ಪ್ರೀತಿಯ ಗೆಳತಿಗೆ ನೂರಾರು ಕಾಲ ಸುಖವಾಗಿ ಬಾಳು ಎಂದು ಹಾರೈಸಿದ ಡಿ ಬಾಸ್‌ ..!

D Boss : ದರ್ಶನ್ ಮತ್ತು ರಕ್ಷಿತಾ ಸ್ಯಾಂಡಲ್‌ವುಡ್‌ನಲ್ಲಿ ಅತ್ಯಂತ ರೋಮ್ಯಾಂಟಿಕ್ ಆನ್-ಸ್ಕ್ರೀನ್ ಜೋಡಿಗಳಲ್ಲಿ ಒಬ್ಬರು ಮತ್ತು ಪ್ರೇಕ್ಷಕರ ಸಾರ್ವಕಾಲಿಕ ನೆಚ್ಚಿನ ಜೋಡಿಗಳಲ್ಲಿ ಒಬ್ಬರು ಎಂದು ಹೇಳಲಾಗಿದೆ. 'ಕಲಾಸಿಪಾಳ್ಯ' ಚಿತ್ರದಲ್ಲಿ ಅವರ ಜೋಡಿಯು ಪ್ರಮುಖ ಹಿಟ್‌ ಜೋಡಿಗಳಲ್ಲಿ ಒಂದಾಗಿದೆ. ನಂತರ ಅವರು 'ಸುಂಟರಗಾಳಿʼ 'ಮಂಡ್ಯ', 'ಅಯ್ಯ' ಸಿನಿಮಾಗಳಲ್ಲಿ ನಟಿಸಿದ್ದರು.   

Written by - Zee Kannada News Desk | Last Updated : Mar 31, 2023, 05:20 PM IST
  • ರಕ್ಷಿತಾ ಕನ್ನಡ, ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿ.
  • ಕನ್ನಡದಲ್ಲಿ ದರ್ಶನ್-ರಕ್ಷಿತಾ ಜೋಡಿ ಸಾಕಷ್ಟು ಪ್ರಸಿದ್ಧಿಯಾಗಿತ್ತು.
  • ಸಾಕಷ್ಟು ಸದ್ದು ಮಾಡಿರುವಂತಹ ಸಿನಿ ಜೋಡಿ ಇಗಲೂ ಉತ್ತಮವಾದ ಗೆಳೆತನವನ್ನು ಹೊಂದಿದೆ.
ಪ್ರೀತಿಯ ಗೆಳತಿಗೆ ನೂರಾರು ಕಾಲ ಸುಖವಾಗಿ ಬಾಳು ಎಂದು ಹಾರೈಸಿದ ಡಿ ಬಾಸ್‌ ..!

Rakshita Prem : ರಕ್ಷಿತಾ ಕನ್ನಡ, ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿ. ಇವರು ಖ್ಯಾತ ಛಾಯಾಗ್ರಾಹಕ ಬಿ.ಸಿ.ಗೌರಿಶಂಕರ್ ಮತ್ತು ನಟಿ ಮಮತಾರಾವ್ ರವರ ಪುತ್ರಿ. 2007 ರಲ್ಲಿ ನಿರ್ದೇಶಕ ಪ್ರೇಮ್‌ರನ್ನು ವಿವಾಹವಾದ ರಕ್ಷಿತಾರಿಗೆ ಒಬ್ಬ ಪುತ್ರನಿದ್ದಾನೆ. ಕನ್ನಡದಲ್ಲಿ ಪುನೀತ್, ದರ್ಶನ್, ಸುದೀಪ್, ಶಿವರಾಜಕುಮಾರ್, ಉಪೇಂದ್ರ, ಶ್ರೀಮುರಳಿ ಮುಂತಾದ ನಟರೊಂದಿಗೆ ನಟಿಸಿದ ರಕ್ಷಿತಾ ತೆಲುಗಿನಲ್ಲಿ ಚಿರಂಜೀವಿ, ನಾಗಾರ್ಜುನ, ಮಹೇಶ್ ಬಾಬು, ರವಿತೇಜ,ಎನ್.ಟಿ.ಆರ್ ಮುಂತಾದ ನಟರೊಂದಿಗೆ ತೆರೆ ಹಂಚಿಕೊಂಡರು. ಕನ್ನಡದಲ್ಲಿ ದರ್ಶನ್-ರಕ್ಷಿತಾ ಜೋಡಿ ಸಾಕಷ್ಟು ಪ್ರಸಿದ್ಧಿಯಾಗಿತ್ತು.

