ್ದು ತಾರೆ; ನಗುತಲಿ ಬಾರೆ’ ಎಂಬ ಹಾಡು ಮನೆಯೊಳಗೆ ಮೊಳಗಿದೆ. ಈ ಧ್ವನಿಯನ್ನು ಗುರ್ತು ಹಿಡಿದ ಕಾರ್ತಿಕ್‌, ಖುಷಿಯಿಂದ ಜಿಗಿಯುತ್ತ, ‘ಅಮ್ಮಾ…’ ಎಂದು ಓಡಿಹೋಗಿ ಷರ್ಟ್‌ ತೊಟ್ಟುಕೊಂಡು ಬಂದಿದ್ದಾರೆ. ಅಮ್ಮನೊಡನೆ ಒಡನಾಡಲು ಕಾಯುತ್ತಿದ್ದ ಕಾರ್ತಿಕ್‌ಗೆ ಬಿಗ್‌ಬಾಸ್‌ ಶಾಕ್ ನೀಡಿದ್ದಾರೆ. 

ಇದನ್ನೂ ಓದಿ-ಚಂದನವನದ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ನಿಧನ!

ಕಾರ್ತಿಕ್ ಮನೆಯೊಳಗೆ ಪ್ರವೇಶಿಸುತ್ತಿದ್ದ ಹಾಗೆಯೇ ಬಿಗ್‌ಬಾಸ್‌ ಎಲ್ಲರಿಗೂ ಪಾಸ್ ಹೇಳಿದ್ದಾರೆ. ಹಾಗಾಗಿ ಕಾರ್ತಿಕ್ ಸೇರಿದಂತೆ ಎಲ್ಲರೂ ನಿಂತಲ್ಲೇ ನಿಶ್ಚಲರಾಗಿದ್ದಾರೆ. ಆಗ ಮನೆಯೊಳಗೆ ಬಂದ ಕಾರ್ತಿಕ್ ಅಮ್ಮ, ಕಾರ್ತಿಕ್ ಅವರ ಕೆನ್ನೆ ಸವರಿ, ‘ನಾವೆಲ್ಲರೂ ಚೆನ್ನಾಗಿದೀವಿ. ಅಳಬೇಡ ನೀಡು’ ಎಂದಷ್ಟೇ ಹೇಳಿದ್ದಾರೆ. 

ಇದನ್ನೂ ಓದಿ-ಚೆಫ್‌ ಚಿದಂಬರನ ಜೊತೆ ಲವ್‌ ಮಾಕ್ಟೆಲ್‌ ಸಿಹಿ: ರೆಚಲ್ ಡೇವಿಡ್ ಮಸ್ತ್ ಲುಕ್ ರಿವೀಲ್!

ಕಣ್ಣಲ್ಲಿ ನೀರು ಸುರಿಯುತ್ತಿದ್ದರೂ ಹೆತ್ತಮ್ಮನನ್ನು ತಬ್ಬಿಕೊಳ್ಳಲು, ಅವರೊಡನೆ ಮಾತಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಕಾರ್ತಿಕ್ ಅಸಹಾಯಕತೆ ಹೃದಯಕರಗಿಸುವಂತಿದೆ. ಅಷ್ಟರಲ್ಲಿ ಬಿಗ್‌ಬಾಸ್ ಮನೆಯ ಮುಖ್ಯದ್ವಾರ ತೆರೆದುಕೊಂಡಿದೆ. ಎಲ್ಲರೂ ನಿಶ್ಚಲ ಸ್ಥಿತಿಯಲ್ಲಿದ್ದಾಗಲೇ, ಕಾರ್ತಿಕ್ ಅಮ್ಮ, ತೆರೆದ ಬಾಗಿಲಿನಿಂದ ಹೊರಗೆ ಹೋಗಿದ್ದಾರೆ. ಬಾಗಿಲು ಹಾಕಿಕೊಂಡಿದೆ. 

‘ಅಮ್ಮಾ ವಾಪಸ್ ಬಾರಮ್ಮಾ’ ಎಂದು ಬಿಕ್ಕಿ ಬಿಕ್ಕಿ ಅಳುತ್ತಿರುವ ಕಾರ್ತಿಕ್, ಅವರಿಗೆ ಅಮ್ಮನ ಜೊತೆ ಮಾತಾಡಲು ಅವಕಾಶ ಸಿಗುತ್ತದೆಯಾ? ಅವರು ಮಾಡಿದ ಯಾವ ತಪ್ಪಿಗೆ ಈ ಶಿಕ್ಷೆ? 
ಎಲ್ಲವನ್ನೂ ತಿಳಿದುಕೊಳ್ಳಲು ಬಿಗ್‌ಬಾಸ್ ವೀಕ್ಷಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News