Dr Rajkumar Birthday: ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಡಾ.ರಾಜ್ ಸ್ಮರಣೆ

ನಟಸಾರ್ವಭೌಮ, ಕನ್ನಡಿಗರ ಆರಾಧ್ಯ ದೈವ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ ಡಾ.ರಾಜ್ ಕುಮಾರ್ ಜನ್ಮದಿನದಂದು ಅವರಿಗೆ ಅಭಿಮಾನಪೂರ್ವಕ ನಮನಗಳು ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

Written by - Zee Kannada News Desk | Last Updated : Apr 24, 2022, 10:53 AM IST
  • ಇಂದು ಗಾನ ಗಂಧರ್ವ, ಪದ್ಮ ಭೂಷಣ, ಕರ್ನಾಟಕ ರತ್ನ ವರನಟ ಡಾ.ರಾಜ್ ಕುಮಾರ್ 94 ಹುಟ್ಟುಹಬ್ಬ
  • ನಾಡು ಕಂಡ ಶ್ರೇಷ್ಠ ಸಾಧಕ ಕಲಾವಿದನನ್ನು ಸ್ಮರಿಸಿದ ವಿವಿಧ ಕ್ಷೇತ್ರದ ಗಣ್ಯರು
  • ಸಿಎಂ ಬಸವರಾಜ್ ಬೊಮ್ಮಾಯಿ, ಸಿದ್ದರಾಮಯ್ಯ, ಎಚ್‌ಡಿಕೆ, ಯಡಿಯೂರಪ್ಪರಿಂದ ಡಾ.ರಾಜ್ ಸ್ಮರಣೆ
Dr Rajkumar Birthday: ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಡಾ.ರಾಜ್ ಸ್ಮರಣೆ title=
ವರನಟ ಡಾ.ರಾಜ್ ಕುಮಾರ್ 94 ಹುಟ್ಟುಹಬ್ಬ

ಬೆಂಗಳೂರು: ಇಂದು ಗಾನ ಗಂಧರ್ವ, ಪದ್ಮ ಭೂಷಣ, ಕರ್ನಾಟಕ ರತ್ನ ವರನಟ ಡಾ.ರಾಜ್ ಕುಮಾರ್ ಅವರ 94 ಹುಟ್ಟುಹಬ್ಬ. ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಡಾ.ರಾಜ್ ಅವರನ್ನು ಸ್ಮರಿಸಿದ್ದಾರೆ.

‘ನಟಸಾರ್ವಭೌಮ, ಕನ್ನಡಿಗರ ಆರಾಧ್ಯ ದೈವ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ ಡಾ.ರಾಜ್ ಕುಮಾರ್ ಜನ್ಮದಿನದಂದು ಅವರಿಗೆ ಅಭಿಮಾನಪೂರ್ವಕ ನಮನಗಳು. ಕನ್ನಡ ಹಾಗೂ ಕನ್ನಡಿಗರ ಅಸ್ಮಿತೆಯಾಗಿ, ತೆರೆಯ ಮೇಲೆ ತಮ್ಮ ಅದ್ಭುತ ನಟನೆಯಿಂದ, ತೆರೆಯ ಹಿಂದೆ ತಮ್ಮ ಹೃದಯವೈಶಾಲ್ಯತೆಯಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ಡಾ.ರಾಜ್ ಅವರು ಈ ನಾಡು, ನುಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು’ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ‘ಆದರ್ಶಯಮಯವಾದ ಬದುಕು ಮತ್ತು ಕಲಾಸೇವೆ ಮೂಲಕ ಸಾರ್ವಕಾಲಿಕ‌ ಮಾದರಿಯನ್ನು ಹಾಕಿಕೊಟ್ಟು ನಮ್ಮೆಲ್ಲ‌ ನಡೆ-ನುಡಿಯನ್ನು ಪ್ರಭಾವಿಸುತ್ತಲೇ ಇರುವ ನಾಡಿನ ಹೆಮ್ಮೆಯ ಪುರುಷೋತ್ತಮ ಮತ್ತು ‘ನಮ್ಮ ಕಾಡಿನ’ ಹಿರಿಯ ಡಾ.ರಾಜ್ ಕುಮಾರ್ ಎಂಬ ಚೇತನಕ್ಕೆ ಹುಟ್ಟುಹಬ್ಬದ ದಿನದ ಗೌರವ ಪೂರ್ವಕ ನಮನಗಳು’ ಎಂದು ಸ್ಮರಿಸಿದ್ದಾರೆ.

