BBK10: ಎರಡನೇ ವಾರ ಬಿಗ್ ಬಾಸ್ ಮನೆ ಹೇಗಿರುತ್ತದೆ? ಯಾವೆಲ್ಲ ಟ್ವಿಸ್ಟ್ ಗಳು ಇರುತ್ತವೆ?

BBK 10 Second Week Twist: ಬಿಗ್‌ ಬಾಸ್‌ ಸೀಸನ್‌ 10 ಪ್ರಾರಂಭವಾಗಿ ಈಗಾಗಲೇ ಒಂದು ವಾರ ಕಳೆದಿದೆ. ಮೊದಲನೆಯ ವಾರದ ಕಥೆಯ ಬಗ್ಗೆ ಶನಿವಾರ ಕಿಚ್ಚನ ಜೊತೆ ಚರ್ಚೆಯು ಆಯ್ತು. ಭಾನುವಾರ ಬಿಗ್‌ಬಾಸ್‌ ಮನೆಯಲ್ಲಿ ನಡೆದ ಮೊದಲ ಎಲಿಮಿನೇಷನ್‌ನಲ್ಲಿ ಮನೆಯಿಂದ ಒಬ್ಬ ಸ್ಪರ್ದಿ ಹೊರ ಬಂದಾಗಿದೆ. ಸದ್ಯ ದೊಡ್ಮನೆಯಲ್ಲಿ ಎರಡನೇ ವಾರ ಹೇಗಿರಬಹುದು ಎನ್ನುವುದರರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ..

Written by - Savita M B | Last Updated : Oct 16, 2023, 02:00 PM IST
  • ಬಿಗ್‌ಬಾಸ್‌ ಸೀಸನ್‌ 10 ಪ್ರಾರಂಭವಾಗಿ ಮೊದಲನೆಯ ವಾರದ ಪಯಣ ಮುಗಿದಿದೆ
  • ಮೊದಲನೆಯ ವಾರ ಬಿಗ್‌ಬಾಸ್‌ ಮನೆಯಲ್ಲಿ ಅಷ್ಟಾಗಿ ಟಾಸ್ಕ್‌ಗಳು ನಡೆದಿಲ್ಲ
  • ಎರಡನೇ ವಾರ ಖಂಡಿತವಾಗಿ ಸ್ಪೆಷಲ್‌ ಆಗಿ ಇದ್ದೇ ಇರುತ್ತದೆ ಎಂದು ತಿಳಿದಿದೆ
BBK10: ಎರಡನೇ ವಾರ ಬಿಗ್ ಬಾಸ್ ಮನೆ ಹೇಗಿರುತ್ತದೆ? ಯಾವೆಲ್ಲ ಟ್ವಿಸ್ಟ್ ಗಳು ಇರುತ್ತವೆ? title=

BBK 10 Second Week Updates: ಬಿಗ್‌ಬಾಸ್‌ ಸೀಸನ್‌ 10 ಪ್ರಾರಂಭವಾಗಿ ಮೊದಲನೆಯ ವಾರದ ಪಯಣ ಮುಗಿದಿದೆ. ಸಮರ್ಥರು ಹಾಗು ಅಸಮರ್ಥರ ಗುಂಪುಗಳಾಗಿ ಸ್ಪರ್ದಿಗಳು ಮನೆಯ ಒಳಗೆ ಕಾಲಿಟ್ಟಿದ್ದರು. ಮೊದಲನೆಯ ವಾರ ಬಿಗ್‌ಬಾಸ್‌ ಮನೆಯಲ್ಲಿ ಅಷ್ಟಾಗಿ ಟಾಸ್ಕ್‌ಗಳು ನಡೆದಿಲ್ಲ. ಆದರೆ ದೊಡ್ಮನೆಯ ರೂಲ್ಸ್‌ಗಳು ಯಾವ ಯಾವ ಸ್ಪರ್ದಿಗಳು ಎಷ್ಟರ ಮಟ್ಟಿಗೆ ಪಾಲಿಸುತ್ತಾರೆ, ಮನೆಯ ಸದಸ್ಯರ ವರ್ತನೆ ಹಾಗು ಎಲ್ಲರ ಜೊತೆ ಹೇಗೆ ಹೊಂದಿಕೊಂಡಿದ್ದಾರೆ ಪ್ರತಿಯೊಂದು ಪರಿಗಣಿಸಲಾಗಿತ್ತು. ಹಾಗೆ ನಾಮೀಷನ್‌ ಪ್ರಕ್ರಿಯೆಯು ಸಹ ನಡೆದಿತ್ತು.