ಸಾಕಷ್ಟು ಸದ್ದು ಮಾಡಿರುವಂತಹ ಸಿನಿ ಜೋಡಿ ಇಗಲೂ ಉತ್ತಮವಾದ ಗೆಳೆತನವನ್ನು ಹೊಂದಿದೆ. ದರ್ಶನ್‌ ಅವರು ಸ್ನೇಹಮಯಿ ಎಂದು ಎಲ್ಲರೂ ಹೇಳುತ್ತಾರೆ. ಇದೀಗ ದರ್ಶನ್‌ ತಮ್ಮ ಪ್ರೀಯ ಗೆಳತಿ ರಕ್ಷಿತಾ ಪ್ರೇಮ್‌ ಅವರಿಗೆ ಹುಟ್ಟುಹಬ್ಬಕ್ಕೆ ಶುಭವನ್ನು ಕೋರಿದ್ದಾರೆ. ಅವರು "ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ , ನಿನ್ನ ಹೃದಯ ಬಯಸಿದ್ದು ನಿನಗೆ ಫಲಿಸಲಿ ಎಂದು ಆಶಿಸುತ್ತಾ, ನೂರಾರು ವರುಷ ನೀನು ನಗು ನಗುತಾಯಿರು ಎಂದು ಹಾರೈಸುವೆ" ಎಂದು ಟ್ವೀಟ್‌ ಮಾಡಿದ್ದಾರೆ.  

 

 

ಇದನ್ನೂ ಓದಿ-ಹಸಿಬಿಸಿ ದೃಶ್ಯಗಳಲ್ಲೂ ದರ್ಶನ ಕೊಟ್ಟು ಕಮಾಲ್ ಮಾಡಿದ ಗ್ಲೋಬಲ್ ಸ್ಟಾರ್..! 

́ಡಿ ಬಾಸ್' ದರ್ಶನ್ ಅವರಿಗೆ ಅಪಾರವಾದ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳನ್ನು ತೆರೆಕಂಡಾಗ ಅಭಿಮಾನಿಗಳು ಹಬ್ಬದಂತೆ ಆಚರಣೆ ಮಾಡ್ತಾರೆ. ಅವರು ಒಂದು ಕರೆ ಕೊಟ್ಟರೆ ಸಾಕು, ಅದನ್ನು ಪೂರ್ಣಗೊಳಿಸುವ ತನಕ ಫ್ಯಾನ್ಸ್‌ ಬಿಡುವುದಿಲ್ಲ. ಹಾಗೆಯೇ ರಕ್ಷಿತಾ ಹಾಗೂ ದರ್ಶನ್‌ ಜೋಡಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದೆ. ಈ ಜೋಡಿಯನ್ನು ತೆರೆಮೇಲೆ ನೋಡಲು ಸಾಕಷ್ಟು ಅಭಿಮಾನಿಗಳು ಕಾತೂರದಿಂದ ಕಾಯುತ್ತಿದ್ದರು. 

ಪ್ರೇಮ್ ಜೊತೆ ವಿವಾಹವಾದ ನಂತರ ನಟನೆಗೆ ವಿರಾಮ ಹೇಳಿದ ರಕ್ಷಿತಾ ತಮ್ಮ ಹೋಮ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣಕ್ಕಿಳಿದರು. ಶಿವರಾಜಕುಮಾರ್‌ರವರ ನೂರನೇ ಚಿತ್ರ ಜೋಗಯ್ಯವನ್ನು ನಿರ್ಮಾಣವನ್ನು `ಪ್ರೇಮ್ ಪಿಕ್ಚರ್ಸ್' ಅಡಿಯಲ್ಲಿ ನಿರ್ಮಾಣ ಮಾಡಿದರು. ಇದೇ ಬ್ಯಾನರ್‌ನಲ್ಲಿ ಪ್ರೇಮ್ ನಟನೆಯ `ಡಿ.ಕೆ' ಚಿತ್ರವನ್ನು ನಿರ್ಮಿಸಿದ್ದಾರೆ.ಕಿರುತೆರೆಯಲ್ಲಿ ನಿರೂಪಕಿಯಾಗಿ `ಸ್ವಯಂವರ' ಕಾರ್ಯಕ್ರಮ ನಿರೂಪಣೆ ಮಾಡಿರುವ ರಕ್ಷಿತಾ ಹಲವು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.ಇವುಗಳಲ್ಲಿ ಜೀ ಕನ್ನಡದ `ಕಾಮಿಡಿ ಖಿಲಾಡಿಗಳು' ತುಂಬಾ ಪ್ರಸಿದ್ಧವಾಗಿದೆ.

​ಇದನ್ನೂ ಓದಿ-Kiran Raj New Film: ಹರ್ಷ ಎಂದೇ ಖ್ಯಾತಿ ಪಡೆದಿರುವ ಕಿರಣ್‌ ರಾಜ್‌ಗೆ ಧಾರವಾಹಿಗಳ ಮೇಲೆ ಮುನಿಸೇತಕೆ ?  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News