ಬಾಬಿ ಡಿಯೋಲ್ ಮತ್ತು ಸುಷ್ಮಿತಾ ಸೇನ್ ನಂ 1 OTT Stars ...!

2020 ವರ್ಷವು ನಾವು ಅಂದುಕೊಂಡಂತೆ ಇರಲಿಲ್ಲ, ಅನೇಕ ಯೋಜನೆಗಳು ವಿಫಲವಾದವು,ಈ ಒಂದು ವರ್ಷದ ಅವಧಿಯು ಅನೇಕ ಪಾಠಗಳನ್ನು ಕಳಿಸಿತು.

Last Updated : Jan 22, 2021, 07:01 PM IST
  • ಬಾಬಿ ಡಿಯೋಲ್ (Bobby Deol) ತಾರೆಗಳಲ್ಲಿ ಶೇ 14 ರಷ್ಟು ಮತಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದಾರೆ.
  • ನಟರಲ್ಲಿ ಸಾಕಷ್ಟು ಸ್ಪರ್ಧೆ ಇದ್ದರೆ ನಟಿಯರಲ್ಲಿ ಸುಶ್ಮಿತಾ ಸೇನ್ (Sushmita Sen) ಸ್ಪಷ್ಟ ಗೆಲುವನ್ನು ಸಾಧಿಸಿದ್ದಾರೆ.
ಬಾಬಿ ಡಿಯೋಲ್ ಮತ್ತು ಸುಷ್ಮಿತಾ ಸೇನ್ ನಂ 1 OTT Stars ...! title=

ನವದೆಹಲಿ: 2020 ವರ್ಷವು ನಾವು ಅಂದುಕೊಂಡಂತೆ ಇರಲಿಲ್ಲ, ಅನೇಕ ಯೋಜನೆಗಳು ವಿಫಲವಾದವು,ಈ ಒಂದು ವರ್ಷದ ಅವಧಿಯು ಅನೇಕ ಪಾಠಗಳನ್ನು ಕಲಿಸಿತು.

ಇಡೀ ಸಿನಿಮಾ ಜಗತ್ತು ಸ್ಥಗಿತಗೊಂಡಾಗ ಒಟಿಟಿ ಪ್ಲಾಟ್ ಫಾರ್ಮ್ ಒಂದು ರೀತಿ ಓಯಸಿಸ್ ನಂತೆ ಸಹಾಯಕವಾಯಿತು.ಈಗ ಇಂಡಿಯಾ ಟುಡೇ ಈ ಒಟಿಟಿ ವೇದಿಕೆಯನ್ನು ಪರಿಗಣನೆಗೆ ತೆಗೆದುಕೊಂಡು ಮೂಡ್ ಆಫ್ ದಿ ನೇಷನ್ ನ ಸಮೀಕ್ಷೆಯನ್ನು ಕೈಕೊಂಡಿದೆ.ಈ ವರ್ಷದ ಇಂಡಿಯಾ ಟುಡೆ-ಕಾರ್ವಿ ಇನ್ಸೈಟ್ಸ್ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯಲ್ಲಿ ಬಾಬಿ ಡಿಯೋಲ್ ಮತ್ತು ಸುಷ್ಮಿತಾ ಸೇನ್ ಅವರು ಒಟಿಟಿ ಅಗ್ರ ತಾರೆಯರಾಗಿ ಹೊರಹೊಮ್ಮಿದ್ದಾರೆ.

  • ಬಾಬಿ ಡಿಯೋಲ್ OTT ನೆಚ್ಚಿನ ನಟ:

ಬಾಬಿ ಡಿಯೋಲ್ (Bobby Deol) ತಾರೆಗಳಲ್ಲಿ ಶೇ 14 ರಷ್ಟು ಮತಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದಾರೆ.ಎರಡನೇ ಸ್ಥಾನದಲ್ಲಿ ಶೇ 13 ಮತಗಳೊಂದಿಗೆ ರಾಜ್‌ಕುಮ್ಮರ್ ರಾವ್, ನಂತರದ ಸ್ಥಾನದಲ್ಲಿ ನವಾಜುದ್ದೀನ್ ಸಿದ್ದಿಕಿ, ಸೈಫ್ ಅಲಿ ಖಾನ್ ಮತ್ತು ಅಭಿಷೇಕ್ ಬಚ್ಚನ್ ಕ್ರಮವಾಗಿ 11, 10 ಮತ್ತು 8 ಶೇಕಡಾ ಮತಗಳನ್ನು ಪಡೆದಿದ್ದಾರೆ.ಬಾಬಿ ಡಿಯೋಲ್ ಅವರ ಚೊಚ್ಚಲ ಡಿಜಿಟಲ್ ಸರಣಿ ಆಶ್ರಮ್, ಆಗಸ್ಟ್ 28 ರಂದು ಎಮ್ಎಕ್ಸ್ ಪ್ಲೇಯರ್ನಲ್ಲಿ ಪ್ರಥಮ ಪ್ರದರ್ಶನಗೊಂಡು ಸಾಕಷ್ಟು ಸದ್ದು ಮಾಡಿತು.

