Tharun Sudhir Talked About Darshan Old Getup: ಕರ್ನಾಟಕದಲ್ಲಿ 'ಕಾಟೇರ' ಸಿನಿಮಾ ಗೆದ್ದಿ, ಬಾಕ್ಸಾಫೀಸ್‌ನಲ್ಲಿ 'ಕಾಟೇರ' ಧೂಳೆಬ್ಬಿಸುವುದರ ಜೊತೆ 100 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಕಲೆ ಹಾಕಿದೆ. ಹೀಗಾಗಿ ಇಡೀ ಚಿತ್ರತಂಡ ಖುಷಿಯ ಅಲೆಯಲ್ಲಿ ತೇಲುತ್ತಿದ್ದು,ದರ್ಶನ್ ವೃತ್ತಿ ಬದುಕಿನಲ್ಲೇ ವಿಭಿನ್ನ ಚಿತ್ರ ಅಂತ ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ. 70ರ ದಶಕದ ಕಥೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿರು. ಒಂದು ಕಡೆ 70ರ ದಶಕದ ಗೆಟಪ್ ಆಗಿದ್ದರೆ, ಇನ್ನೊಂದು ಕಡೆ ವಯಸ್ಸಾದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು. ಈ ಎರಡು ಗೆಟಪ್‌ಗಳು ಕೂಡ ದರ್ಶನ್ ವೃತ್ತಿ ಬದುಕಿನಲ್ಲೇ ಮೊದಲು.
ಕಾಟೇರ ಸಿನಿಮಾದಲ್ಲಿ ಹೊಸತೇನನ್ನೋ ಟ್ರೈ ಮಾಡಬೇಕು ಅಂತ ಪ್ರಯತ್ನ ಪಟ್ಟಿದ್ದು ಅಂದರೇ ಅದೇ ಓಲ್ಡ್ ಗೆಟಪ್. ಈ ಹಿಂದೆಂದೂ ದರ್ಶನ್ ಓಲ್ಡ್ ಲುಕ್ ಕಾಣಿಸಿಕೊಂಡಿರದ ಕಾರಣ, ಬೇರೆ ಬೇರೆ ಲುಕ್ ಟ್ರೈ ಮಾಡಿದ್ದರು. ಆದರೆ, ಕೊನೆಗೆ ಓಕೆ ಆಗಿದ್ದೇ ಈಗಿರುವ ಓಲ್ಡ್ ಗೆಟಪ್. ದರ್ಶನ್ ಈ ಓಲ್ಡ್ ಗೆಟಪ್ ಅನ್ನು ಇಡೀ ತಂಡ ಒಪ್ಪಿಕೊಂಡಿದ್ದು, ಮೇಕಪ್ ಹಾಕುವಾಗ ಮಾತ್ರ ದೊಡ್ಡ ಸಮಸ್ಯೆ ಎದುರಾಗುತ್ತಿತ್ತು. ನಟ ದರ್ಶನ್ ವಯಸ್ಸಾದ ಪಾತ್ರದಲ್ಲಿ ನಟಿಸುವುದಕ್ಕೆ ತುಂಬಾನೇ ಕಷ್ಟ ಪಟ್ಟಿದ್ದು, ಎರಡೆರಡು ಗಂಟೆ ಮೇಕಪ್ ಹಾಕಿಕೊಂಡು ಶೂಟಿಂಗ್‌ಗೆ ರೆಡಿಯಾಗಬೇಕಿತ್ತು.
ಇದನ್ನೂ ಓದಿ: ಯಶ್ ಟಾಕ್ಸಿಕ್ ಸಿನಿಮಾಗೆ ಈ ಸೌತ್ ಬ್ಯೂಟಿಯೇ ಹೀರೋಯಿನ್.. ಕರೀನಾ, ಸಂಯುಕ್ತಾ, ಸಾಯಿ ಪಲ್ಲವಿ ಅಲ್ಲ!
