ವಿಕ್ಕಿ -ಕತ್ರಿನಾ ಮದುವೆಯಲ್ಲಿ ರಣಬೀರ್ ಮತ್ತು ಸಲ್ಮಾನ್ ಖಾನ್..! ವೈರಲ್ ಆಗುತ್ತಿದೆ ಫೋಟೋ

ವಿಕ್ಕಿ-ಕತ್ರಿನಾ ಮದುವೆಯ ಸಮಾರಂಭದ ಒಂದು ಫೋಟೋ ವೈರಲ್ ಆಗುತ್ತಿದೆ. ಅದರಲ್ಲಿ ರಣಬೀರ್ ಕಪೂರ್  ಮತ್ತು ಸಲ್ಮಾನ್ ಖಾನ್ ಕೂಡ ಕಾಣಿಸಿಕೊಂಡಿದ್ದಾರೆ. 

Written by - Ranjitha R K | Last Updated : Dec 14, 2021, 09:21 AM IST
  • ವಿಕ್ಕಿ ಕತ್ರಿನಾ ಮದುವೆಯಲ್ಲಿ ರಣಬೀರ್?
  • ಮದುವೆಯಲ್ಲಿ ಹಾಜರಾಗಿದ್ದರಾ ಸಲ್ಮಾನ್ ?
  • ವೈರಲ್ ಆದ ಫೋಟೋ ಏನು ಹೇಳುತ್ತದೆ ?
ವಿಕ್ಕಿ -ಕತ್ರಿನಾ ಮದುವೆಯಲ್ಲಿ ರಣಬೀರ್ ಮತ್ತು ಸಲ್ಮಾನ್ ಖಾನ್..! ವೈರಲ್ ಆಗುತ್ತಿದೆ ಫೋಟೋ title=
ವಿಕ್ಕಿ ಕತ್ರಿನಾ ಮದುವೆಯಲ್ಲಿ ರಣಬೀರ್? (photo instagram)

ನವದೆಹಲಿ : ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ ವಿವಾಹವು (Katreena Kaif Weding) ರಾಯಲ್ ಶೈಲಿಯಲ್ಲಿ ನೆರವೇರಿದೆ. ನಟ ಮತ್ತು ನಟಿಯರು ಮದುವೆಗೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.  ಈ ಮಧ್ಯೆ, ವಿಕ್ಕಿ-ಕತ್ರಿನಾ ಮದುವೆಯ ( Vicky-Katreena wedding) ಸಮಾರಂಭದ ಒಂದು ಫೋಟೋ ವೈರಲ್ ಆಗುತ್ತಿದೆ. ಅದರಲ್ಲಿ ರಣಬೀರ್ ಕಪೂರ್ ಕೂಡ ಕಾಣಿಸಿಕೊಂಡಿದ್ದಾರೆ. ಹೌದು, ರಣಬೀರ್ ವಿಕ್ಕಿಯನ್ನು ದಿಟ್ಟಿಸುತ್ತಿರುವ ಮೆಹಂದಿಯ ಫೋಟೋವೊಂದು (VIcky Katreena wedding photo) ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  

ಮದುವೆಯಲ್ಲಿ ಹಾಜರಾಗಿದ್ದರಾ ರಣಬೀರ್ ಕಪೂರ್?
ವಿಕ್ಕಿ ಕೌಶಲ್  (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಡಿಸೆಂಬರ್ 9 ರಂದು ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮದುವೆಗೆ ಬರುವ ಅತಿಥಿಗಳಿಗೆ ದಂಪತಿಗಳು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ್ದರು. ವಿಕ್ಕಿ-ಕತ್ರಿನಾ ಮದುವೆಗೆ (Vicky Katrina Wedding) ಹಾಜರಾದವರು ಫೋನ್ ತೆಗೆದುಕೊಂಡು ಹೋಗುವಂತಿರಲಿಲ್ಲ. ಅನಗತ್ಯ ಚಿತ್ರಗಳು ವೈರಲ್ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಇತ್ತೀಚಿನ ದಿನಗಳಲ್ಲಿ ಫೋಟೋವೊಂದು ವೈರಲ್ ಆಗುತ್ತಿದೆ.  ಇದರಲ್ಲಿ ರಣಬೀರ್ ಕಪೂರ್ (Ranbir Kapoor)  ವಿಕ್ಕಿ ಕತ್ರಿನಾ ಅವರ ಮೆಹಂದಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : ಕರೀನಾ ಕಪೂರ್ ಮತ್ತು ಅಮೃತಾ ಅರೋರಾ ಕರೋನಾ ಪಾಸಿಟಿವ್, ಸೂಪರ್ ಸ್ಪ್ರೆಡರ್ ಆಗುವ ಆತಂಕ