ಶನಿವಾರ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಮೊದಲೆನೆ ವಾರದಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ನಡೆದ ವಿಷಯಗಳು ಹಾಗು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಎಲ್ಲವು ಸುದೀಪ್‌ ಬಗೆಹರಿಸಿದರು. ಭಾನುವಾರ ಮೊದಲ ವಾರದ ಎಲಿಮಿನೇಷನ್‌ ನಡೆದಿದೆ. ಈ ಎಪಿಸೋಡಿನಲ್ಲಿ ನಾಮಿನೇಷನ್ ಪಟ್ಟಿಯಲ್ಲಿ ಸ್ನೇಕ್ ಶ್ಯಾಮ್, ಮೈಕಲ್ ಅಜಯ್, ಸಿರಿ, ನೀತು,ಡ್ರೋಣ್ ಪ್ರತಾಪ್, ಇವರೆಲ್ಲ ಇದ್ದರು. ಇವರಲ್ಲಿ ಮೊದಲು ಸೇಫ್‌ ಆಗಿದ್ದು ನೀತು ಅವರು. ನಂತರ ಉಳಿದಿದ್ದು, ಮೈಕಲ್, ಸಿರಿ ಮತ್ತು ಸ್ನೇಕ್‌ ಶ್ಯಾಮ್‌ ಅವರು. ಅವರಲ್ಲಿ ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್ ನ ಮೊದಲ ಎವಿಕ್ಟೆಡ್ ಕಂಟೆಸ್ಟೆಂಟ್ ಆಗಿ ಸ್ನೇಕ್ ಶ್ಯಾಮ್ ಮನೆಯಿಂದ ಹೊರಗೆ ಬಿದ್ದಿದ್ದಾರೆ. 

ಇದನ್ನೂ ಓದಿ-Shilpa Shetty: ಗಂಡನಂತೆ ಪೂರ್ತಿ ಮುಖ ಮುಚ್ಚಿಕೊಂಡ ಕರಾವಳಿ ಬೆಡಗಿ..! ಕಾರಣ ಏನು ಗೊತ್ತಾ?

ಸದ್ಯ ಮೊದಲನೆ ವಾರ ಮುಗಿಯಿದೆ. ಇನ್ನೇನು ಎರಡನೆ ವಾರಕ್ಕೆ ಬಿಗ್‌ಬಾಸ್‌ ಮಂದಿ ಕಾಲಿಟ್ಟಿದ್ದಾರೆ. ಈ ಸೀಸನ್‌ನ ಬಿಗ್‌ಬಾಸ್‌ ಮೊದಲನೆಯ ವಾರವೇ ಇಷ್ಟೊಂದು ಡಿಫರೆಂಟಾಗಿ ಇದೆ. ಎರಡನೇ ವಾರ ಖಂಡಿತವಾಗಿ ಸ್ಪೆಷಲ್‌ ಆಗಿ ಇದ್ದೇ ಇರುತ್ತದೆ ಎಂದು ತಿಳಿದಿದೆ. ಆದರೆ ಎರಡನೇಯ ವಾರದಲ್ಲಿ ಯಾವ ಟ್ವಿಸ್ಟ್‌ ಇರುತ್ತೆ, ಏನೆಲ್ಲಾ ಟಾಸ್ಕ್‌ಗಳು ಇರಲಿವೆ, ಯಾವ ಸ್ಪರ್ದಿಗಳೆಲ್ಲ ನಾಮಿನೇಟ್‌ ಆಗಬಹುದು ಎಂಬುದು ಎಲ್ಲಾ ಊಹೆ ಮಾಡಿಕೊಳ್ಳುವುದು ಕಷ್ಟ. ಆದರ ಇದೆಲ್ಲವನ್ನು ತಿಳಿದು ಕೊಳ್ಳುವುದಕ್ಕೆ ಬಿಗ್‌ಬಾಸ್‌ ಸೀಸನ್‌ 10 ವೀಕ್ಷಿಸಲೇ ಬೇಕು.