ಮೇಕಪ್ ಹಾಕಿಕೊಂಡ ಬಳಿಕ ದರ್ಶನ್ ಎಷ್ಟು ಕಷ್ಟಪಟ್ಟಿದ್ದಾರೆ ಅನ್ನೋದನ್ನು ನಿರ್ದೇಶಕರ ತರುಣ್ ಸುಧೀರ್ ರಿವೀಲ್ ಮಾಡಿದ್ದಾರೆ. ಇಷ್ಟೇ ಅಲ್ಲ, ಓಲ್ಡ್ ಗೆಟಪ್‌ನಲ್ಲಿ ಮೇಕಪ್ ಹಾಕಿದ ಬಳಿಕ ದರ್ಶನ್ ಮಧ್ಯಾಹ್ನ ಊಟವನ್ನೇ ಮಾಡುತ್ತಿರಲಿಲ್ಲ. ಡೈರೆಕ್ಟರ್ ತರುಣ್ , "ಇನ್ನೊಂದು ವಯಸ್ಸಾಗಿರೊ ಗೆಟಪ್ ಬೇಕಿತ್ತು. ಅದಕ್ಕಾಗಿ ಒಂದಿಷ್ಟು ಬೇರೆ ಬೇರೆ ಲುಕ್‌ಗಳನ್ನು ಟ್ರೈ ಮಾಡಿದ್ವಿ ನಾವು. ಕೊನೆಗೆ ಒಂದು ಫೈನಲ್ ಲುಕ್ ಲಾಕ್ ಆಯ್ತು. ಅವರಿಗೆ ಈ ಲುಕ್ ಸಖತ್ ಚಾಲೆಂಜಿಂಗ್ ಆಗಿತ್ತು. ಮೇಕಪ್ ಹಾಕಿಕೊಳ್ಳುವುದಕ್ಕೆ ಎರಡು ಗಂಟೆ ಆಗೋದು. ತೆಗೆಯೋದಕ್ಕೆ 45 ನಿಮಿಷ ಬೇಕಿತ್ತು. ಓಲ್ಡ್ ಗೆಟಪ್‌ನಲ್ಲಿ ಇದ್ದಾಗ ಅವರು ಊಟ ಮಾಡುತ್ತಿರಲಿಲ್ಲ. ಕಾರಣ ಏನಂದ್ರೆ, ಊಟ ಮಾಡುವುದಕ್ಕೆ ಆಗುತ್ತಿರಲಿಲ್ಲ. ಗಡ್ಡ, ಮೀಸೆ ಎಲ್ಲಾ ಇರುತ್ತೆ. ಸರಿಯಾಗಿ ಊಟ ಮಾಡುವುದಕ್ಕೆ ಆಗುತ್ತಿರಲಿಲ್ಲ. ಅವರು ಯಾವಾಗಲೂ ಮಧ್ಯಾಹ್ನ ಊಟ ಬಿಟ್ಟೇ ಶೂಟಿಂಗ್ ಮಾಡೋರು." ಎಂದು ಹೇಳಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಈ ಓಲ್ಡ್ ಗೆಟಪ್ ಬಗ್ಗೆ ಮಾತನಾಡಿದ್ದು, "ಲುಕ್ ಅಂದಾಗ, ಒಂದು ಯಂಗ್ ಗೆಟಪ್ ಇದೆ. ಇನ್ನೊಂದು ಓಲ್ಡ್ ಗೆಟಪ್ ಇದೆ. ಯಂಗ್ ಗೆಟಪ್‌ಗೆ ಪಟ ಪಟ ಅಂತ ಆಗೋಯ್ತು. ಆದರೆ, ಓಲ್ಡ್ ಗೆಟಪ್ ಹಾಕಬೇಕಿದ್ದರೆ, ಒಂದೂ ಒಂದೂವರೆ ಗಂಟೆ ತೆಗೆದುಕೊಳ್ಳುತ್ತಿದ್ದೆ. ಯಾಕಂದ್ರೆ, ಮುಖವೆಲ್ಲ ಸುಕ್ಕು ಮಾಡಬೇಕು. ಒಂದು ಲೋಷನ್ ಬರುತ್ತೆ ಅದನ್ನು ಹಚ್ಚಿದರೇ ಮಾತ್ರ ರಿಂಕಲ್ ಬರುತ್ತೆ." ಅಂತ ಓಲ್ಡ್ ಗೆಟಪ್ ಬಗ್ಗೆ ರಿವೀಲ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.