ನಕಲಿ ಫೋಟೋ :
ರಣಬೀರ್ ಕಪೂರ್ ನಿಜವಾಗಿಯೂ ವಿಕ್ಕಿ-ಕತ್ರಿನಾ ಮದುವೆಗೆ (Vicky Katrina Wedding) ಹಾಜರಾಗಿದ್ದಾರಾ ಎಂದು ಕೇಳಿದರೆ ಇದಕ್ಕೆ ಉತ್ತರ ಇಲ್ಲ.  ಹಾಗಿದ್ದರೆ ವವೈರಲ್ ಆಗುತ್ತಿರುವ ಫೋಟೋ ಯಾವುದು? ಈ ಫೋಟೋವನ್ನು ಅನ್‌ಸೀನ್‌ಫ್ರೆಂಡ್ ಹೆಸರಿನ ಇನ್‌ಸ್ಟಾ ಪುಟದಲ್ಲಿ ಹಂಚಿಕೊಳ್ಳಲಾಗಿದೆ.  ಈ ಪೇಜ್ ನಲ್ಲಿ ಮಾರ್ಫಿಂಗ್ ಮೂಲಕ ಹಂಚಿಕೊಳ್ಳಲಾದ ಅನೇಕ ರೀತಿಯ ಫೋಟೋಗಳಿವೆ. 

 

ಫೋಟೋದಲ್ಲೂ ಕಾಣಿಸಿಕೊಂಡಿದ್ದಾರೆ ಸಲ್ಮಾನ್ :
ಈ ಫೋಟೋದಲ್ಲಿ ಸಲ್ಮಾನ್ ಖಾನ್ (Salman Khan) ಕೂಡ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್, ಕತ್ರಿನಾ ನೃತ್ಯವನ್ನು ನೋಡುತ್ತಿರುವಂತೆ ಕಾಣುತ್ತದೆ. ಈ ಚಿತ್ರವನ್ನು ಮೊದಲು ನೋಡುವಾಗ ಯಾರು ಬೇಕಾದರೂ ಮೋಸ ಹೋಗಬಹುದು. ಆದರೆ,  ಕೂಲಂಕುಷವಾಗಿ ಪರಿಶೀಲಿಸದರೆ, ಇದರ  ಸತ್ಯಾಸತ್ಯತೆ ಸ್ಪಷ್ಟವಾಗುತ್ತದೆ. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ (Katrina Kaif) ತಮ್ಮ ಸಂಬಂಧವನ್ನು ದೀರ್ಘಕಾಲದವರೆಗೆ ಮರೆಮಾಡಿದ್ದರು. ಮದುವೆಯ ಸುದ್ದಿಯ ಬಗ್ಗೆ ಕೇಳಿದಾಗಲೂ, ಈ ಜೋಡಿ ಎಲ್ಲಿಯೂ ಸರಿಯಾಗಿ ಉತ್ತರಿಸಿಯೇ ಇರಲಿಲ್ಲ. ಇದೀಗ ಈ ಜೋಡಿಯ ರಾಯಲ್ ಮದುವೆ ಇಡೀ ಇಂಡಸ್ಟ್ರಿಯಲ್ಲಿ ಚರ್ಚೆಯಾಗಿದೆ. 

ಇದನ್ನೂ ಓದಿ : "ಈ ಸಮಯಕ್ಕಾಗಿ 21 ವರ್ಷಗಳಿಂದ ಕಾಯುತ್ತಿದ್ದೆವು, ಶತಕೋಟಿ ಕನಸುಗಳು ನನಸಾಗಿವೆ": ಲಾರಾ ದತ್ತಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News