Drama Juniors Grand Finale: ಡ್ರಾಮಾ ಜೂನಿಯರ್ಸ್ ಸೀಸನ್ 4 ಗ್ರಾಂಡ್ ಫಿನಾಲೆ

Drama Juniors Season 4 Grand Finale : ಕನ್ನಡದ ನಂಬರ್ 1 ವಾಹಿನಿಯಾದ ಜೀ ಕನ್ನಡ. ವೀಕ್ಷಕರಿಗೆ ಸದಾಭಿರುಚಿ ನೀಡುವುದರಲ್ಲಿ ಈಗಲೂ ಮುಂಚೂಣಿಯಲ್ಲಿದೆ ದಕ್ಷಿಣ ಭಾರತದ ಮಕ್ಕಳ ಅತಿ ದೊಡ್ಡ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್. 

Written by - Zee Kannada News Desk | Last Updated : Aug 21, 2022, 12:27 PM IST
  • ಕನ್ನಡದ ನಂಬರ್ 1 ವಾಹಿನಿಯಾದ ಜೀ ಕನ್ನಡ
  • ವೀಕ್ಷಕರಿಗೆ ಸದಾಭಿರುಚಿ ನೀಡುವುದರಲ್ಲಿ ಈಗಲೂ ಮುಂಚೂಣಿಯಲ್ಲಿದೆ
  • ಡ್ರಾಮಾ ಜೂನಿಯರ್ಸ್ ಸೀಸನ್ 4 ಗ್ರಾಂಡ್ ಫಿನಾಲೆ
Drama Juniors Grand Finale: ಡ್ರಾಮಾ ಜೂನಿಯರ್ಸ್ ಸೀಸನ್ 4 ಗ್ರಾಂಡ್ ಫಿನಾಲೆ  title=
ಡ್ರಾಮಾ ಜೂನಿಯರ್ಸ್

Drama Juniors Season 4 Grand Finale : ಕನ್ನಡದ ನಂಬರ್ 1 ವಾಹಿನಿಯಾದ ಜೀ ಕನ್ನಡ. ವೀಕ್ಷಕರಿಗೆ ಸದಾಭಿರುಚಿ ನೀಡುವುದರಲ್ಲಿ ಈಗಲೂ ಮುಂಚೂಣಿಯಲ್ಲಿದೆ ದಕ್ಷಿಣ ಭಾರತದ ಮಕ್ಕಳ ಅತಿ ದೊಡ್ಡ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್. ಇಲ್ಲಿಯವರೆಗೆ ಮೂರು ಆವೃತ್ತಿಗಳನ್ನು ಮುಗಿಸಿ ಈಗ ನಾಲ್ಕನೇ ಆವೃತ್ತಿಯ ಅಂತಿಮ ಗ್ರಾಂಡ್ ಫಿನಾಲೆ ಇದೆ ಭಾನುವಾರ ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ ಸಂಜೆ 6.00 ಕ್ಕೆ ಪ್ರಸಾರವಾಗಲಿದೆ. ಆರಂಭದಲ್ಲೇ 9.1 ರೇಟಿಂಗ್ ಪಡೆಯುವ ಮೂಲಕ ಭರ್ಜರಿ ಓಪನಿಂಗ್ ಪಡೆದ ಡ್ರಾಮಾ ಜೂನಿಯರ್ ಸೀಸನ್ 4. ನೋಡ ನೋಡುತ್ತಿದ್ದಂತೆಯೇ, ಇಂದು ಅಂತಿಮಘಟ್ಟ ತಲುಪಿದೆ. ಈ ಕಾರ್ಯಕ್ರಮದ ವಿಶೇಷವೇನೆಂದರೆ ಪ್ರತಿಬಾರಿಯಂತೆ ಈ ಬಾರಿಯೂ ನಿಜ ಸಾಧಕರನ್ನು ತಮ್ಮ ವೇದಿಕೆಯಲ್ಲಿ ಸ್ಕಿಟ್ ಮಾಡುವ ಮೂಲಕ ಒಂದು ಪರಿಚಯ ನೀಡಿ ಅವರನ್ನು ಡ್ರಾಮಾ ಜೂನಿಯರ್ಸ್ ವೇದಿಕೆಯಲ್ಲಿ ಸನ್ಮಾನಿಸಲಾಗುತ್ತಿತ್ತು.

ಇದನ್ನೂ ಓದಿ: Bigg Boss Kannada OTT : ‌ಬಿಗ್‌ ಬಾಸ್ ಮನೆಯಿಂದ‌ ಒಂದೇ ದಿನ ಇಬ್ಬರು ಸ್ಪರ್ಧಿಗಳು ಔಟ್!

ಇನ್ನ ಈ ಕಾರ್ಯಕ್ರಮದ ತೀರ್ಪುಗಾರರಾಗಿ ಈ ಬಾರಿ ರಚಿತಾ ರಾಮ್ ಲಕ್ಷ್ಮಿ ಅಮ್ಮ ಮತ್ತು ರವಿ ಸರ್ ರವರು ಮಕ್ಕಳನ್ನು ತಿದ್ದಿ-ತೀಡಿ ತಮ್ಮ ತೀರ್ಪುಗಳನ್ನು ಅಭೂತ ಪೂರ್ವವಾಗಿ ವ್ಯಕ್ತಪಡಿಸಿದ್ದಾರೆ. ಈ ಬಾರಿ ವಿವಿಧ ರೀತಿಯ ಹಾಸ್ಯ ದುಃಖ ಪೌರಾಣಿಕ ಮುಂತಾದ ರೀತಿಯ ಸ್ಕಿಟ್ಗಳನ್ನು ವೀಕ್ಷಕರ ಮುಂದೆ ತಂದಿರಿಸಿತ್ತು ಕರ್ನಾಟಕದ 31 ಜಿಲ್ಲೆಗಳಲ್ಲಿ ಮೆಗಾ ಆಡಿಷನ್ ನಡೆಸಿ ಅದರಲ್ಲಿ ದಿ ಬೆಸ್ಟ್ ಗಳನ್ನು ಸೆಲೆಕ್ಟ್ ಮಾಡಿ ಇಂದು ಫಿನಾಲೆಯಲ್ಲಿ ಟಾಪ್ 15 ಸ್ಪರ್ಧಿಗಳು ಸ್ಪರ್ಧಿಸಲಿದ್ದು ವಿಜಯದ ಕಿರೀಟ ಯಾರ ಮುಡಿಗೆರುವುದು ಎಂಬುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಕರ್ನಾಟಕದ ಪ್ರತಿ ಮನೆ ಮನ ತಲುಪುವುದರಲ್ಲಿ ಯಶಸ್ವಿಯಾಗಿರುವ ನಮ್ಮ ಡ್ರಾಮಾ ಪುಟಾಣಿಗಳು ನಿಮಗೆ ಸದಾ ಚಿರಋಣಿ. ಇದೇ ಭಾನುವಾರ ಸಂಜೆ 6.00 ರಿಂದ ರಾತ್ರಿ 10.00 ರವರೆಗೆ ಪ್ರಸಾರವಾಗಲಿದೆ ಡ್ರಾಮಾ ಜೂನಿಯರ್ಸ್ ಸೀಸನ್ 4 ಗ್ರಾಂಡ್ ಫಿನಾಲೆ.

ಇದನ್ನೂ ಓದಿ: Rajinikanth as Governor: ರಾಜ್ಯಪಾಲರಾಗಿ ನೇಮಕವಾಗಲಿದ್ದಾರಾ ರಜನಿಕಾಂತ್‌?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News