Alia Bhatt:ಫೋನ್ ಮೂಲಕ ರಣಬೀರ್ ಕಪೂರ್‌ಗೆ ಆಲಿಯಾ ಭಟ್ ಆರ್ಡರ್‌ ಮಾಡಿದ್ದೇನು?

Alia Bhatt Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿದ್ದು, ಅವುಗಳಲ್ಲಿ ಈ ವಿಡಿಯೋ ಕೂಡ ಒಂದು. ಆಲಿಯಾ ಭಟ್ ಅವರನ್ನು ಅನುಕರಿಸುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್ ಆಗುತ್ತಿದೆ, ಇದನ್ನು ನೋಡಿ ನೀವು ಆಶ್ಚರ್ಯ ಪಡುತ್ತೀರಿ.

Written by - Chetana Devarmani | Last Updated : Apr 5, 2022, 03:46 PM IST
  • ಪಿಜ್ಜಾ ಆರ್ಡರ್ ಮಾಡಲು ಬಂತು ಆಲಿಯಾ ಭಟ್‌ ಧ್ವನಿ
  • ಮಿಮಿಕ್ರಿ ಕಲಾವಿದರು ಪಿಜ್ಜಾ ಕೆಲಸಗಾರನಿಗೆ ಮಕ್ಕರ್‌ ಮಾಡಿದ್ದು ಹೀಗೆ
  • ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ ಈ ವಿಡಿಯೋ
Alia Bhatt:ಫೋನ್ ಮೂಲಕ ರಣಬೀರ್ ಕಪೂರ್‌ಗೆ ಆಲಿಯಾ ಭಟ್ ಆರ್ಡರ್‌ ಮಾಡಿದ್ದೇನು?  title=
ಆಲಿಯಾ ಭಟ್‌

ಬಾಲಿವುಡ್ ಸೆಲೆಬ್ರಿಟಿಯೊಬ್ಬರು ಪಿಜ್ಜಾ ಆರ್ಡರ್ (Pizza Order) ಮಾಡಲು ಅಂಗಡಿಯವರಿಗೆ ಕರೆ ಮಾಡಿದರೆ, ಅವರು ಒಂದು ಕ್ಷಣ ಆಶ್ಚರ್ಯಚಕಿತರಾಗುವುದು ಸಾಮಾನ್ಯ. ಜನಸಾಮಾನ್ಯರು ಪಿಜ್ಜಾ ಆರ್ಡರ್‌ಗಳಿಗೆ ಕರೆ ಮಾಡುತ್ತಾರೆ. ಆದರೆ ಸೆಲೆಬ್ರಿಟಿಗಳು ಕರೆ ಮಾಡಿದಾಗ ಕರೆ ಸ್ವೀಕರಿಸಿದ ಅಂಗಡಿಯವರು ಕೊಂಚ ಗೊಂದಲಕ್ಕೆ ಒಳಗಾಗಬಹುದು. ಇಲ್ಲೊಂದು ಘಟನೆಯಲ್ಲಿ ಮಿಮಿಕ್ರಿ ಕಲಾವಿದರೊಬ್ಬರು ಪಿಜ್ಜಾ ಡೆಲಿವರಿ ಕಂಪನಿಯೊಂದರ ಕೆಲಸಗಾರರಿಗೆ ಸರಿಯಾಗಿ ಮಕ್ಕರ್‌ ಮಾಡಿದ್ದಾರೆ.

ಇದನ್ನೂ ಓದಿ: For Regn: ‘ದಿಯಾ’ ಪೃಥ್ವಿ ಜೊತೆ ‘ಫಾರ್ ರಿಜಿಸ್ಟ್ರೇಷನ್’ ಆದ ಮಿಲನಾ ನಾಗರಾಜ್!

ಪಿಜ್ಜಾ ಆರ್ಡರ್ ಮಾಡುವಾಗ ಆಲಿಯಾ ಭಟ್‌ (Alia Bhatt) ಧ್ವನಿ ಕೇಳಿಸಿದೆ. ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಅವರ ಧ್ವನಿಯಲ್ಲಿ ಮಾತನಾಡಿ ಪಿಜ್ಜಾ ಆರ್ಡರ್ ಮಾಡಿದ್ದಾರೆ. ಪಿಜ್ಜಾ ಆರ್ಡರ್ ಮಾಡುವಾಗ, ಹುಡುಗಿ ಆಲಿಯಾ ಭಟ್ ಅವರಂತೆಯೇ ಮಾತನಾಡಿದ್ದಾಳೆ. ಆಲಿಯಾ ಧ್ವನಿ ಕೇಳಿದ ನಂತರ, ಪಿಜ್ಜಾ ಅಂಗಡಿಯ ಕೆಲಸಗಾರ ಸ್ವಲ್ಪ ಗಲಿಬಿಲಿಗೊಂಡಿದ್ದಾನೆ.

ಮಿಮಿಕ್ರಿ ಕಲಾವಿದರು ಪಿಜ್ಜಾ ಕೆಲಸಗಾರನ ಜೊತೆ ಇಂತಹ ಜೋಕ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸದ್ಯ ಈ ವಿಡಿಯೋ ಸಖತ್‌ ವೈರಲ್ (Video Viral) ಆಗುತ್ತಿದೆ. ಚಾಂದಿನಿ ಎಂಬ ಮಿಮಿಕ್ರಿ ಕಲಾವಿದೆ ಆಲಿಯಾ ಭಟ್ ಅವರಂತೆ ಮಾತನಾಡಿದ್ದಾರೆ. ಮಿಮಿಕ್ರಿ ಸಮಯದಲ್ಲಿ ರಣಬೀರ್ ಕಪೂರ್ (Ranabir Kapoor) ಹೆಸರನ್ನು ಸಹ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಭಾರತದ ರಿಕ್ಕಿ ಕೇಜ್‌ಗೆ ಗ್ರ್ಯಾಮಿ ಅವಾರ್ಡ್‌: "ನಮಸ್ತೆ" ಎನ್ನುತ್ತಾ ವೇದಿಕೆ ಏರಿದ ಸಂಗೀತ ಸರದಾರ

ವಿಡಿಯೋದಲ್ಲಿ ಮಹಿಳೆ ಪಿಜ್ಜಾ ಔಟ್‌ಲೆಟ್‌ಗೆ ಕರೆ ಮಾಡಿ ಆಲಿಯಾ ಭಟ್ ಅವರಂತೆಯೇ ಮಾತನಾಡುತ್ತಿರುವುದನ್ನು ನಾವು ನೋಡಬಹುದು. ಧ್ವನಿ ಕೇಳಿದ ನಂತರ, ಅಂಗಡಿಯವರು ಯಾರಿದು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಆಲಿಯಾ ಭಟ್ ಎಂದು ಉತ್ತರಿಸುತ್ತಾರೆ. ಬಳಿಕ 'ರಣಬೀರ್' ಯಾವ ಪಿಜ್ಜಾ ತಿನ್ನಲು ಬಯಸುತ್ತಾರೆ ಎಂದು ಕೇಳುವಂತೆ ನಟಿಸುತ್ತಾರೆ. ನಂತರ ವೆಜ್ ಪಿಜ್ಜಾ ಬಗ್ಗೆ ವಿಚಾರಿಸುತ್ತಾರೆ. 

ಏಪ್ರಿಲ್ 1 ರಂದು ಫೂಲ್ಸ್‌ ಡೇ (Fools Day) ದಿನ ಮಾಡಿರುವ ಈ ವಿಡಿಯೋ Instagram ನಲ್ಲಿ ವೈರಲ್ ಆಗಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News