ಎರಡನೆಯ ವಾರದಲ್ಲಿ ಸಖತ್‌ ಟ್ವಿಸ್ಟ್‌ ಹಾಗು ಯೂನಿಕ್‌ನೆಸ್‌ ಇರುವುದಂತು ನಿಜ. ಸಾಮಾನ್ಯವಾಗಿ ಬಿಗ್‌ಬಾಸ್‌ನ ಎಲ್ಲಾ ಸೀಸನ್‌ನಲ್ಲಿ ನೋಡಿರುವಂತೆ ಬೆಳಗ್ಗೆ ವೇಕಪ್‌ ಸಾಂಗ್‌ ಹಾಕುವುದರ ಮೂಲಕ ದೊಡ್ಮನೆಯ ಸದಸ್ಯರನ್ನು ಎದ್ದೇಳಿಸುತ್ತಿದ್ದರು. ಈ ಸೀಸನ್‌ನಲ್ಲೂ ಅದೇ ರೀತಿ ಮೊದಲನೆಯ ವಾರ ವೇಕಪ್‌ ಸಾಂಗ್‌ ಹಾಕಿ ಕಂಟೆಸ್ಟೆಂಟ್‌ಗಳನ್ನು ಮುಂಜಾನೆ ಮೇಲೆದ್ದೇಳಿಸಲಾಗಿತು. ಆದರೆ ಬಿಗ್‌ಬಾಸ್‌ ಮನೆಯ ಎರಡನೆಯ ವಾರದ ಶುರುವಿನಲ್ಲೇ ಬಿಗ್‌ಬಾಸ್‌ ಟ್ವಿಸ್ಟ್‌ ಇಟ್ಟಿದ್ದಾರೆ. ಅದು ಬೆಳಗ್‌ ಬೆಳಗೆ ನಾಮಿವೇಷನ್‌.

ಇದನ್ನೂ ಓದಿ-Leo: ಬಿಡುಗಡೆಗೂ ಮುನ್ನವೇ ಬಿಗ್‌ ರೆಕಾರ್ಡ್‌...! ಪ್ರೀ ಬುಕ್ಕಿಂಗ್ ನಲ್ಲೇ ಇಷ್ಟು ಕೋಟಿ ಕಲೆಕ್ಷನ್?

ಹೌದು.. ʼಬೆಳಗೆದ್ದು ಯಾರ ಹೆಸರು ನಾಮಿನೇಟ್‌ ಮಾಡಿದೇʼ ಅನ್ನೋದೇ ಎರಡನೆಯ ವಾರದ ಮೊದಲ ದಿನದ ವೇಕಪ್‌ ಸಾಂಗ್.‌ ಚಂದದ ಹಾಡಿಗೆ ಅಷ್ಟೇ ಉತ್ಸಾಹದಿಂದ ಕುಣಿಯುತ್ತ ಸ್ಪರ್ಧಿಗಳು ಬೆಳಗನ್ನು ಬರಮಾಡಿಕೊಂಡಿದ್ದಾರೆ. ಆದರೆ ಬಿಗ್‌ಬಾಸ್‌ನ ಸೆಕೆಂಡ್‌ ವೀಕ್‌ನ ಮೊದಲ ದಿನ ಬೆಳಗ್ಗೆ ಬಿಗ್‌ಬಾಸ್‌, ಎದ್ದು ಕೂತ ಜಾಗದಿಂದಲೇ ಮನೆಯ ಸದಸ್ಯರಿಗೆ ನಾಮಿನೇಷನ್‌ ಮಾಡಲು ಹೇಳಿದರು. ಬಿಗ್‌ಬಾಸ್‌ ಸೂಚನೆಯಂತೆ ದೊಡ್ಮನೆಯ ಮಂದಿ ನಾಮಿನೇಷನ್‌ ಮಾಡಿದ್ದಾರೆ. 

ಸಂತೋಷದಿಂದ ಬೆಳಗನ್ನು ಬರಮಾಡಿಕೊಳ್ಳುತ್ತಿದ್ದ ಬಿಗ್‌ಬಾಸ್‌ ಮನೆಯ ಜನರು, ಇದೀಗ ಎರಡನೆಯ ವಾರದ ನಾಮಿನೇಷನ್‌ ಪ್ರಕ್ರಿಯೆಯಿಂದ ಮನೆಯ ಸದಸ್ಯರ ಮದ್ಯೆ ಮನಸ್ತಾಪ ಉಂಟಾಗಿದೆ. ಬೆಳಗೆ ಬೆಳಗೆ ಬಿಗ್‌ಬಾಸ್‌ ಸ್ಪರ್ದಿಗಳು ಕಿತಾಡಲು ಶುರು ಮಾಡಿದ್ದಾರೆ. ವಾರದ ಮೊದಲ ದಿನದ ಮುಂಜಾನೆಯ ಪರಿಸ್ಥಿತಿಯೇ ಹೀಗಿರುವಾಗ, ಇನ್ನೂ ವಾರ ಪೂರ್ತಿ ಬಿಗ್‌ಬಾಸ್‌ ಮನೆ ಆಟ ಹೇಗಿರಬಹುದು, ಮನೆಯ ಸದಸ್ಯರು ಯಾವ ರೀತಿ ಇರುತ್ತಾರೆ ಇವೆಲ್ಲವನ್ನೂ ಕಾದು ನೋಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News