ಮುಂಬೈ: ಕರೋನಾ (Coronavirus) ಅಪಾಯ ಕಡಿಮೆಯಾಗಿದೆ, ಆದರೆ ಸಂಪೂರ್ಣವಾಗಿ ನಿರ್ನಾಮವಾಗಿಲ್ಲ. ಮಹಾರಾಷ್ಟ್ರದಲ್ಲಿ ಎರಡನೇ ಅಲೆ ಅತಿ ಹೆಚ್ಚು ಪರಿಣಾಮ ಬೀರಿತ್ತು. ಇತ್ತೀಚಿನ ಮಾಹಿತಿಯ ಪ್ರಕಾರ, ನಟಿಯರಾದ ಕರೀನಾ ಕಪೂರ್ ಖಾನ್ (Kareena Kapoor Khan) ಮತ್ತು ಅಮೃತಾ ಅರೋರಾ (Amrutha Arora) ಅವರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ.
BMC ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಕರೀನಾ ಕಪೂರ್ (Kareena Kapoor) ಮತ್ತು ಅಮೃತಾ ಅರೋರಾ ಸೂಪರ್ ಸ್ಪ್ರೆಡರ್ ಆಗಿರುವ ಸಾಧ್ಯತೆಯೂ ಇದೆ. ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದು, ಅವರು ಅನೇಕ ಬಾಲಿವುಡ್ (Bollywood) ತಾರೆಯರನ್ನು ನಿರಂತರವಾಗಿ ಭೇಟಿಯಾಗುತ್ತಿದ್ದಾರೆ. ಅಲ್ಲದೆ, ಕಳೆದ ಕೆಲವು ದಿನಗಳಲ್ಲಿ ಇಬ್ಬರು ನಟಿಯರು ಬಾಲಿವುಡ್ನ ಅನೇಕ ಪಾರ್ಟಿಗಳಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ : Miss Universe 2021: ಭಾರತದ ಹರ್ನಾಜ್ ಸಂಧುಗೆ ಒಲಿದ 'ಭುವನ ಸುಂದರಿ 2021' ಪಟ್ಟ
BMC ಅವರ ಸಂಪರ್ಕಗಳನ್ನು ಪತ್ತೆಹಚ್ಚಲು ಪ್ರಾರಂಭಿಸಿದೆ. ಅವರ ಸಂಪರ್ಕ ಪತ್ತೆ ಹಚ್ಚಿದ ಬಳಿಕ ನಡೆಸಿರುವ ಕರೋನ ಟೆಸ್ಟ್ (Corona test) ವರದಿಯು ಇಂದು ಕೈ ಸೇರುವ ಸಾಧ್ಯತೆ ಇದೆ. ಇಬ್ಬರೂ ನಟಿಯರಲ್ಲಿ ಕರೋನ ಪಾಸಿಟಿವ್ ಕಂಡು ಬಂದ ನಂತರ ಬಾಲಿವುಡ್ ನಲ್ಲಿ ಸಂಚಲನ ಮೂಡಿದೆ. ಇವರಿಬ್ಬರ ಸಂಪರ್ಕಕ್ಕೆ ಬಂದವರಿಗೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸುವಂತೆ ಬಿಎಂಸಿಯಿಂದ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ಇವರನ್ನು ಇತ್ತೀಚೆಗೆ ಭೇಟಿಯಾದ ವ್ಯಕ್ತಿಗಳ ವಿವರ ಹಾಗೂ ಅವರ ಪತ್ತೆ ಕಾರ್ಯ ನಡೆಯುತ್ತಿದೆ.
ಕರೀನಾ ಕಪೂರ್ ಮತ್ತು ಅಮೃತಾ ಅರೋರಾ ಹೊರತುಪಡಿಸಿ, ಕರಿಷ್ಮಾ ಕಪೂರ್ (Karishama Kapoor), ಮಲೈಕಾ ಅರೋರಾ (Malaika Arora) ಹೆಚ್ಚಾಗಿ ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಸಂಪರ್ಕಕ್ಕೆ ಬಂದ ಬಾಲಿವುಡ್ ನ ಇತರ ತಾರೆಯರಿಗೂ ಸೋಂಕು ತಗುಲಿರುವ ಭೀತಿ ಎದುರಾಗಿದೆ.
ಇದನ್ನೂ ಓದಿ : Harbhajan Singh tattoo:ಎದೆಯ ಮೇಲೆ ರಜನಿಕಾಂತ್ ಹಚ್ಚೆ ಹಾಕಿಸಿಕೊಂಡ ಹರ್ಭಜನ್ ಸಿಂಗ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.