ʼಸೂತ್ರಧಾರಿʼಯಾಗಲು 12 ಕೆಜಿ ತೂಕ ಇಳಿಸಿದ ಚಂದನ್ ಶೆಟ್ಟಿ...!

ಗಾಯಕ, ಗೀತರಚನೆಕಾರ,‌ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ತಮ್ಮ ಎರಡನೇ ಇನ್ನಿಂಗ್ಸ್‌ ಅರಂಭಿಸಿದ್ದು, ʼಸೂತ್ರಧಾರಿʼ ಚಿತ್ರದಲ್ಲಿ ಡಿಫ್ರೆಂಟ್‌ ಪಾತ್ರದ ಮೂಲಕ ತೆರೆ ಮೇಲೆ ಮಿಂಚಲಿದ್ದಾರೆ. ʼಸೂತ್ರಧಾರಿʼ ಚಿತ್ರದ ಚಿತ್ರೀಕರಣ ಅಕ್ಟೋಬರ್ 10 ರಿಂದ ಆರಂಭವಾಗಲಿದೆ.‌

Written by - YASHODHA POOJARI | Edited by - Krishna N K | Last Updated : Oct 8, 2022, 04:07 PM IST
  • ʼಸೂತ್ರಧಾರಿʼ ಚಿತ್ರದಲ್ಲಿ ಡಿಫ್ರೆಂಟ್‌ ಪಾತ್ರದ ಮೂಲಕ ತೆರೆ ಮೇಲೆ ಮಿಂಚಲಿದ್ದಾರೆ ಚಂದನ್‌ ಶೆಟ್ಟಿ
  • ʼಸೂತ್ರಧಾರಿʼ ಚಿತ್ರದ ಚಿತ್ರೀಕರಣ ಅಕ್ಟೋಬರ್ 10 ರಿಂದ ಆರಂಭವಾಗಲಿದೆ.
  • ಚಿತ್ರಕ್ಕಾಗಿ ಹನ್ನೆರಡು ಕೆಜಿ ತೂಕ ಇಳಿಸಿಕೊಂಡ ಸಂಗೀತ ನಿರ್ದೇಶಕ
ʼಸೂತ್ರಧಾರಿʼಯಾಗಲು 12 ಕೆಜಿ ತೂಕ ಇಳಿಸಿದ ಚಂದನ್ ಶೆಟ್ಟಿ...! title=

ಬೆಂಗಳೂರು : ಗಾಯಕ, ಗೀತರಚನೆಕಾರ,‌ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ತಮ್ಮ ಎರಡನೇ ಇನ್ನಿಂಗ್ಸ್‌ ಅರಂಭಿಸಿದ್ದು, ʼಸೂತ್ರಧಾರಿʼ ಚಿತ್ರದಲ್ಲಿ ಡಿಫ್ರೆಂಟ್‌ ಪಾತ್ರದ ಮೂಲಕ ತೆರೆ ಮೇಲೆ ಮಿಂಚಲಿದ್ದಾರೆ. ʼಸೂತ್ರಧಾರಿʼ ಚಿತ್ರದ ಚಿತ್ರೀಕರಣ ಅಕ್ಟೋಬರ್ 10 ರಿಂದ ಆರಂಭವಾಗಲಿದೆ.‌ ಮೈ ಮೂವೀ ಬಜಾರ್ ನ ನವರಸನ್ ಈ ಚಿತ್ರ ನಿರ್ಮಿಸುತ್ತಿದ್ದು, ಕ್ರಿಯೇಟಿವ್ ಹೆಡ್ ಆಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಕಿರಣ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕರಾದ ಕೆ.ಸಿ.ಎನ್ ಕುಮಾರ್, ಗೋವಿಂದರಾಜು, ಸಂಜಯ್ ಗೌಡ,  ಗಿರೀಶ್(iflix) ಹಾಗೂ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಮುಂತಾದವರು ಸಮಾರಂಭಕ್ಕೆ ಆಗಮಿಸಿ ʼಸೂತ್ರಧಾರಿʼಗೆ ಶುಭ ಕೋರಿದರು.

ಇದನ್ನೂ ಓದಿ:ಆಸ್ಪತ್ರೆಯ ಬೆಡ್‌ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಖುಷ್ಬೂ : ನಿಜಕ್ಕೂ ಆಗಿದ್ದೇನು..?

