ಕೊನೆಗೊ ಫಿಕ್ಸ್ ಆಯ್ತು ದೀಪಿಕಾ-ರಣವೀರ್ ಮದುವೆ! ಇಲ್ಲಿದೆ ವೆಡ್ಡಿಂಗ್ ಕಾರ್ಡ್

ಬಾಲಿವುಡ್ ನ ಪ್ರಣಯ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ ಸಿಂಗ್ ಈಗ ಮದುವೆಯಾಗುತ್ತಿರುವ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ.

Last Updated : Oct 21, 2018, 04:56 PM IST
ಕೊನೆಗೊ ಫಿಕ್ಸ್ ಆಯ್ತು ದೀಪಿಕಾ-ರಣವೀರ್ ಮದುವೆ! ಇಲ್ಲಿದೆ ವೆಡ್ಡಿಂಗ್ ಕಾರ್ಡ್   title=

ನವದೆಹಲಿ: ಬಾಲಿವುಡ್ ನ ಪ್ರಣಯ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ ಸಿಂಗ್ ಈಗ ಮದುವೆಯಾಗುತ್ತಿರುವ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ.

ಹೌದು, ಈ ವಿಷಯವನ್ನು ಈಗ ಸ್ವತಃ ದೀಪಿಕಾ ಪಡುಕೋಣೆ  ತಮ್ಮ ಟ್ವೀಟರ್ ಖಾತೆಯಲ್ಲಿ ಘೋಷಿಸಿಕೊಂಡಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ನಲ್ಲಿರುವ ಆಮಂತ್ರಣ ಪತ್ರಿಕೆಯಲ್ಲಿ ಅವರು ಇದೆ ನವಂಬರ್ 14 ಮತ್ತು 15 ರಂದು ಮದುವೆ ಕಾರ್ಯಕ್ರಮ ನಡೆಯಲಿದೆ ಎಂದು ಘೋಷಿಸಿಕೊಂಡಿದ್ದಾರೆ. 

ಈ ಹಿಂದೆ ಹಲವಾರು ಬಾರಿ ಮದುವೆಯ ದಿನಾಂಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ  ಸಾಕಷ್ಟು ಚರ್ಚೆಯಾಗಿತ್ತು ಫಿಲಂಫೇರ್ ನಿಯತಕಾಲಿಕೆ ಅಂತು  ನವಂಬರ್ 19ಕ್ಕೆ ಈ ಜೋಡಿಗಳು ಮದುವೆಯಾಗುತ್ತಾರೆ ಎಂದು ಆಗಲೇ ದಿನಾಂಕವನ್ನು ಕೂಡ ಅಂತಿಮಗೊಳಿಸಿಬಿಟ್ಟಿತ್ತು.ಈಗ ಎಲ್ಲ ಊಹಾಪೋಹಗಳಿಗೆ ತೆರೆಬಿದ್ದಿದ್ದು ಇಬ್ಬರು ಈಗ ಮದುವೆ ಯಾಗುವ ದಿನಾಂಕ ಅಧಿಕೃತವಾಗಿ ನಿಗದಿಯಾಗಿದೆ.

ಇತ್ತೀಚಿಗೆ ಕರಣ್ ಜೋಹರ್ ಅವರ ತಿರಸ್ಕರಿಸುವ ಅಥವಾ ಸ್ವೀಕರಿಸು ಎನ್ನುವ ಟ್ವಿಟ್ಟರ್ ಗೇಮ್ ನಲ್ಲಿ ರಣವೀರ್ ಸಿಂಗ್ ತಮ್ಮ ಮದುವೆಯಾಗುವ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದರು.
 

Trending News