ಇದನ್ನೂ ಓದಿ: ರೋಮಾಂಚನಗೊಳಿಸುವ ಬಾಯ್ ಫ್ರೆಂಡ್ ಜೊತೆಗಿನ ನಟಿ ಸುಶ್ಮೀತಾ ಸೇನ್ ಯೋಗ

  • ಸುಷ್ಮಿತಾ ಸೆನ್ OTT ನೆಚ್ಚಿನ ನಟಿ:

ನಟರಲ್ಲಿ ಸಾಕಷ್ಟು ಸ್ಪರ್ಧೆ ಇದ್ದರೆ ನಟಿಯರಲ್ಲಿ ಸುಶ್ಮಿತಾ ಸೇನ್ (Sushmita Sen) ಸ್ಪಷ್ಟ ಗೆಲುವನ್ನು ಸಾಧಿಸಿದ್ದಾರೆ.ಎರಡನೇ ಸ್ಥಾನದಲ್ಲಿ ಜಾನ್ವಿ ಕಪೂರ್ ಶೇ 12 ರಷ್ಟು ಮತಗಳನ್ನು ಪಡೆದಿದ್ದಾರೆ. ಭೂಮಿ ಪೆಡ್ನೇಕರ್, ಶೆಫಾಲಿ ಷಾ ಮತ್ತು ರಾಧಿಕಾ ಆಪ್ಟೆ 10, 7 ಮತ್ತು 6 ಶೇಕಡಾ ಮತಗಳೊಂದಿಗೆ 3, 4 ಮತ್ತು 5 ನೇ ಸ್ಥಾನಗಳನ್ನು ಗಳಿಸಿದ್ದಾರೆ.ಸುಶ್ಮಿತಾ ಸೇನ್ ಅವರ ಚೊಚ್ಚಲ ವೆಬ್ ಸಿರಿಸ್ ಆರ್ಯ ಚಿತ್ರದ ಮೂಲಕ ಗಮನ ಸೆಳೆದಿದ್ದರು.

ಇದನ್ನೂ ಓದಿ: ಬಾಲಿವುಡ್ ನಟಿ ಸುಶ್ಮಿತಾ ಸೇನ್ ತನ್ನ ಕೆಮಿಸ್ಟ್ರಿ ಟೀಚರ್ ಎಂದ ಶಾರುಖ್ ಖಾನ್...!

ಈಗ ಭಾರತದಲ್ಲಿಯೂ ಕೂಡ ಒಟಿಟಿ ಪ್ಲಾಟ್‌ಫಾರ್ಮ್‌ಗಳು ತನ್ನ ಹೊಸ ಬಗೆಯ ವಿಷಯದೊಂದಿಗೆ ಗಮನ ಸೆಳೆಯುತ್ತಿವೆ,ಆದರೆ ಈಗ ಇವುಗಳಿಗೆ ಸಿನಿಮಾದಂತೆ ಯಾವುದೇ ರೀತಿಯ ನಿಯಂತ್ರಣವಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.ಆದರೆ ಕೆಲವು ಇದಕ್ಕೆ ನಿಯಂತ್ರಣದ ಅವಶ್ಯಕತೆ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.ಒಟಿಟಿ ಪ್ಲಾಟ್‌ಫಾರ್ಮ್‌ಗಳು ಈಗ ಯುವ ಮತ್ತು ಹೊಸ ಪ್ರತಿಭೆಗಳಿಗೆ ಲಾಭದಾಯಕ ತಾಣವಾಗಿ ಮಾರ್ಪಟ್ಟಿವೆ, ಅದರಲ್ಲೂ ವಿಶೇಷವಾಗಿ ಚಲನಚಿತ್ರ ನಿರ್ಮಾಪಕರು ಅದನ್ನು ಒದಗಿಸಿದ ಸ್ವಾತಂತ್ರ್ಯಕ್ಕಾಗಿ ಪ್ರಶಂಸಿಸುತ್ತಾರೆ.ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈಗ 2020 ರ ಅಕ್ಟೋಬರ್‌ನಿಂದ ಒಟಿಟಿ ಪ್ಲಾಟ್‌ಫಾರ್ಮ್‌ಗಳತ್ತ ದೃಷ್ಟಿ ಹಾಯಿಸಿದ್ದರಿಂದಾಗಿ ಕೆಲವು ವಿಷಯಗಳು ಬದಲಾಗಬಹುದು ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News