ಇದು ನನ್ನ ನಿರ್ಮಾಣದ ಐದನೇ ಚಿತ್ರ. ಈವರೆಗೂ ನಮ್ಮ ಸಂಸ್ಥೆಯ ಮೂಲಕ 180ಕ್ಕೂ ಹೆಚ್ಚು ಚಿತ್ರಗಳ ಇವೆಂಟ್ ನಡೆಸಿಕೊಟ್ಟಿದ್ದೇನೆ. ನಿರ್ದೇಶನದೊಂದಿಗೆ ವಿತರಕನಾಗೂ ಕಾರ್ಯ ನಿರ್ವಹಿಸಿದ್ದೇನೆ. ಪ್ರಸ್ತುತ ʼಸೂತ್ರಧಾರಿʼ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಮ್ಮ‌ ತಂಡದವರೇ ಆದ ಕಿರಣ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಂದನ್ ಶೆಟ್ಟಿ ನಾಯಕನಾಗಿ, ಅಪೂರ್ವ ನಾಯಕಿಯಾಗಿ ನಟಿಸುತ್ತಿದ್ದಾರೆ. ‌ಇದೇ ಹತ್ತರಿಂದ ಚಿತ್ರೀಕರಣ ಆರಂಭವಾಗಲಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ನವರಸನ್ ಹೇಳಿದರು.

ನಾಯಕನಾಗಿ ನಾನು ಅಭಿನಯಿಸುತ್ತಿರುವ ಮೊದಲ ಚಿತ್ರ ʼಎಲ್ರ ಕಾಲೆಳಿಯುತ್ತೆ ಕಾಲʼ. ಆ ಚಿತ್ರ ರೆಟ್ರೊ ಶೈಲಿಯಲ್ಲಿ ಇರುತ್ತದೆ. ʼಸೂತ್ರಧಾರಿʼಯಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕಿರಣ್ ಕುಮಾರ್ ಉತ್ತಮ ಕಥೆ ಬರೆದಿದ್ದಾರೆ. ಮರ್ಡರ್ ಮಿಸ್ಟರಿ ಕಥೆ‌ ಅಂತ ಹೇಳಬಹುದು. ಈ ಚಿತ್ರಕ್ಕಾಗಿ ನಾನು ಹನ್ನೆರಡು ಕೆಜಿ ತೂಕ ಇಳಿಸಿಕೊಂಡಿದ್ದೀನಿ. ಸಂಗೀತ ನಿರ್ದೇಶನವನ್ನೂ ನಾನೇ ಮಾಡುತ್ತಿದ್ದೇನೆ. ‌ಎಲ್ಲರೂ ಗುನಗುವಂತಹ ಹಾಡುಗಳನ್ನು ಕೊಡುತ್ತೇನೆ ಎಂದು ಚಂದನ್ ಶೆಟ್ಟಿ ತಿಳಿಸಿದರು.

ಇದನ್ನೂ ಓದಿ: Kantara : ‘ಕಾಂತಾರ’ ನೋಡಿ ರಿಷಬ್‌ಗೆ ಸುದೀರ್ಘ ಪತ್ರ ಬರೆದ ಸುದೀಪ್‌

ʼಸೂತ್ರಧಾರಿʼ ಎಲ್ಲರಿಗೂ ಮೆಚ್ಚುಗೆಯಾಗುವಂತಹ ಕಥಾಹಂದರ ಹೊಂದಿದೆ. ನಾನು ನವರಸನ್ ಅವರ ಬಳಿ ಸಹ ನಿರ್ದೇಶಕನಾಗಿ ಹಾಗೂ ಪಿ.ಕೆ.ಹೆಚ್ ದಾಸ್ ಅವರ ಹತ್ತಿರ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ‌ ಮಾಡಿದ್ದೇನೆ.‌ ನಿರ್ದೇಶಕನಾಗಿ ಇದು ಮೊದಲ ಚಿತ್ರ ಎಂದು ಹೇಳಿದ್ದ ನಿರ್ದೇಶಕ ಕಿರಣ್ ಕುಮಾರ್, ಅವಕಾಶ ಕೊಟ್ಟ ನವರಸನ್ ಅವರಿಗೆ ಧನ್ಯವಾದ ತಿಳಿಸಿದರು.  ತಮ್ಮ ಪಾತ್ರದ ಬಗ್ಗೆ ‌ನಾಯಕಿ ಅಪೂರ್ವ, ಹಿರಿಯ ನಟ ತಬಲ ನಾಣಿ ಹಾಗೂ ಗಣೇಶ್ ನಾರಾಯಣ್ ಮಾತನಾಡಿದರು. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್, ಗೀತರಚನೆ ಮಾಡಿ, ಸಂಭಾಷಣೆ ಬರೆದಿರುವ ಕಿನಾಲ್ ರಾಜ್ ಹಾಗೂ ಸಂಕಲನಕಾರ ಸತೀಶ್ ಚಂದ್ರಯ್ಯ ತಮ್ಮ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News