Drama Juniors Season-5 Finale: ಕಳೆದ 2೦ ವಾರಗಳಿಂದ ಮನೆಮಂದಿಯನ್ನೆಲ್ಲ ಮನರಂಜಿಸುತ್ತಿದ್ದ, ಮುದ್ದು ಮಕ್ಕಳ ನೆಚ್ಚಿನ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಸೀಸನ್-5 ಫಿನಾಲೆ ಹಂತವನ್ನ ತಲುಪಿದೆ.
ಇದನ್ನೂ ಓದಿ: World Liver Day: ಯಕೃತ್ತಿನ ಆರೋಗ್ಯಕ್ಕಾಗಿ ಮನೆಯಲ್ಲಿಯೇ ತಯಾರಿಸಿ ಈ ಅದ್ಭುತ ಪಾನಿಯಾಗಳು!
ಮೂವತ್ತೊಂದು ಜಿಲ್ಲೆಗಳಿಂದ ಆಯ್ದು ತಂದ ನೂರಾರು ಬಾಲ ಪ್ರತಿಭೆಗಳನ್ನ ನಿರಂತರವಾಗಿ ತಿದ್ದಿತೀಡಿ ಮಾರ್ಗದರ್ಶನ ಮಾಡುವ ಮೂಲಕ, ಮಕ್ಕಳಲ್ಲಿರುವ ನಟನಾ ಪ್ರತಿಭೆಗೆ ದೊಡ್ಡ ವೇದಿಕೆಯನ್ನೇ ನೀಡಿತ್ತು ಡ್ರಾಮಾ ಜೂನಿಯರ್ಸ್ ಸೀಸನ್-5. ಈ ಬಾರಿ 200ಕ್ಕೂ ಹೆಚ್ಚು ನಾಟಕಗಳ ಮೂಲಕ ಕರುನಾಡನ್ನ ಮನರಂಜಿಸಿದ್ದಲ್ಲದೆ, ಹಾಸ್ಯ ನಾಟಕಗಳು, ಪೌರಾಣಿಕ ಕಥೆಗಳ ಜೊತೆ ಇತಿಹಾಸ ಪುರುಷರ ಕಥೆಗಳನ್ನು ಒಳಗೊಂಡ ಈ ನೆಲದ ಸಂಸ್ಕೃತಿಯನ್ನ ಎತ್ತಿಹಿಡಿಯುವಂತಹ ಕಲಾ ಪ್ರಕಾರಗಳನ್ನ ತೆರೆಯ ಮೇಲೆ ತಂದು ಜನರಿಗೆ ಪರಿಚಯಿಸಿದ ಖ್ಯಾತಿಯನ್ನ ಹೊಂದಿದೆ.
ಭಾರತದ ಕಿರುತೆರೆ ಇತಿಹಾಸದಲ್ಲೆ ಮೊಟ್ಟ ಮೊದಲ ಬಾರಿಗೆ AR ತಂತ್ರಜ್ಞಾನ ಬಳಸಿ ತನ್ನ ಸಂಚಿಕೆಯೊಂದನ್ನ ಚಿತ್ರೀಕರಿಸಿದ ರಿಯಾಲಿಟಿ ಶೋ ಎಂಬ ಖ್ಯಾತಿಯನ್ನ ಡ್ರಾಮಾ ಜೂನಿಯರ್ಸ್ ಸೀಸನ್-5 ಪಡೆದಿದೆ.
ಕ್ರೇಜಿಸ್ಟಾರ್ ರವಿಚಂದ್ರನ್, ಹಿರಿಯ ನಟಿ ಲಕ್ಷ್ಮೀ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಮಾರ್ಗದರ್ಶನದ ಜೊತೆ ಈ ಸೀಸನ್ನಿನ ವಿಶೇಷತೆಯೆಂಬಂತೆ ಅರುಣ್ ಸಾಗರ್ ಮತ್ತು ರಾಜು ತಾಳಿಕೋಟೆಯಂತಹ ಹಿರಿಯ ರಂಗಕರ್ಮಿಗಳು ಡ್ರಾಮಾ ಜೂನಿಯರ್ಸ್ ವೇದಿಕೆಯ ಕಳೆಯನ್ನ ಹೆಚ್ಚಿಸಿದ್ದಲ್ಲದೆ, ಮಕ್ಕಳು ಅಭಿನಯದಲ್ಲಿ ಪರಿಣಿತಿ ಹೊಂದುವ ಕೆಲಸದಲ್ಲಿ ಸಹಕಾರಿಯಾದರು.
14 ಮಕ್ಕಳು 20 ವಾರಗಳ ಕಾಲ ಹಲವು ಪಾತ್ರಗಳನ್ನ ನಿರ್ವಹಿಸುವ ಮೂಲಕ ಕಾರ್ಯಕ್ರಮವನ್ನ ವೀಕ್ಷಿಸುವ ಮನೆಮಂದಿಗೆಲ್ಲ ಮನರಂಜನೆಯ ಜೊತೆ ಮಾಹಿತಿಯನ್ನು ಕೊಟ್ಟ ಡ್ರಾಮಾ ಜೂನಿಯರ್ಸ್ ಈ ಬಾರಿ ತನ್ನ ಗ್ರ್ಯಾಂಡ್ ಫಿನಾಲೆಯಲ್ಲಿ ಮತ್ತಷ್ಟು ರೋಚಕ ಕಥೆಗಳನ್ನ ಒಳಗೊಂಡ ನಾಟಕಗಳನ್ನ ತರುವ ತಯಾರಿ ಮಾಡಿಕೊಂಡಿದೆ.
ಫಿನಾಲೆ ವೇದಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಆಲ್ ಟೈಮ್ ಹಿಟ್ ಸಿನಿಮಾ ಪ್ರೇಮ ಲೋಕವನ್ನ ರಿಕ್ರಿಯೇಟ್ ಮಾಡುವ ಮೂಲಕ ಮನರಂಜನೆಯನ್ನ ಮತ್ತಷ್ಟು ಹೆಚ್ಚು ಮಾಡಲಾಗಿದ್ದು, ಈ ಸಂಚಿಕೆಯನ್ನ ವೀಕ್ಷಿಸಲು ಚಿತ್ರರಂಗದ ಹಲವು ನಟನಟಿಯರ ಆಗಿಮಿಸಿ ಕಾರ್ಯಕ್ರಮದ ಮೆರುಗನ್ನ ಹೆಚ್ಚಿಸಿದರು.
ಇದನ್ನೂ ಓದಿ: ತೆರೆಮೇಲೆ ಕುಡುಬಿ ಜನಜೀವನ ಅನಾವರಣ..’ಗುಂಮ್ಟಿ’ ಟೈಟಲ್ ಪೋಸ್ಟರ್ ರಿಲೀಸ್!!
14 ಮಕ್ಕಳ ಪೈಕಿ ಯಾರ ಪಾಲಿಗೆ ಡ್ರಾಮಾ ಜೂನಿಯರ್ಸ್ ಪಟ್ಟ ಎಂಬ ಪ್ರಶ್ನೆಗೆ 21-4-2024ರ ಭಾನುವಾರ ಸಂಜೆ 7 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ರಾಮಾ ಜೂನಿಯರ್ಸ್ ಸೀಸನ್-5 ಗ್ರ್ಯಾಂಡ್ ಫಿನಾಲೆಯ ಮಹಾಸಂಚಿಕೆ ನೀಡಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.