ಇದನ್ನೂ ಓದಿ: ಇಂದು ವರನಟ ಡಾ.ರಾಜ್ ಕುಮಾರ್ 94 ಹುಟ್ಟುಹಬ್ಬ: ಅಭಿಮಾನಿ ಸಂಘಗಳಿಂದ ರಥೋತ್ಸವ

‘ನಾಡು ಕಂಡ ಶ್ರೇಷ್ಠ ಸಾಧಕ ಕಲಾವಿದ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಜಯಂತಿಯಂದು ಅವರಿಗೆ ಅಭಿಮಾನಪೂರ್ವಕ ನಮನಗಳು’ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಮರಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ‘ಕನ್ನಡಿಗರ ಮನೆ-ಮನಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಮಹಾನ್‌ ತಾರೆ, ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರತ್ನ, ಪದ್ಮಭೂಷಣ ಡಾ.ರಾಜ್‌ ಕುಮಾರ್‌ ಅವರ ಜಯಂತಿಯಂದು ಆ ಮೇರುನಟರಿಗೆ ನನ್ನ ಭಾವಪೂರ್ಣ ನಮನಗಳು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: 49ನೇ ವಸಂತಕ್ಕೆ ಕಾಲಿಟ್ಟ ಸಚಿನ್ ತೆಂಡೂಲ್ಕರ್: ‘ಗಾಡ್ ಆಫ್ ಕ್ರಿಕೆಟ್’ಗೆ ಶುಭಾಶಯಗಳ ಮಹಾಪೂರ

‘ಸಿನಿಮಾ ಎಂದರೆ ಮನರಂಜನೆಯಷ್ಟೇ ಅಲ್ಲ, ಸಮಾಜದ ಪಾಲಿನ ಚಿಕಿತ್ಸಕ ಮಾರ್ಗ ಎಂದು ನಂಬಿ ನಡೆದ ಭಾರತೀಯ ಚಿತ್ರರಂಗದ ಏಕೈಕ ಕಲಾಸಂತರು ಅವರು. ಈ ಕಾರಣಕ್ಕಾಗಿಯೇ ಅಣ್ಣಾವ್ರು ಅಜರಾಮರ. ಅವರ ಚಿತ್ರಗಳನ್ನೇ ನೋಡಿಕೊಂಡು ಬೆಳೆದ ನನ್ನ ಮೇಲೆ ಅವರ ಪ್ರಭಾವ ಹೆಚ್ಚು. ‘ಬಂಗಾರದ ಮನುಷ್ಯʼ ಚಿತ್ರವೇ ನಾನಿಂದು ಕೃಷಿಕನಾಗಲು ಪ್ರೇರಣೆ. ಕನ್ನಡಿಗರ ಸಾಕ್ಷಿಪ್ರಜ್ಞೆ, ಆಸ್ಮಿತೆ, ಶಕ್ತಿ, ಸ್ಫೂರ್ತಿಯ ಸೆಲೆಯೂ ಆಗಿರುವ ಡಾ.ರಾಜ್‌ ಅವರನ್ನು ಸದಾ  ಸ್ಮರಿಸುತ್ತಾ ಅವರ ಆದರ್ಶ ಹೆಜ್ಜೆಗಳಲ್ಲಿ ಶ್ರದ್ಧೆಯಿಂದ ನಡೆಯೋಣ. ನಾಡು, ನುಡಿ, ನೆಲ, ಜಲ ವಿಚಾರಗಳಲ್ಲಿ ಅಣ್ಣಾವ್ರು ಹೊಂದಿದ್ದ ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸೋಣ’ವೆಂದು ಕರೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News